{"product_id":"mooka-lahari-collection-of-essays-dr-doddamallayya-kannada-book","title":"ಮೂಕ ಲಹರಿ","description":"\u003cp\u003e.ದೊಡ್ಡಮಲ್ಲಯ್ಯನವರು ಪಶುವೈದ್ಯ ವೃತ್ತಿಯಲ್ಲಿದ್ದ ಅವಧಿಯಲ್ಲಿ ಅವರು ಖುದ್ದಾಗಿ ಕಂಡುಂಡ ನೈಜ ಅನುಭವಗಳನ್ನು ತಮ್ಮ 'ಮೂಕಲಹರಿ'ಎಂಬ ಪ್ರಬಂಧ ಸಂಕಲನದ ಕೃತಿಯಲ್ಲಿ ಸಹಜವಾಗಿ ಅಭಿವ್ಯಕ್ತಿಸಿದ್ದಾರೆ. ಆರಂಭದ ಬರಹದಲ್ಲಿಯೇ ಅವರು ಸಾಹಿತ್ಯದ ಮೇರುಗಿರಿಯನ್ನು ಏರಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲಾ. ಏಕೆಂದರೆ ಅವರು ಸರಳವಾದ ಆಡುಭಾಷೆ ಹಾಗೂ ಬರಹಭಾಷೆಯನ್ನು ದುಡಿಸಿಕೊಂಡಿರುವ ರೀತಿ ನಿಬ್ಬೆರಗನ್ನು ಉಂಟು ಮಾಡುವಂತಹದು. ಅವರ ಎಲ್ಲಾ ಪ್ರಬಂಧಗಳಲ್ಲೂ ಜೀವಪರ ಕಾಳಜಿ ಹೆಜ್ಜೆ ಹೆಜ್ಜೆಗೂ ಎದ್ದು ಕಾಣುತ್ತದೆ. ತಮ್ಮ ವೃತ್ತಿಯ ಪರಿಧಿಯಲ್ಲಿಯೇ ಅವರು ನಿರ್ವಹಿಸಿದ ಅಸಾಧಾರಣ ಕೆಲಸಗಳಲ್ಲಿ ಕರುಣಾಮಯಿಯಾಗಿ ಕಾಣುತ್ತಾರೆ.\u003c\/p\u003e\n\u003cp\u003eಸಾಕು ಪ್ರಾಣಿಗಳಿಗೂ ಸಿಸೇರಿಯನ್ ಹಾಗೂ ಇತರ ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು ಎಂಬ ಸತ್ಯ ಚಿತ್ರದುರ್ಗ ಸೀಮೆಯ ಎಲ್ಲರಿಗೂ ಗೊತ್ತಾಗಿದ್ದು ಮಲ್ಲಯ್ಯನವರ ವೃತ್ತಿ ಬದ್ದತೆಯಿಂದ ಎಂಬುದು ಇಲ್ಲಿನ ಈ ಕಥೆಗಳಿಂದ ವ್ಯಕ್ತವಾಗುತ್ತದೆ. ಅವರು ಪ್ರಾಣಿಗಳಿಗೆ ಮಾಡಿರುವ ಅಪರೇಷನ್ ಎಲ್ಲವೂ ಸಕ್ಷಸ್ಸೇ। ಉದಾಹರಣೆಗೆ ಒಂದು ಎಮ್ಮೆಯ ಕೊರಳ ಹತ್ತಿರ ಅನ್ನನಾಳದಲ್ಲಿ ಅಪಾಯಕಾರಿಯಾಗಿ ಸಿಕ್ಕಿಹಾಕಿಕೊಂಡ ರಬ್ಬ‌ರ್ ತುಂಡನ್ನು ನಿರಾಯಾಸವಾಗಿ ಶಸ್ತ್ರಚಿಕಿತ್ಸೆ ಮಾಡಿ ತೆಗೆದದ್ದು ಪವಾಡವೇ ಸರಿ. ಪ್ರಾಣಿ ಮಾಲೀಕರಿಂದಲೇ ಕಾಯಿಲೆ ರಾಸುಗಳ ಲಕ್ಷಣಗಳನ್ನು ಮೊದಲೆ ತಿಳಿದುಕೊಂಡು ಇಂತಹದೇ ಕಾಯಿಲೆ ಇರಬಹುದೆಂದು ಊಹಿಸುವಷ್ಟು ಮುಂಗಾಣೆಯುಳ್ಳವರು ಮಲ್ಲಯ್ಯನವರು ಎಂದರೆ ಪಶುವೈದ್ಯರ ಅತೀಂದ್ರಿಯ ಜ್ಞಾನದ ಮಹತ್ವದ ಅರಿವಾಗುತ್ತದೆ.\u003c\/p\u003e\n\u003cp\u003eಮೂಕಲಹರಿಯಲ್ಲಿ ಒಟ್ಟು ಐವತ್ತು ಪ್ರಬಂಧಗಳಿವೆ. ಇಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ, ಪಶು ಸಂಗೋಪನೆಯ ವಿಷಯಗಳು, ಹಾಗೆ ಬಡತನ ನಿರ್ಮೂಲನೆಯಲ್ಲಿ ಪಶು ಸಂಗೋಪನೆಯ ಪಾತ್ರ ಜೊತೆಗೆ ಪ್ರಾಣಿ ಮತ್ತು ಮಾನವ ಸಂಬಂಧಗಳ ಅನನ್ಯತೆಯನ್ನು ಪ್ರತಿಪಾದಿಸಿದ ಚಿತ್ರಣಗಳು ಮನನೀಯವಾಗಿವೆ. ಆದ್ದರಿಂದ ಈ ಕೃತಿಯಲ್ಲಿ ಅನೇಕ ಪ್ರಸಂಗಗಳನ್ನು ಓದುವಾಗ ಮೂಕಲಹರಿಯು ಸಾರ್ಥಕತೆಯು ಪ್ರತಿಬಿಂಬಿಸುತ್ತದೆ.\u003c\/p\u003e\n\u003cp\u003e-ಪ್ರೊ|| ಜಿ.ಪರಮೇಶ್ವರಪ್ಪ\u003cbr\u003eಸಾಹಿತಿ ಹಾಗೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು\u003c\/p\u003e","brand":"Dr. Doddamallayya","offers":[{"title":"Default Title","offer_id":46286251229443,"sku":"HB00005091","price":350.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MookaLahari.jpg?v=1736157077","url":"https:\/\/harivubooks.com\/products\/mooka-lahari-collection-of-essays-dr-doddamallayya-kannada-book","provider":"Harivu Books","version":"1.0","type":"link"}