{"product_id":"nayimoogu-collection-of-stories-satyakama-kannada-book","title":"ನಾಯಿಮೂಗು","description":"\u003cp\u003e'ಐನ್ಸ್ಟೈನ್ಗೆ ಆ್ಯಟಂ ಜೀವಿತಾವಧಿ ಸಂಶೋಧನೆ.\u003c\/p\u003e\n\u003cp\u003eಅದಕ್ಕಾಗಿ ಅವನು ಆಯುಷ್ಯ ಸಮೆದ. ಕೊನೆಗೊಂದು ದಿನ ತಪಸ್ಸು ಫಲಿಸಿತು.\u003c\/p\u003e\n\u003cp\u003eಊಟ, ನೀರು, ನಿದ್ರೆ ಕಳೆದ.\u003c\/p\u003e\n\u003cp\u003eಅವನು ತನ್ನ ಜೀವ ಕಂಡದ್ದನ್ನು ಹೊರಗೆ ಹೇಳಿದ.\u003c\/p\u003e\n\u003cp\u003eಆದರೆ ಈಗಿನ ಶಾಲೆಯ ಅಧ್ಯಾಪಕನಿಗೆ 'ಆ್ಯಟಂ' ಐದು ನಿಮಿಷದ ವಿವರಣೆ.\u003c\/p\u003e\n\u003cp\u003eಅದಕ್ಕಾಗಿ ಅವನು ಜೀವ ಸಮೆಯಬೇಕಾಗಿಲ್ಲ.\u003c\/p\u003e\n\u003cp\u003eಹೀಗೆ ಜ್ಞಾನ ಕಾಲದಿಂದ ಕಾಲಕ್ಕೆ ಸರಳವಾಗಬೇಕು.\u003c\/p\u003e\n\u003cp\u003eಇಲ್ಲದೆ ಹೋದರೆ ಅದು ಜ್ಞಾನವೇ ಅಲ್ಲ\"\u003c\/p\u003e\n\u003cp\u003eಇದು ಸತ್ಯಕಾಮರ ನಿಖರ ಮಾತು.\u003c\/p\u003e\n\u003cp\u003e\"ಜ್ಞಾನ ಭಾರವಲ್ಲ.\u003c\/p\u003e\n\u003cp\u003eಭಾರ ಎತ್ತುವ ನೊಗ ಹೊರುವುದು ಸಲ್ಲ.\u003c\/p\u003e\n\u003cp\u003eಬದುಕಿನ ಭಾರ ಕಳೆದು ಹಗುರಾಗಲು ಜ್ಞಾನ ಬೇಕು.\u003c\/p\u003e\n\u003cp\u003eಜ್ಞಾನದ ಭಾರದಿಂದ ಬರುವ ತಲೆಭಾರವೂ ಸಲ್ಲದು.\u003c\/p\u003e\n\u003cp\u003eಅದಕ್ಕೆ ದೊಡ್ಡವರು ಏನೂ ಇಟ್ಟುಕೊಳ್ಳುವುದಿಲ್ಲ.\" ಅದಕ್ಕೆ ಸತ್ಯಕಾಮರು ನಮಸ್ಕಾರವನ್ನು ಪ್ರತಿನಮಸ್ಕಾರದಿಂದಲೇ ಮರಳಿಸುತ್ತಿದ್ದರು.\u003c\/p\u003e\n\u003cp\u003eಮನುಷ್ಯನ ಬೆಳವಣಿಗೆಯ ದೊಡ್ಡ ಹಸಿವು 'ಅದು.'\u003c\/p\u003e\n\u003cp\u003eಆ 'ಅದು'ವೇ ಇದು ಆಗುವ ಬೆಳವಣಿಗೆ.\u003c\/p\u003e\n\u003cp\u003eಸತ್ಯಕಾಮರು ಅಂಥ ಹಾದಿ ನಡೆದವರು.\u003c\/p\u003e\n\u003cp\u003eನಡೆಯಬೇಕು ಎನ್ನುವವರಿಗೆ ಇಲ್ಲೊಂದು ತೋರು ಬೆರಳು ಇದೆ. \u003c\/p\u003e","brand":"Satyakama","offers":[{"title":"Default Title","offer_id":47602552602883,"sku":null,"price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NayiMoogu.jpg?v=1767683688","url":"https:\/\/harivubooks.com\/products\/nayimoogu-collection-of-stories-satyakama-kannada-book","provider":"Harivu Books","version":"1.0","type":"link"}