{"product_id":"nala-damayanti-religious-dr-k-s-narayanacharya-kannada-book","title":"ನಳ ದಮಯಂತೀ","description":"\u003cp data-path-to-node=\"3\"\u003e\"ನಳ-ದಮಯಂತೀ ಕಥೆಯ ಮೂಲ ಕಥಾಕಾರರು ಭಗವಾನ್ ವೇದವ್ಯಾಸರು. ಅವರ ಶ್ರೀಮಹಾಭಾರತವು ಪಾಂಡವ-ಕೌರವರ ಕಥೆಯನ್ನು ಮೂಲದಲ್ಲೊಮ್ಮೆ ಹೆಣೆದದ್ದಾದರೂ, ಅದರಲ್ಲಿ ಇನ್ನೂ ಇತರ ಕತೆಗಳ ಸಾಗರವೇ ಅಡಗಿರುವ ಮಹಾಸಾಗರವದು ಆಗಿದೆ. ನಳನ ಕಥೆಗೆ ಮನಸೋಲದವರಾರು? ಕವಿ ರವೀಂದ್ರರು, ಮಹರ್ಷಿ ಅರವಿಂದರು ಇದರ ತುಣುಕುಗಳನ್ನು ಭಾಷಾಂತರಿಸಿ, ಆಧರಿಸಿ, ಪುನಾರಚಿಸಿ ತಮ್ಮ ಮೋಹವನ್ನು ಪ್ರದರ್ಶಿಸಿದ್ದಾರೆ. ಶೈಲಿ ಎಂದರೆ ವ್ಯಾಸರದ್ದು!\u003c\/p\u003e\n\u003cp data-path-to-node=\"4\"\u003e...ನಮಗೆ ನಾವೇ ಪರಕೀಯರಾಗುತ್ತ, ನಮ್ಮ ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನಗಳಲ್ಲಿ ಅಶ್ರದ್ಧೆ ತಳೆದು, ಅರ್ಥಹೀನ ವಿಚಾರ ದುರ್ಮೌಲ್ಯ, ದುಷ್ಟ ಅನುಕರಣೆಯ ಮಾದರಿಗಳನ್ನು ನಾಚಿಕೆಯಿಲ್ಲದೆ “ಆಮದು” ಮಾಡಿಕೊಳ್ಳುತ್ತಿರುವ ಈ ಕಾಲದಲ್ಲಿ ವ್ಯಾಸ-ವಾಲ್ಮೀಕಿಗಳ ಕತೆಗಳ ರೋಚಕತೆ, ಆಧುನಿಕ ಮಾನವನ ಮನದ ಮೇಲೂ ಅವು ಹಿಡಿತ ಸಾಧಿಸಬಲ್ಲವೆಂಬ ವಿಶ್ವಾಸ ನಮ್ಮ ಯುವ ಪೀಳಿಗೆಯ ಮನಕ್ಕೆ ಬರಬೇಕು. ನಾವು ನಾವಾಗಿ ಅಲ್ಲದೇ ಭಾರತೀಯತೆ ಕಳೆದುಕೊಂಡು ಬಾಳಲಾರೆವು.\"\u003c\/p\u003e\n\u003cp data-path-to-node=\"5\"\u003e\u003cb data-path-to-node=\"5\" data-index-in-node=\"0\"\u003e- ಕೆ. ಎಸ್. ನಾರಾಯಣಾಚಾರ್ಯ (ನಿವೇದನೆಯಿಂದ)\u003c\/b\u003e\u003c\/p\u003e","brand":"Dr. K. S. Narayanacharya","offers":[{"title":"Default Title","offer_id":47615070798083,"sku":"HB00005502986","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AdobeScan10Jan2026_1__page-0005.jpg?v=1768048983","url":"https:\/\/harivubooks.com\/products\/nala-damayanti-religious-dr-k-s-narayanacharya-kannada-book","provider":"Harivu Books","version":"1.0","type":"link"}