{"product_id":"matsyanagariyalli-pandavaru-religious-dr-k-s-narayanacharya-kannada-book","title":"ಮತ್ಸ್ಯನಗರಿಯಲ್ಲಿ ಪಾಂಡವರು","description":"\u003cp data-path-to-node=\"3\"\u003e\"ಸುಳ್ಳು ಮಹಾಭಾರತ ಕೃತಿಗಳು, ವಿಕೃತಿಗಳು ಅಡಗಿ, ಶುದ್ಧ ವ್ಯಾಸದರ್ಶನ ನಿಮ್ಮ ಹೃದಯ ಮುಟ್ಟದಿದ್ದರೆ, ನಮ್ಮ ದೇಶಕ್ಕೆ ವ್ಯಾಸರಿಂದ ಆಗಬೇಕಾದ ಲಾಭವೇನು? ಮಹಾಭಾರತವು ನಮಗೆ ದಾರ್ಶನಿಕ ಗ್ರಂಥ; ಕುಕವಿಗಳ ಚೆಲ್ಲಾಟದ ಆಡುಂಬೊಲವಲ್ಲ! ಬರೀ ಕಾವ್ಯವಲ್ಲ! ಬರೀ ಮನರಂಜನೆಯ, ಹವ್ಯಾಸದ, 'time killing', 'time-filling gap' ಅಲ್ಲ ಎಂದು ಖಾರವಾಗಿ ಬರೆಯಬೇಕಾಗಿದೆ.\u003c\/p\u003e\n\u003cp data-path-to-node=\"4\"\u003eಕುಮಾರವ್ಯಾಸನ ಕರ್ಣ ಈಗಣ ಜಾತಿ ರಾಜಕಾರಣದಲ್ಲಿ ಮಾಡುತ್ತಿರುವ ಕೋಲಾಹಲ ನೋಡಿ! ಪಂಪನ ಕರ್ಣ ಮಾಡಿರುವ ಅವಾಂತರ ನೋಡಿ! \u003cb data-path-to-node=\"4\" data-index-in-node=\"95\"\u003eCan a spurious work create so much havoc?\u003c\/b\u003e ಮಹಾಕಾವ್ಯ ಹುಡುಗಾಟಿಕೆಯ ವಿಷಯವೋ, ಕ್ಷುಲ್ಲಕ ರಾಜಕಾರಣಿಗಳ ಕಾಲೆಂದೋ ಆಗಬಾರದು. ಅಂದರೆ ಮೂಲ ಕೃತಿಗಳನ್ನೇ ಓದಬೇಕು. ಓದಲು ಸಂಸ್ಕೃತ ಬೇಕು!\u003c\/p\u003e\n\u003cp data-path-to-node=\"5\"\u003eಸಂಸ್ಕೃತ ಮತ್ತು ಸಂಸ್ಕೃತಿ ದ್ವೇಷದ ಈ ಕಾಲದಲ್ಲಿ, ಈ ಕೊರತೆ ತುಂಬಲು ನಾನು ಮೂಲಕೃತಿಯ ಈ ರೋಚಕ ರೂಪಾಂತರ, ಅಲಂಕಾರ, ಪೂರಣ, ಶೃಂಗಾರಗಳ ಕಾರ್ಯ ಕೈಗೊಂಡೆ. ಈ ಹಿಂದಿನ ನನ್ನ ಕೃತಿಗಳು ಹತ್ತಾರು ಮುದ್ರಣ ಕಂಡಿವೆ ಎಂದರೆ ನನ್ನ ಕಾರ್ಯ ಸಾರ್ಥಕ ಎಂದು ಭಾವಿಸುತ್ತೇನೆ. ಓದುಗರ ಮೆಚ್ಚುಗೆಯೇ ನನಗೆ ಪ್ರಶಸ್ತಿ.\"\u003c\/p\u003e\n\u003cp data-path-to-node=\"6\"\u003e\u003cb data-path-to-node=\"6\" data-index-in-node=\"0\"\u003e- ಕೆ. ಎಸ್. ನಾರಾಯಣಾಚಾರ್ಯ (ನಿವೇದನೆಯಲ್ಲಿ)\u003c\/b\u003e\u003c\/p\u003e","brand":"Dr. K. S. Narayanacharya","offers":[{"title":"Default Title","offer_id":47615053136131,"sku":"HB00005502982","price":380.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1768044928042-ae731d09-bf80-459d-8921-9608fdb3216c_1_4566bb5b-af59-43c5-ba73-b4473e338b87.jpg?v=1768046853","url":"https:\/\/harivubooks.com\/products\/matsyanagariyalli-pandavaru-religious-dr-k-s-narayanacharya-kannada-book","provider":"Harivu Books","version":"1.0","type":"link"}