{"product_id":"masti-jeevana-charitregalu-writings-dr-h-s-sathyanarayana-kananda-book","title":"ಮಾಸ್ತಿ ಜೀವನ ಚಿತ್ರಗಳು","description":"\u003cp\u003e'ಮಾಸ್ತಿ ಜೀವನ ಚಿತ್ರಗಳು' ಕೃತಿಯು ಆಧುನಿಕ ಕನ್ನಡ ಸಾಹಿತ್ಯವನ್ನು ತಮ್ಮ ಅನನ್ಯ ಪ್ರತಿಭಾ ಸಂಪತ್ತಿನಿಂದ ಪೊರೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಎಂಬ ಹಿರಿಯ ಜೀವದ ಬದುಕು-ಬರಹಗಳ ಹಲವು ಮಾದರಿಗಳನ್ನು ಸಮರ್ಥವಾಗಿ ಪರಿಚಯಿಸುವ ವಿಶಿಷ್ಟ ಹೊತ್ತಿಗೆಯಾಗಿದೆ. ಹೊಸ ತಲೆಮಾರಿನ ಓದುಗರಿಗೆ ಕಳೆದ ಶತಮಾನದುದ್ದಕ್ಕೂ ಕನ್ನಡ ಸಾರಸ್ವತಲೋಕವನ್ನು ತಮ್ಮ ಸ್ಟೋಪಜ್ಞ ಕಥನದ ಮೂಲಕ ಪ್ರಭಾವಿಸಿದ, ಬರಹದಂತೆಯೇ ದೊಡ್ಡ ಬದುಕನ್ನು ಬಾಳಿದ ಚೇತನವೊಂದರ ವ್ಯಕ್ತಿತ್ವವನ್ನು ಹಲವು ಆಯಾಮಗಳಲ್ಲಿ ಪರಿಚಯಿಸುವ ಈ ಕೃತಿಯನ್ನು ಅತ್ಯಂತ ಸ್ವಾರಸ್ಯಕರವಾಗಿ ಡಾ. ಎಚ್. ಎಸ್. ಸತ್ಯನಾರಾಯಣ ಅವರು ರಚಿಸಿದ್ದಾರೆ.\u003c\/p\u003e\n\u003cp\u003eಹಲವು ಆಯಾಮಗಳಿಂದ ಮಾಸ್ತಿಯವರ ಧೀಮಂತ ಬದುಕನ್ನು ಅರಿಯಲು ಈ ಕೃತಿ ಮಾರ್ಗದರ್ಶಕವಾಗಿದೆ. ಸರಳ-ಸುಲಲಿತ ಭಾಷೆಯ ಬಳಕೆಯಿಂದ ಸೊಗಯಿಸಿರುವ ಆಯಸ್ಕಾಂತೀಯ ಗುಣದ ಇಲ್ಲಿನ ಬರವಣಿಗೆ ಓದುಗರ ಮನವನ್ನು ನಿಸ್ಸಂದೇಹವಾಗಿ ಸೂರೆಗೊಳ್ಳಬಲ್ಲುದು. ಎಲ್ಲಿಂದ ಬೇಕಾದರೂ ಈ ಕೃತಿಯನ್ನು ಓದಿ ಸುಖಿಸಬಹುದು.\u003c\/p\u003e\n\u003cp\u003eನಮ್ಮ ಹಿರಿಯ ತಲೆಮಾರಿನ ಲೇಖಕರನ್ನು ಇಂದಿನವರಿಗೆ ಪರಿಚಯಿಸುವ ಮೂಲಕ ಅವರ ಸಾಹಿತ್ಯ ಪ್ರವೇಶಕ್ಕೆ ಓದುಗರನ್ನು ಸೆಳೆದೊಯ್ಯಬಲ್ಲ ಇಂತಹ ಕೃತಿಗಳು ಸದಭಿರುಚಿಯ ಓದಿಗೆ ಕೀಲಿಕೈಯಾಗಬಲ್ಲವು. ಈ ಆಶಯವೇ ಇಂತಹ ಪುಸ್ತಕಗಳ ಪ್ರಕಟಣೆಯ ಹಿಂದಿನ ಒತ್ತಾಸೆಯಾಗಿದೆ.\u003c\/p\u003e","brand":"Dr. H. S. Sathyanarayana","offers":[{"title":"Default Title","offer_id":47074098741507,"sku":"HB00005345","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MastiJeevanaChitragalu_bba03cf1-2ee3-4a4c-9b99-178c13c4ab87.jpg?v=1754565545","url":"https:\/\/harivubooks.com\/products\/masti-jeevana-charitregalu-writings-dr-h-s-sathyanarayana-kananda-book","provider":"Harivu Books","version":"1.0","type":"link"}