{"product_id":"nagachandra-samputa-naadu-nudi-dr-shantinath-dibbad-kannada-book","title":"ನಾಗಚಂದ್ರ ಸಂಪುಟ","description":"\u003cp\u003eಕನ್ನಡದ ಜಗತ್ತು. ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ.\u003c\/p\u003e\n\u003cp\u003eಕನ್ನಡವಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಿಗೆ ಸಾಹಿತ್ಯಕ ಸ್ಥಾನವನ್ನು ಕಲ್ಪಿಸಿಕೊಟ್ಟ ಶ್ರೇಯಸ್ಸು ಜೈನಕವಿಗಳಿಗೆ ಸಲ್ಲುತ್ತದೆ. ಕನ್ನಡದಲ್ಲಂತೂ ಅದರ ದೇಶಿತನದ ಸಿರಿಗೆ ಸಂಸ್ಕೃತದ ಸಿಹಿಯನ್ನು ಹದವಾಗಿ ಬೆರೆಸಿ ನಾದಿದವರು ಜೈನಕವಿಗಳು.\u003c\/p\u003e\n\u003cp\u003eಈ ಪರಿಷ್ಕೃತ ಆವೃತ್ತಿಯು ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೬ರ ಜೂನ್ನಲ್ಲಿ ಆರಂಭವಾಗಿರುವ 'ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ'ಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಅನುದಾನದಿಂದ ಪ್ರಕಟವಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೂ ಹಾಗೂ ಈ ಕೃತಿಯನ್ನು ಸಂಪಾದಿಸಿಕೊಟ್ಟಿರುವ ನಾಡೋಜ ಪ್ರೊ. ಕಮಲಾ ಹಂಪನಾ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಕೃತಜ್ಞತೆಯನ್ನು ಸಲ್ಲಿಸುತ್ತದೆ.\u003c\/p\u003e\n\u003cp\u003e-ಡಾ. ಮಲ್ಲಿಕಾ. ಎಸ್. ಘಂಟಿ ಕುಲಪತಿ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. Shantinath Dibbad","offers":[{"title":"Default Title","offer_id":47880835531011,"sku":"HB00006861","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NagachandraSamputa.jpg?v=1774611523","url":"https:\/\/harivubooks.com\/products\/nagachandra-samputa-naadu-nudi-dr-shantinath-dibbad-kannada-book","provider":"Harivu Books","version":"1.0","type":"link"}