{"product_id":"navilugari-childrens-stories-kamnadiga-narayana-kannada-book","title":"ನವಿಲುಗರಿ","description":"\u003cp\u003eಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ಕೈಯನ್ನು ಗಲ್ಲಕ್ಕೆ ಊರಿ, ಮೈಯೆಲ್ಲಾ ಕಿವಿಯಾಗಿ, ನೀವು ಹೇಳುವ ಎಲ್ಲವನ್ನೂ ಕೇಳಿಸಿ ಕೊಳ್ಳುವ ಪುಟ್ಟ ಮಕ್ಕಳಿಗಾಗಿ ಇಲ್ಲಿನ ಕಥೆಗಳು ಬರೆಯಲ್ಪಟ್ಟಿವೆ. ಪ್ರಾಣಿ-ಪಕ್ಷಿಗಳು, ಪರಿಸರದಲ್ಲಿನ ಹಲವು ವಿಷಯಗಳನ್ನು ಕಥೆಗಳ ಮೂಲಕ ಮಕ್ಕಳಿಗೆ ಪರಿಚಯಿಸಲಾಗಿದೆ. ಇವು ಮಕ್ಕಳಿಗೆ ಖುಷಿ ಉಂಟುಮಾಡುತ್ತ ವಯಸ್ಸಿಗೆ ಸಹಜವಾಗಿರುವ ಕುತೂಹಲವನ್ನು ತಣಿಸುತ್ತವೆ. ಪ್ರಾಣಿ-ಪಕ್ಷಿಗಳ ಬಗ್ಗೆ ಅನುಕಂಪ ಮೂಡಿಸುತ್ತಲೇ ಪರಿಸರವನ್ನು ಪ್ರೀತಿಯಿಂದ ಕಾಣುವಂತೆ ಪ್ರೇರೇಪಿಸುತ್ತವೆ.\u003c\/p\u003e\n\u003cp\u003eಈ ಕಥೆಗಳನ್ನು ಬರೆದ ಕಂನಾಡಿಗಾ ನಾರಾಯಣ ಶಿವಮೊಗ್ಗೆಯ ಗಾಡಿಕೊಪ್ಪದವರು. ಎಂ.ಎ., ಎಲ್.ಎಲ್.ಎಂ., ಪದವೀಧರರು. ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕಥಾಸಂಕಲನ, ಕಾದಂಬರಿಗಳನ್ನು ಪ್ರಕಟಿಸಿದ್ದು ಕೆಲವು ಇಂಗ್ಲಿಷ್ಗೆ ಅನುವಾದಗೊಂಡಿವೆ. ಈ ಸಂಕಲನವೂ Peacock Quill ಎಂಬ ಹೆಸರಿನಲ್ಲಿ ಇಂಗ್ಲಿಷ್ನಲ್ಲಿ ಪ್ರಕಟವಾಗಿದೆ. \u003c\/p\u003e","brand":"Kamnadiga Narayana","offers":[{"title":"Default Title","offer_id":47615102222595,"sku":"HB00005503000","price":85.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Navilugari.jpg?v=1768053329","url":"https:\/\/harivubooks.com\/products\/navilugari-childrens-stories-kamnadiga-narayana-kannada-book","provider":"Harivu Books","version":"1.0","type":"link"}