{"product_id":"matigondu-gaadhe-gaadhegondu-kathe-collection-of-stories-jayalaxmi-bhat-kannada-book","title":"ಮಾತಿಗೊಂದು ಗಾದೆ ಗಾದೆಗೊಂದು ಕಥೆ","description":"\u003cp\u003eಶ್ರೀಮತಿ ಜಯಲಕ್ಷ್ಮಿ ಭಟ್ ಅವರ ಪರಿಚಯವಾದದ್ದೇ ಈಗೊಂದು ಮೂರು ವರ್ಷದಿಂದೀಚೆಗೆ. ಒಂದು ಮುಖ ಪುಸ್ತಕ ಬಳಗದಲ್ಲಿ ಕಥೆ ಬರೆಯುವ ಅಂಕಣದ ನಿರ್ವಾಹಕರಾದ ಇವರು ಆ ಬಳಗಕ್ಕೊಂದು ಹೆಮ್ಮೆ ಎಂದರೆ ತಪ್ಪಾಗಲಾರದು. ಅವರ ಬರಹಗಳಲ್ಲಿ ಶುದ್ಧ ಕನ್ನಡ ಶೈಲಿಯ ಒಕ್ಕಣೆ, ಜೊತೆಗೆ ದೋಷರಹಿತ ವ್ಯಾಕರಣ. ಯಾವುದೇ ಸಾಹಿತ್ಯ ಪ್ರಕಾರಗಳಲ್ಲೂ ಪ್ರಬುದ್ಧತೆಯ ಹರಿವು. ಸಾಹಿತ್ಯ ಕ್ಷೇತ್ರದಲ್ಲಿ ಒಂದು ಎಲೆ ಮರೆಯ ಕಾಯಿಯಂತಹ ಸುಪ್ತ ಪ್ರತಿಭೆ ಎಂದೇ ಹೇಳಬಹುದು.\u003c\/p\u003e\n\u003cp\u003eಸಮಾಜದ ಆಗು ಹೋಗುಗಳ ಅನುಭವದಲ್ಲಿ ಹುಟ್ಟಿದ ಹೇಳಿಕೆಗಳಿಗೇ ಗಾದೆ ಎಂಬ ಹೆಸರು ಬಂತೆಂಬುದು ಒಂದು ವ್ಯಾಖ್ಯಾನ. ನಿತ್ಯ ಬದುಕಿನ ಅನುಭವಗಳನ್ನು, ಮೂಲಭೂತ ಸತ್ಯಗಳನ್ನು ನೈತಿಕತೆಯ ಆಧಾರದಡಿ ನಮ್ಮ ಹಿರಿಯರಿಂದ ಕಲ್ಪಿಸಲ್ಪಟ್ಟ ಈ ಗಾದೆಗಳು ಸರಳವಾದ ಬೋಧಕಗಳಾಗಿ ಮನದಾಳದಲ್ಲಿ ಉಳಿಯುವಂಥದ್ದು. ಇವು ವ್ಯಕ್ತಿತ್ವ ಮತ್ತು ಜೀವನ ತತ್ವಗಳ ಮಾರ್ಗದರ್ಶಿ ಎಂದೂ ಪ್ರತಿಪಾದಿಸಲ್ಪಟ್ಟಿದೆ.\u003c\/p\u003e\n\u003cp\u003eಈ ಗಾದೆಗಳ ಅರ್ಥೈಸುವಿಕೆಯಲ್ಲೂ ಜಾಣ್ಮೆ ಇದ್ದರೆ ಅದೆಂಥ ಪ್ರತಿಭೆ ಅಲ್ಲವೇ ? ಉದಾಹರಣೆಯಾಗಿ ಅವುಗಳು ಒಂದು ಕಥೆಯ ರೂಪ ಪಡೆದರೆ ಅದೆಷ್ಟು ಪರಿಣಾಮ ಕಾರಿಯಾಗಬಲ್ಲದು? ಇವೆರಡು ಪ್ರಶ್ನೆಗಳಿಗೆ ಉತ್ತರ ಕೊಡುವ ನಿಟ್ಟಿನಲ್ಲಿ ಶ್ರೀಮತಿ ಜಯಲಕ್ಷ್ಮಿ ಭಟ್ ಅವರ ಈ ಸಂಕಲನ \"ಮಾತಿಗೊಂದು ಗಾದೆ, ಗಾದೆಗೊಂದು ಕಥೆ\" ಒಂದು ಅಸಾಧಾರಣ ಪ್ರಯತ್ನ. ಗ್ರಾಮೀಣ ಪರಿಸರದ ಒಂದು ಹವ್ಯಕ ಕುಟುಂಬದ ಚೌಕಟ್ಟಿನಲ್ಲಿ ಮನೆಯ ಸದಸ್ಯರನ್ನೇ ಪಾತ್ರರಾಗಿರಿಸಿ, ಗಾದೆಗಳನ್ನು ಕಥೆಗಳ ಮೂಲಕ ಪ್ರತಿಪಾದಿಸುವ ಇವರ ಕಲೆಗೆ ತಲೆಗಳು ಸಹಜವಾಗಿ ತೂಗುತ್ತವೆ. ಕುಟುಂಬದ ಹಿರಿಯ ಮನುಷ್ಯ \"ಅಜ್ಜ\" ತನ್ನ ಮೊಮ್ಮಕ್ಕಳಿಗೆ ಕಥೆಯ ಮೂಲಕ ಗಾದೆಗಳನ್ನು ಅರ್ಥೈಸುವ ಕ್ರಮ ಅತೀ ಆಹ್ಲಾದಕರ. ನಡುನಡುವೆ ಇಣುಕುವ ನವಿರಾದ ಹಾಸ್ಯ ತುಣುಕುಗಳು ತರುವ ಕಿರುನಗೆಯಿಂದ ಮನೋಲ್ಲಾಸ ಮೂಡಿಸುತ್ತದೆ.\u003c\/p\u003e\n\u003cp\u003e50 ಗಾದೆಗಳಿಗೆ ಕಥೆ ಹೆಣೆದ ಈ ಸಂಕಲನ ನಮ್ಮ ಭವ್ಯ ಪರಂಪರೆಯಲ್ಲಿ ಗಾದೆಗಳ ಮಹತ್ವವನ್ನಲ್ಲದೆ, ಬದುಕಿನ ಅನುಭವಾಮೃತ, ನೀತಿ, ತತ್ವಗಳನ್ನು ಚಿತ್ರ ಸಹಿತ ಹಂಚುವ ಒಂದು ಕೈಪಿಡಿಯೆಂದರೆ ಅತಿಶಯೋಕ್ತಿಯಾಗಲಾರದು.\u003c\/p\u003e\n\u003cp\u003eನೂರಾರು ಗಾದೆಗಳಿಗೆ ಕಥೆ ಬರೆದ ಇವರ ಎರಡನೇ ಸಂಚಿಕೆಯೂ ಹೊರಬರಲಿ, ವಿಭಿನ್ನ ರೀತಿಯ ಕಥೆಗಳ ಕರ್ತೃವಾದ ಇವರ ಕಥಾ ಸಂಕಲನಗಳೂ ಪ್ರಕಾಶಿಸಲ್ಪಡಲಿ, ಕನ್ನಡ ಸಾರಸ್ವತ ಲೋಕಕ್ಕೆ ಇವರಿಂದ ಹೆಚ್ಚಿನ ರೀತಿಯ ಕೊಡುಗೆ ಕೊಡುವಂತಾಗಲಿ, ಯಶೋಗಾಥೆ ನಿರಂತರವಾಗಿರಲಿ ಎಂಬ ಶುಭ ಹಾರೈಕೆ.\u003c\/p\u003e\n\u003cp\u003e-ಗಜಾನನ ಭಟ್\u003c\/p\u003e","brand":"Smt. Jayalaxmi Bhat","offers":[{"title":"Default Title","offer_id":46853323653379,"sku":"HB00005250","price":195.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MathigonduGaadheGaadhegonduKathe.jpg?v=1747994374","url":"https:\/\/harivubooks.com\/products\/matigondu-gaadhe-gaadhegondu-kathe-collection-of-stories-jayalaxmi-bhat-kannada-book","provider":"Harivu Books","version":"1.0","type":"link"}