{"product_id":"neena-matagathi-stories-arjun-devaladakere-kannada-book","title":"ನೀನಾ ಮಾಟಗಾತಿ?","description":"\u003cp\u003eಪ್ರೀತಿಯ ಓದುಗ ದೊರೆಗಳೇ,\u003cbr\u003eಮಿಕ್ಸ್ \u0026amp; ಮ್ಯಾಚ್ ಎನ್ನುವ ನೂರು ಕಥೆಗಳ ಗುಚ್ಚವನ್ನ ನಿಮ್ಮ ಕೈಯಲ್ಲಿಟ್ಟು ವರುಷ ತುಂಬಿದ ಸಂಧರ್ಭದಲ್ಲಿ, ಮತ್ತೊಂದು ಕಥಾ ಸಂಕಲನದೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಅಲ್ಲಿ ನೂರು ಸಣ್ಣ ಕಥೆಗಳನ್ನ ಓದಿದ್ದೀರಿ. ಇಲ್ಲಿ ಓದುಗರೇ ಅಭಿಪ್ರಾಯ ಪಟ್ಟಂತೆ ಕಾದಂಬರಿಯಾಗಬಹುದಾದ ಹನ್ನೊಂದು ನೀಳ್ಗತೆಗಳನ್ನ ನಿಮ್ಮ ಮುಂದಿಡುತ್ತಿದ್ದೇನೆ. ಶೀರ್ಷಿಕೆಯ ಅಡಿಬರಹವೇ ಹೇಳುವಂತೆ ಇದು ಮಂತ್ರ-ತಂತ್ರದ ಕಥೆಗಳು. ಇಲ್ಲಿ ಆಕರ್ಷಣೆಗೆ ಬಲಿಬಿದ್ದು ಮಂತ್ರಗಳ ಹಿಂದೆ ಹೋದವರ ಕಥೆಗಳ ಜೊತೆಗೆ,  ಸೇಡಿನ ಕೈ ಗೊಂಬೆಯಾಗಿ ತಂತ್ರದ ಹಾದಿ ಹಿಡಿದವರ ಕಥೆಗಳೂ ಇವೆ. ಕಥೆಗಳ ಸನ್ನಿವೇಶಕ್ಕಿಂತ, ಕಥೆಯ ಸಾರಾಂಶ ನಿಮ್ಮ ತರ್ಕಗಳನ್ನ ಕದಲಿಸುವುದು ಖಂಡಿತ. ಮಂತ್ರ-ತಂತ್ರದ ಲೋಕವಿದೆಯೇ ಇಲ್ಲವೇ ಎನ್ನುವ ಪ್ರಶ್ನೆಗೆ, “ದೇವರಿದ್ದಾನೆ ಎಂದ ಮೇಲೆ ದೆವ್ವವೂ ಇರಬೇಕು” ಎನ್ನುವ ಉತ್ತರದೊಂದಿಗೆ ಕಥೆಗಳನ್ನ ಓದಿದರೆ, ಕಥೆಗಳು ನಿಮಗೆ ಇನ್ನಷ್ಟು ಹತ್ತಿರವಾಗಬಹುದು. ಒಂದೆರೆಡು ಗಂಟೆಗಳಲ್ಲಿ ಓದಿ ಮುಗಿಸಬಹುದಾದ  ಸಣ್ಣ ಕಥಾ ಸಂಕಲನವಿದು. ನಿಮ್ಮ  ಓದಿನ ಹಸಿವನ್ನ ಹೆಚ್ಚಿಸಲು, ಓದಿನೆಡೆಗೆ ನಿಮ್ಮನ್ನ ಸೆಳೆಯಲು ಈ ಕಥೆಗಳು ಖಂಡಿತ ಪರಿಣಾಮಕಾರಿಯಾಗುತ್ತವೆ ಎನ್ನುವುದು ನನ್ನ ನಂಬಿಕೆ. ಕಾದಂಬರಿ ಲೋಕದ ಅರ್ಜುನ್ ದೇವಾಲದಕೆರೆ ನಿಮಗಿಲ್ಲಿ ಸಿಗುವುದಿಲ್ಲ, ಬದಲಿಗೆ ಕಥೆ ಹೇಳುವ ಅರ್ಜುನ್ ದೇವಾಲದಕೆರೆಯನ್ನ ಮಾತ್ರ ಕಾಣುತ್ತೀರಿ. ಇಲ್ಲಿರುವ ಎಲ್ಲಾ ಕಥೆಗಳು, ಕಾಲ್ಪನಿಕ ಮತ್ತು ಮನೋರಂಜನೆಗಾಗಿ ಶೃಜನಶೀಲತೆಯ ಹಗೇವಿನಿಂದ ಎದ್ದು ಬಂದ ಕಥೆಗಳಾಗಿವೆ. ಈ ಕಥೆಗಳು ನಿಮ್ಮ ಓದಿನ ಹಸಿವನ್ನ ಹೆಚ್ಚಿಸಲಿ ಎಂದು ಆಶಯಿಸುತ್ತಾ, ಈ ಕಥಾ ಸಂಕಲನವನ್ನ ನಿಮ್ಮ ಮಡಿಲಿಗೆ ಹಾಕಿ, ಮುಂದಿನ ಕಾದಂಬರಿಗೆ ಬೇಕಾದ ಸಂಶೋಧನೆಯೆಡೆಗೆ ಹೊರಡುತ್ತಿದ್ದೇನೆ. ಎಂದಿನಂತೆ ನಿಮ್ಮ ಪ್ರೀತಿ ನನ್ನ ಜೊತೆಗಿರಲಿ. ಪುಸ್ತಕ ಓದಿ ಅಭಿಪ್ರಾಯ ತಿಳಿಸಿ. \u003cbr\u003e-    ಅರ್ಜುನ್ ದೇವಾಲದಕೆರೆ\u003c\/p\u003e","brand":"Arjun Devaladakere","offers":[{"title":"Default Title","offer_id":49292629508355,"sku":"HB00007327","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NeenaMatagathi.jpg?v=1784459664","url":"https:\/\/harivubooks.com\/products\/neena-matagathi-stories-arjun-devaladakere-kannada-book","provider":"Harivu Books","version":"1.0","type":"link"}