Skip to product information
1 of 1

Dr. A. S. Prabhakar

ಪುನೀತ್ ರಾಜಕುಮಾರ್ - ಮುಗ್ಧ ನಗುವೊಂದರ ಕಣ್ಮರೆ

ಪುನೀತ್ ರಾಜಕುಮಾರ್ - ಮುಗ್ಧ ನಗುವೊಂದರ ಕಣ್ಮರೆ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ತಮ್ಮ ಸಾರ್ವಜನಿಕ ನಡವಳಿಕೆ ಮತ್ತು ನಿರ್ವಹಿಸಿದ ಪಾತ್ರಗಳ ಮೂಲಕ ಡಾ.ರಾಜ್ ಅವರು ತಮ್ಮದೇ ನೆಲೆ, ನಿಲುವುಗಳ ನೈತಿಕ ರೂಪಕವಾಗಿ ಬಾಳಿದರು, ಬೆಳಗಿ ಬೆಳಕು ನೀಡಿದರು. ತಂದೆಯವರ ಸಾರ್ವಜನಿಕ ನಡವಳಿಕೆಯ ಮಾದರಿಯನ್ನು ಅನುಸರಿಸುತ್ತ ಬಂದವರು ಶಿವರಾಜ್‌ ಕುಮಾರ್, ರಾಘವೇಂದ್ರ ರಾಜಕುಮಾರ್‌ ಮತ್ತು ಪುನೀತ್ ರಾಜಕುಮಾರ್, ಈ ಕಾರಣಕ್ಕೆ ಕೂಡ ಪುನೀತ್ ಅವರ ಅಗಲಿಕೆ ಒಂದು ದೊಡ್ಡ ಸಾರ್ವಜನಿಕ ಆಘಾತ. ಯುವಕರಿಗೆ ಮಾದರಿಯಾಗಿದ್ದ ಕಲಾವಿದ ಇನ್ನಿಲ್ಲವಾದದ್ದು ಜನಪ್ರಿಯ ಸಂಸ್ಕೃತಿ ವಲಯದ ನಷ್ಟ. ಸಿನಿಮಾ ಎಂಬ ಜನಪ್ರಿಯ ಸಂಸ್ಕೃತಿ ಪ್ರಕಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಂಡು ಸದಭಿರುಚಿಯ ಸಾಕಾರವಾಗಿದ್ದ ಪುನೀತ್ ಎಂಬ ಸಶಕ್ತ ರೂಪಕ ಭೌತಿಕವಾಗಿ ಈಗ ಇಲ್ಲ. ಅವರ ಸಾವಿನೊಂದಿಗೆ ಸರಳತೆ, ಸಜ್ಜನಿಕೆಗಳ ಸಿನಿಮಾ ವ್ಯಕ್ತಿತ್ವವೊಂದು ಮರೆಗೆ ಸರಿದುಹೋಗಿದೆ; ನೆನಪುಗಳನ್ನು ಬಿಟ್ಟು ನೆಲದ ಒಡಲು ಸೇರಿದೆ.

- ಬರಗೂರು ರಾಮಚಂದ್ರಪ್ಪ

ನಾನು ನೋಡಿರುವ ಹಾಗೆ ಶಿವಣ್ಣ, ಪುನೀತ್ ಅವರು ತಮ್ಮ ಸಮಕಾಲೀನ ನಟರ ಚಿತ್ರದ ಮೂಹೂರ್ತ, ಶತದಿನ ಸಮಾರಂಭಗಳಿಗೆ ಹೋಗಿ ಕುಣಿದು, ಕುಪ್ಪಳಿಸಿ ಅವರನ್ನು ಖುಷಿಗೊಳಿಸುತ್ತಿದ್ದರು. ಬೇರೆಯವರ ಯಶಸ್ಸನ್ನು ಬೆರಗುಗಣ್ಣಿನಿಂದ ನೋಡುವುದಕ್ಕೆ ಒಳಗಿನಿಂದ ಒಂದು ಪ್ರೀತಿ ಬೇಕಾಗುತ್ತದೆ. ನಾವು ಬದುಕೋಣ, ಬೇರೆಯವರಿಗೂ ಬದುಕಲು ಬಿಡೋಣ ಎನ್ನುವ ಧೋರಣೆ ಅದು. 46 ವರ್ಷಕ್ಕೆ ನಮ್ಮನ್ನು ಬಿಟ್ಟುಹೋಗಿರುವ ಅಪ್ಪು ಅವರು ಒಂದು ಮಾದರಿಯನ್ನು ತಮ್ಮ ತಂದೆಯವರ ಹಾಗೆ ಬಿಟ್ಟು ಹೋಗಿದ್ದಾರೆ. ನಮ್ಮ ಮುಂದಿನ ತಲೆಮಾರಿನವರು ಎಲ್ಲರ ಜೊತೆ ಪ್ರೀತಿಯಿಂದ ಬದುಕುವುದರ ಮೂಲಕ ಪುನೀತ್ ಅವರಿಗೆ ಅವರ ಕುಟುಂಬಕ್ಕೆ ಗೌರವ ಸಲ್ಲಿಸಬಹುದೆಂದು ನಾನು ಭಾವಿಸುತ್ತೇನೆ.

-ನಾಗತಿಹಳ್ಳಿ ಚಂದ್ರಶೇಖರ್

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)