{"product_id":"marulamuniyana-kagga-poems-kavitakrishna-kannada-book","title":"ಮರುಳಮುನಿಯನ ಕಗ್ಗ","description":"\u003cp\u003e'ಕನ್ನಡದ ಭಗವದ್ಗೀತೆ' ಎಂದೇ ಹೆಸರಾಗಿರುವ 'ಮರುಳಮುನಿಯನ ಕಗ್ಗ' ಯುಗದಕವಿ ಡಿವಿಜಿಯವರ ಮೇರು ಕೃತಿ. ಕನ್ನಡ ಸಾರಸ್ವತಲೋಕದ ಅಮರಕೃತಿ; ಯಾವುದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸರ್ವಾಂಗೀಣ ಸತ್ವವನ್ನು ಗರ್ಭಿಕರಿಸಿಕೊಂಡು ಒಡಮೂಡಿದರೆ, ಅದು ಕಾಲ ದೇಶಾದಿ ಗಡಿಗಳನ್ನು ಮೀರಬಹುದು, ಮಾನ್ಯರಿಂದ ಸಾಮಾನ್ಯರೆಲ್ಲರ ಮನಸೂರೆಗೊಳ್ಳಬಹುದು, ತನ್ಮೂಲಕ ಮನುಕುಲಕ್ಕೊಂದು ಕೈದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ ನಿದರ್ಶನ.\u003c\/p\u003e\n\u003cp\u003eಸಮಾಜಕ್ಕೆ ಸಾಹಿತ್ಯದ ಮೂಲಕ ಅಪಾರ ಸತ್ಪರಿಣಾಮವನ್ನುಂಟುಮಾಡುತ್ತಿರುವ ಈ ಕೃತಿಯನ್ನು ಸರಳೀಕರಿಸಿ (ಮೂಲದ ಜೊತೆಗೆ) ಕನ್ನಡಿಗರ ಕೈಗಿಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅದನ್ನು ಸಕಾಲಕ್ಕೆ ಸಾಕಾರಗೊಳಿಸಿಕೊಟ್ಟವರು ಖ್ಯಾತ ಕವಿಗಳಾದ ಶ್ರೀ ಕವಿತಾಕೃಷ್ಣ ಅವರು.\u003c\/p\u003e\n\u003cp\u003e-ಪ್ರಕಾಶಕರು\u003c\/p\u003e\n\u003cp\u003e\u003cbr\u003e\u003c\/p\u003e","brand":"Kavitakrishna","offers":[{"title":"Default Title","offer_id":47866875445507,"sku":"HB00006818","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MarulamuniyanaKagga_c648ace9-a381-4d31-bc00-fa0bddb8671b.jpg?v=1774269831","url":"https:\/\/harivubooks.com\/products\/marulamuniyana-kagga-poems-kavitakrishna-kannada-book","provider":"Harivu Books","version":"1.0","type":"link"}