{"product_id":"naadu-kanda-rajkumar-biography-dr-rajkumara-family-and-others-kannada-book","title":"ನಾಡು ಕಂಡ ರಾಜ್ ಕುಮಾರ್","description":"ಸರಿಯಾಗಿ 40 ವರ್ಷಗಳ ಹಿಂದೆ ವಿಶ್ವವಿಖ್ಯಾತ ನಟಸಾರ್ವಭೌಮ ಕನ್ನಡಿಗರ ಕಣ್ಮಣಿ ಡಾ. ರಾಜಕುಮಾ‌ರ್ ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ \"ಪದ್ಮಭೂಷಣ\" ಪ್ರಶಸ್ತಿಗೆ ಭಾಜನರಾದ ಸಂದರ್ಭದಲ್ಲಿ 'ಪದ್ಮಭೂಷಣ ಡಾ. ರಾಜಕುಮಾರ್ ಅಭಿನಂದನಾ ಗ್ರಂಥವನ್ನು ಹೊರತರಲಾಗಿತ್ತು. ಕೆಲವೇ ಸಾವಿರ ಪ್ರತಿಗಳನ್ನು ಮುದ್ರಿಸಿದ್ದ ಈ ಗ್ರಂಥದ ಎಲ್ಲ ಪ್ರತಿಗಳು ಮೂರ್ನಾಲ್ಕು ದಿನಗಳಲ್ಲೇ ಸಂಪೂರ್ಣ ಖಾಲಿ ಆಗಿದ್ದರಿಂದ, ಕೇವಲ ಕರ್ನಾಟಕ ರಾಜ್ಯವಲ್ಲದೆ ದೇಶ ವಿದೇಶಗಳ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಕನ್ನಡಾಭಿಮಾನಿಗಳಿಗೆ ಈ ಗ್ರಂಥದ ಪ್ರತಿಗಳು ದೊರಕದೆ ಅತ್ಯಂತ ನಿರಾಸೆಯ ವಾತಾವರಣ ಸೃಷ್ಟಿಯಾಗಿತ್ತು.\u003cbr\u003e\u003cbr\u003eಆದರೆ, ಸಮಸ್ತ ಕನ್ನಡಾಭಿಮಾನಿಗಳ ಬಹಳ ವರ್ಷಗಳ ಅಭಿಲಾಷೆಯನ್ನು ಈಡೇರಿಸುವ ನಿಟ್ಟಿನಲ್ಲಿ ಟೋಟಲ್ ಕನ್ನಡ ಮೀಡಿಯಾದ ವಿಶೇಷ ಕಾಳಜಿಯಿಂದ \"ಪದ್ಮಭೂಷಣ ಡಾ. ರಾಜಕುಮಾರ್ ಅಭಿನಂದನಾ ಗ್ರಂಥ\"ವು 40 ವರ್ಷಗಳ ನಂತರ \"ನಾಡು ಕಂಡ ರಾಜಕುಮಾರ್\" ಎಂಬ ಹೆಸರಿನಲ್ಲಿ ಮರುಮುದ್ರಣ ಆಗುತ್ತಿರುವುದು ಬಹಳ ಸಂತೋಷದಾಯಕ ವಿಷಯ.\u003cbr\u003e\u003cbr\u003e'ಕನ್ನಡ ನಾಡಿನ ಗಣ್ಯರು, ಚಲನಚಿತ್ರರಂಗದ ದಿಗ್ಗಜರು ಹಾಗೂ ಅಣ್ಣಾವ್ರ ಕುಟುಂಬದ ಸದಸ್ಯರು ವರನಟ ಡಾ. ರಾಜಕುಮಾರ್ ಅವರ ಬಗ್ಗೆ ತಮ್ಮ ಹೃದಯಾಂತರಾಳದ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡಿರುವ ಈ ಗ್ರಂಥವು ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲೂ ಇರಲೇಬೇಕಾದ ವಸ್ತು ವಿಷಯಗಳನ್ನು ಹೊಂದಿದೆ.\u003cbr\u003e\u003cbr\u003eಇಂತಹ ಕನ್ನಡಭಿಮಾನಿಗಳ ನಾಲ್ಕು ದಶಕಗಳ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಅದ್ಭುತ ಪ್ರಯತ್ನವನ್ನು ಮಾಡಿರುವ ಟೋಟಲ್ ಕನ್ನಡ ಮೀಡಿಯಾ ಸಂಸ್ಥೆಯ ಮೋಹನ್ ಕಾಮಾಕ್ಷಿ ಮತ್ತು ಹರಿಹರಪುರ ಮಂಜುನಾಥ್‌ ರವರಿಗೆ ಸಮಸ್ತ ಕನ್ನಡಿಗರ ಪರವಾಗಿ ಮತ್ತು ಅಣ್ಣಾವ್ರ ಕೋಟ್ಯಂತರ ಅಭಿಮಾನಿಗಳ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.\u003cbr\u003e\u003cbr\u003eರಮೇಶ್ ಎನ್. ಆ‌ರ್.\u003cbr\u003e\u003cbr\u003eರಾಜ್ಯ ಗೌರವಾಧ್ಯಕ್ಷರು, ಅಖಿಲ ಕರ್ನಾಟಕ ಡಾ. ರಾಜ್‌ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ","brand":"Dr. Rajkumar Family and Others","offers":[{"title":"Default Title","offer_id":44534244966659,"sku":"HB00004524","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_f1b2b9f8-d338-411e-8938-1b32aaf6fa28.jpg?v=1703942488","url":"https:\/\/harivubooks.com\/products\/naadu-kanda-rajkumar-biography-dr-rajkumara-family-and-others-kannada-book","provider":"Harivu Books","version":"1.0","type":"link"}