{"product_id":"nanna-kitaki-essays-yogindra-maravanthe-kannada-book","title":"ನನ್ನ ಕಿಟಕಿ","description":"\u003cp\u003eನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಕಲೆಹಾಕಿದ ವಿವರಗಳ ಆಕರ್ಷಕ ಜೋಡಣೆಯೇ ಪ್ರಬಂಧ ಎನ್ನುವಂತಾಗಿರುವ ದಿನಗಳಲ್ಲಿ, ರಮ್ಮ ಭಾಷೆಯಲ್ಲಿ ರೂಪುಗೊಂಡ ಬರವಣಿಗೆಯನ್ನು ಪ್ರಬಂಧವೆಂದು ಪ್ರಕಟಿಸುತ್ತಿರುವ ಈ ಸಂದರ್ಭದಲ್ಲಿ ಯೋಗೀಂದ್ರರ ಪ್ರಬಂಧಗಳು 'ಪ್ರಬಂಧ ಧ್ವನಿ'ಯ ಮೂಲಕ ಗಮನ ಸೆಳೆಯುತ್ತವೆ. ಈ ಸಂಕಲನದಲ್ಲಿ ಮೊದಲ ಭಾಗದ ಪ್ರಬಂಧಗಳು ಪ್ರಬಂಧಕಾರರ ಊರು-ತವರಿನ ಭಿತ್ತಿಯಲ್ಲಿ ರೂಪುಗೊಂಡಿದ್ದರೆ, ಎರಡನೇ ಭಾಗದ ರಚನೆಗಳ ಕೇಂದ್ರದಲ್ಲಿರುವುದು ಪ್ರಬಂಧಕಾರರ ಕರ್ಮಭೂಮಿ ಇಂಗ್ಲೆಂಡು.... ಊರ ಹಿನ್ನೆಲೆಯ ನೆನಪುಗಳು ಸಹಜವಾಗಿಯೇ ಆರ್ದ್ರತೆಯನ್ನು ಹೊಂದಿದ್ದು ನೆನಪುಗಳಿಗೆ ಹೆಚ್ಚು ಆತುಕೊಂಡಿದ್ದರೆ, ಉತ್ತರಾರ್ಧದ ರಚನೆಗಳು ವರ್ತಮಾನದ ನೆಲೆಗಟ್ಟಿನವು ಹಾಗೂ ಬೌದ್ಧಿಕತೆಯನ್ನು ಹೆಚ್ಚು ಅವಲಂಬಿಸಿದವು... ಸಂತೆಯ ಬಯೋಸ್ಕೋಪ್ ಡಬ್ಬಿ ವಿಶ್ವರೂಪ ತೋರಿಸಿದಂತೆ ಯೋಗೀಂದ್ರರ 'ನನ್ನ ಕಿವಕಿ'ಯನ್ನು ಅವರ ಪ್ರಾತಿನಿಧಿಕ ಪ್ರಬಂಧವಾಗಿಯೂ ನೋಡಬಹುದು. “ಒಳಗೇ ಇದ್ದು ಹೊರ ಜಗತ್ತಲ್ಲಿ ಇಣುಕುವವರಿಗೆ ಈ ಕಿಬಿಕಿಯೇ ಬಾಗಿಲು, ರಸ್ತೆ ಎಲ್ಲವೂ. ಕಿವಕಿಯ ಚೌಕದ ಒಂದು ಬದಿಯಿಂದ ಯಾವ ಆಕೃತಿಯ ಪ್ರವೇಶವಾದರೂ ಅದರ ಮುನ್ನೋಟ ಮೊದಲು ಸಿಗುತ್ತದೆ. ಮತ್ತೆ ಅದು ನಿರ್ಗಮಿಸುವಾಗ ಹಿನ್ನೋಟದ ದರ್ಶನವಾಗುತ್ತದೆ. ಒಂದೇ ವ್ಯಕ್ತಿಯ ಎರಡು ಆಯಾಮಗಳು ಎರಡು ವಿಭಿನ್ನ ವ್ಯಕ್ತಿಗಳಾಗಿ ಕಾಣಿಸುವುದೂ ಇದೆ.\" ಈ ಸಂಕಲನದ ಮೊದಲ ರಚನೆ 'ಮತ್ತೆ ಹಾಡಾಗಿದೆ ಮಳೆಸಂಗೀತ' ಯೋಗೀಂದ್ರರ ಪ್ರಬಂಧ ಕೌಶಲ್ಯಕ್ಕೆ ನಿದರ್ಶನದಂತಿದೆ. ಭಾವಗೀತದಂಥ ಭಾಷೆ. ಓದಿನ ಅನುಭವ, ಆ ಅನುಭವ ಕರುಣಿಸಿದ ಒಳನೋಟೆ. ಎಲ್ಲವೂ ಹದವಾಗಿ ಒದಗಿಬಂದ ರಚನೆಯಿದು.\u003c\/p\u003e\n\u003cp\u003eಹೊಸ ಬೆಳಕಿಗೆ ಹಂಬಲಿಸುತ್ತಿರುವ ಕನ್ನಡ ಪ್ರಬಂಧ ಪ್ರಕಾರಕ್ಕೆ ದೊರೆತಿರುವ ಹೊಸ ಕಿಟಕಿಯ ರೂಪದಲ್ಲಿ ಈ ಕೃತಿ ಮುಖ್ಯವಾದುದು. ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇರುವ ಯೋಗೀಂದ್ರರ ಪ್ರಬಂಧ ಕೌಶಲ ಮುಂದಿನ ದಿನಗಳಲ್ಲಿ ಪಡೆಯಬಹುದಾದ ರೂಪದ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಾಗಿ ನಾನಂತೂ ತೆರೆದಕಣ್ಣಾಗಿರುವೆ.\u003c\/p\u003e\n\u003cp\u003e-ರಘುನಾಥ ಚ.ಹ. (ಮುನ್ನುಡಿಯಲ್ಲಿ) \u003c\/p\u003e","brand":"Yogidra Maravanthe","offers":[{"title":"Default Title","offer_id":47684127293699,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NannaKitakiBackPage_d98398e0-29c7-40ba-9873-67ee99b9264f.jpg?v=1769434523","url":"https:\/\/harivubooks.com\/products\/nanna-kitaki-essays-yogindra-maravanthe-kannada-book","provider":"Harivu Books","version":"1.0","type":"link"}