{"product_id":"naga-panchami-vrata-kathe-kannada-book","title":"ನಾಗಾಪಂಚಮಿ ವ್ರತ ಕಥೆ","description":"\u003cp\u003eನಾಗಾಪಂಚಮಿ ವ್ರತ ಕಥೆ\u003cbr\u003eಹಿಂದೂ ಪುರಾಣಗಳ ರೀತ್ಯ ಬ್ರಹ್ಮಪುತ್ರನಾದ ಕಶ್ಯಪ ಮಹರ್ಷಿಯು ೪ ಪತ್ನಿಯಯರನ್ನು ಹೊಂದಿದ್ದು, ಮೊದಲನೆಯವಳು ದೇವತೆಗಳಿಗೆ ಜನ್ಮವಿತ್ತರೆ, ಎರಡನೆಯ ಪತ್ನಿಯು ಗರುಡದೇವನಿಗೂ, ಪಿತೃಲೋಕದ ನಾಗಜಾತಿಗೆ ಸೇರಿದ ಮೂರನೆಯವಳು ನಾಗರಿಗೂ ಮತ್ತು ನಾಲ್ಕನೆಯವಳು ರಾಕ್ಷರಿಗೂ ಜನ್ಮ ನೀಡುತ್ತಾಳೆ.\u003c\/p\u003e\n\u003cp\u003eಶ್ರೀ ಲಕ್ಷ್ಮೀನಾರಾಯಣರ ವಾಹನವಾದ ಶ್ರೀ ಗರುಡದೇವನು ಜನಿಸಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಈ ದಿನವನ್ನು ಗರುಡಪಂಚಮಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.\u003c\/p\u003e\n\u003cp\u003eಮತ್ತೊಂದು ಕಥೆಯ ಪ್ರಕಾರ ಸರ್ಪದ ಕಡಿತದಿಂದ ಪರೀಕ್ಷಿತನು ಮರಣ ಹೊಂದಲು ಆತನ ಮಗನಾದ ಜನಮೇಜಯನು ದ್ವೇಷದಿಂದ ಸರ್ಪಗಳ ಜಾತಿಯನ್ನೇ ನಾಶಮಾಡಲು ಮಾಡುತ್ತಿದ್ದ ಯಜ್ಞವು ಅಸ್ತಿಕನೆಂಬ ದೇವತೆಯಿಂದ ನಿಲ್ಲಿಸಲ್ಪಟ್ಟಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಆ ದಿನವನ್ನು ನಾಗಪಂಚಮಿ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಇದನ್ನು ಫಣಿಗೌರಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.\u003c\/p\u003e\n\u003cp\u003eವಿಶೇಷವಾಗಿ ಈ ದಿನ ವ್ರತವನ್ನು ಸ್ತ್ರೀಯರು ಆಚರಿಸಿ, ಸಹೋದರರನ್ನು ಆಹ್ವಾನಿಸಿ ಅವರಿಗೆ ಶುಭಕೋರುವ ಸಂಪ್ರದಾಯ ಆಚರಣೆಯಲ್ಲಿರುತ್ತದೆ\u003c\/p\u003e","brand":"Vishnu Sharma","offers":[{"title":"Default Title","offer_id":47779568484611,"sku":"HB00006330","price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-23at1.18.50PM_1.jpg?v=1771835282","url":"https:\/\/harivubooks.com\/products\/naga-panchami-vrata-kathe-kannada-book","provider":"Harivu Books","version":"1.0","type":"link"}