{"product_id":"moola-mantra-prayogaha-shivaswarupa-chaitanya-religious-shreenidhi-publications-kannada-book","title":"ಮೂಲ ಮಂತ್ರ ಪ್ರಯೋಗಃ","description":"\u003cp data-path-to-node=\"3\"\u003eವಿವಿಧ ಗ್ರಂಥಗಳಲ್ಲಿ ನಿರೂಪಿತವಾಗಿರುವ ಅನೇಕ ಪ್ರಭಾವಶಾಲಿ ಮಂತ್ರಗಳನ್ನು ಒಂದೇ ಕಡೆಗೆ ಸಂಗ್ರಹಿಸಬೇಕು ಎನ್ನುವ ಅನೇಕ ಸಾಧಕರ ಹಾಗೂ ಓದುಗರ ಇಚ್ಛೆಗೆ ಪೂರಕವಾಗಿ ಈ ಸಂಗ್ರಹವು ರೂಪುಗೊಂಡಿದೆ. ಮಂತ್ರಶಾಸ್ತ್ರದ ಪ್ರಮುಖ ಗ್ರಂಥಗಳಾದ \u003cb data-path-to-node=\"3\" data-index-in-node=\"186\"\u003e'ಮಂತ್ರ ಮಹೋದಧಿ'\u003c\/b\u003e ಮತ್ತು ಶಾರದಾ ತಿಲಕ ತಂತ್ರಗಳಿಂದ ಸಂಗ್ರಹಿಸಲಾದ ವಿವಿಧ ಮಂತ್ರಗಳೊಂದಿಗೆ ಅನ್ಯ ಮೂಲಗಳಿಂದಲೂ ಸಂಗ್ರಹಿಸಿದ ಮಂತ್ರಗಳು ಇಲ್ಲಿವೆ.\u003c\/p\u003e\n\u003cp data-path-to-node=\"4\"\u003eಮಂತ್ರಶಾಸ್ತ್ರದ ಅಥಾಹ ಸಾಗರದ ಗರ್ಭದಲ್ಲಿ ಇನ್ನೂ ಅಸಂಖ್ಯಾತ ರತ್ನಗಳು ಅಡಗಿವೆ. ಆ ಸಾಗರದ ಆಳವನ್ನಳೆದು ಅವೆಲ್ಲವುಗಳನ್ನು ಹೆಕ್ಕಿತಂದು ಸಾಧಕರ ಮುಂದೆ ಪ್ರಸ್ತುತಪಡಿಸುವ ಪ್ರಕ್ರಿಯೆಯು ನಿರಂತರವಾಗಿ ಸಾಗುತ್ತಿರುತ್ತದೆ.\u003c\/p\u003e\n\u003cp data-path-to-node=\"5\"\u003eಮಂತ್ರ ಸಾಧನೆಯ ವಿವಿಧ ಆಯಾಮಗಳನ್ನು ಕುರಿತು ಇಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದ್ದು, ಮಂತ್ರ-ತಂತ್ರಗಳ ಸಂಬಂಧಗಳ ಮೇಲೆಯೂ ಬೆಳಕು ಚೆಲ್ಲಲಾಗಿದೆ. ಸಾಧನೆಯ ಪ್ರಾರಂಭದಲ್ಲಿ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಮುನ್ನಡೆದರೆ, ಸಾಧನೆಯು ಸಫಲವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.\u003c\/p\u003e\n\u003cp data-path-to-node=\"6\"\u003e\u003cb data-path-to-node=\"6\" data-index-in-node=\"0\"\u003eಶಿವಸ್ವರೂಪ ಚೈತನ್ಯ\u003c\/b\u003e\u003c\/p\u003e","brand":"Shivaswarupa Chaitanya","offers":[{"title":"Default Title","offer_id":47670689923331,"sku":"HB00005503167","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/md_5551234016209.jpg?v=1769173725","url":"https:\/\/harivubooks.com\/products\/moola-mantra-prayogaha-shivaswarupa-chaitanya-religious-shreenidhi-publications-kannada-book","provider":"Harivu Books","version":"1.0","type":"link"}