{"product_id":"narayana-hrudaya-lakshmi-hrudaya-stotra-kannada-book","title":"ನಾರಾಯಣ ಹೃದಯ ಲಕ್ಷ್ಮಿ ಹೃದಯ ಸ್ತೋತ್ರ","description":"\u003cp\u003e* ಶ್ರೀಲಕ್ಷ್ಮೀ ನಾರಾಯಣರು ಆದಿ ದಂಪತಿಗಳಾಗಿ ಶ್ರೀಹರಿಯು ಮೂಲ ಪ್ರಕೃತಿ ಪುರುಷರಾಗಿ ಜಗದ ಪಾಲನಾಕ್ರಿಯೆಯನ್ನು, ಲೋಕ ಕಲ್ಯಾಣವನ್ನು ನಿರಂತರ ಮಾಡುತ್ತಾ ಅಗ್ರಪೂಜಿತರಾಗಿದ್ದಾರೆ.\u003c\/p\u003e\n\u003cp\u003e* ಲಕ್ಷ್ಮೀನಾರಾಯಣರ ಸ್ಮರಣೆ ಮಾತ್ರದಿಂದ ಸಕಲ ಕಷ್ಟಗಳೂ ನಿವಾರಣೆಗೊಂಡು ಇಹಲೋಕದ ಸಕಲ ಕಾಮನೆಗಳೂ ನೆರವೇರುತ್ತದೆ. ಇದಕ್ಕೆ ಭಗವಂತನಲ್ಲಿ ನಂಬಿಕೆ – ಶ್ರದ್ದೆ ಅತಿಮುಖ್ಯವೆನಿಸುತ್ತದೆ.\u003c\/p\u003e\n\u003cp\u003e* ದಾಸಸಾಹಿತ್ಯದಲ್ಲಿ ಶ್ರೀಹರಿಯ ಮಹಿಮೆಯನ್ನು ಮೆರೆದಿದ್ದು ಪ್ರಸ್ತುತ ಶ್ರೀಜಗನ್ನಾಥದಾಸರ ನಾರಾಯಣ ಹೃದಯ ಮತ್ತು ಲಕ್ಷ್ಮೀ ಹೃದಯ ಪದ್ಯರೂಪಿ - ಸ್ತೋತ್ರಗಳು ಶೀಘ್ರಫಲಪ್ರದ ಮತ್ತು ಜನಜನಿತ.\u003c\/p\u003e\n\u003cp\u003e* ಮೂಲ ಸಂಸ್ಕೃತದಲ್ಲಿ ಉತ್ತವಾಗಿರುವಂತಹ ಅಥರ್ವಣ ರಹಸ್ಯದ ಶ್ರೀಲಕ್ಷ್ಮೀನಾರಾಯಣರ ಹೃದಯ ಸ್ತೋತ್ರಗಳ ಪಾರಾಯಣ - ಪಠಣದಿಂದ ಅಧಿಕ ಶುಭಫಲಗಳು ಬರುತ್ತವೆ. ಆದರೆ ಸಂಸ್ಕೃತದ ಪದ್ಯಗಳನ್ನು ಉಚ್ಚರಿಸಲು ಕಷ್ಟಪಡುವ ಇಂದಿನ ಕಾಲದಲ್ಲಿ ಓದಿದ ಮಾತ್ರಕ್ಕೆ ಅರ್ಥವಾಗುವುದೇ? ಸಧ್ಯಕ್ಕೆ ಅದು ಕಬ್ಬಿಣದ ಕಡಲೆ ಅಷ್ಟೇ!\u003c\/p\u003e\n\u003cp\u003e* ಪ್ರಸ್ತುತ ಈ ಪುಸ್ತಕದಲ್ಲಿ ಶ್ರೀಜಗನ್ನಾಥದಾಸರಿಂದ ರಚಿಸಲ್ಪಟ್ಟ ನಾರಾಯಣ ಹೃದಯ, ಲಕ್ಷ್ಮೀಹೃದಯ ಪದ್ಯಗಳನ್ನು ದಪ್ಪಾಕ್ಷರದಲ್ಲಿ ಮುದ್ರಿಸಿ ನೀಡುತ್ತಿದ್ದೇವೆ. ಕನ್ನಡದಲ್ಲೇ ಈ ಪದ್ಯಗಳು ಇರುವುದರಿಂದ (ಸರಳವಾಗಿರುವುದರಿಂದ) ಇದನ್ನು ಹೇಳಿಕೊಂಡೇ ಅರ್ಥೈಸಬಹುದಾಗಿದೆ. ನಾವು ಏನನ್ನು ಹೇಳುತ್ತಿದ್ದೇವೆಂದು ಮೊದಲು ನಮಗೆ ತಿಳಿದಾಗಲೇ ಆ ಪ್ರಾರ್ಥನೆ ಸ್ತೋತ್ರಾದಿಗಳ ಫಲ ನಮ್ಮನ್ನು ಸೇರುತ್ತದೆ ಎಂಬುದು ಸತ್ಯಕ್ಕೆ ದೂರವಿಲ್ಲದ ವಿಚಾರ.\u003c\/p\u003e\n\u003cp\u003e* ಈ ಪುಸ್ತಕದ ಪಾರಾಯಣವು ಅತ್ಯಂತ ಶ್ರೇಯಸ್ಕರ. ಶುಭಫಲದಾಯಕ ಮತ್ತು ಮಂಗಳಕರವೆನಿಸುವುದು.\u003c\/p\u003e\n\u003cp\u003e* ಶ್ರದ್ದೆ - ಭಕ್ತಿಯಿಂದ ನಿತ್ಯಾಪ್ತಿಕಗಳ ನಂತರ ದೈವ ಸನ್ನಿಧಿಯಲ್ಲಿ ಏಕಚಿತ್ತದಿಂದ ಇದನ್ನು ಪಠಿಸಬೇಕು.\u003c\/p\u003e\n\u003cp\u003e* ಆಸ್ತಿಕರೆಲ್ಲರಿಗೂ ಈ ಸಂಗ್ರಹ ಪ್ರಿಯವೆನಿಸುವುದೆಂಬ ನಂಬಿಕೆಯೊಂದಿಗೆ.\u003c\/p\u003e","brand":"Srinidhi Publications","offers":[{"title":"Default Title","offer_id":47734754836739,"sku":null,"price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/nl.jpg?v=1770894975","url":"https:\/\/harivubooks.com\/products\/narayana-hrudaya-lakshmi-hrudaya-stotra-kannada-book","provider":"Harivu Books","version":"1.0","type":"link"}