{"product_id":"mannina-kasusu-critical-study-suresh-nagalamadike-kannada-book","title":"ಮಣ್ಣಿನ ಕಸುವು","description":"\u003cp\u003eಲಂಕೇಶರ ಒಟ್ಟು ಕಥನವನ್ನು ವರ್ತಮಾನದಲ್ಲಿ ಗ್ರಹಿಸುವ ವಿಧಾನಗಳೇನು? ಎಂಬ ಪ್ರಶ್ನೆ ಈ ಅಧ್ಯಯನದ ಉದ್ದಕ್ಕೂ ಹರಡಿಕೊಂಡಿದೆ. ಬದುಕನ್ನು ಕುರಿತು ಲಂಕೇಶರು ಕಟ್ಟಿಕೊಟ್ಟ ಆಯಾಮಗಳನ್ನು ಸೂಕ್ಷ್ಮವಾಗಿ ಕಾಣುವ ಪ್ರಯತ್ನವನ್ನು ಇಲ್ಲಿ ನಡೆಸಲಾಗಿದೆ. ಬಹುಶಃ ವಿಮರ್ಶೆಯ ಕೆಲಸವೂ ಇದೆ ಆಗಿರುತ್ತದೆ. ಇವರು ತಮ್ಮ ಕಥನದಲ್ಲಿ ಹುಡುಕಾಡಿರುವ ಸಂಗತಿಗಳು ಎರಡು ಬಗೆಯವು ಅನಿಸುತ್ತದೆ. ಒಂದು: ಮನುಷ್ಯನ ಭಿನ್ನ ಬಗೆಯ ವರ್ತನೆಗಳು. ಎರಡು: ಗ್ರಾಮ ಮತ್ತು ಜಾತಿಗಳು ಉಂಟುಮಾಡುವ ಅವಸ್ಥೆಗಳು. ಈ ಅಧ್ಯಯನದ ಒಳಲೋಕದಲ್ಲಿ ಈ ಎರಡೂ ಕಾಳಜಿಗಳು ವಿಸ್ತಾರವಾಗಿ ಚರ್ಚೆಗೆ ಒಳಪಟ್ಟಿವೆ. ಲಂಕೇಶರ ಕಥಾ ಜಗತ್ತನ್ನು ಕಾಲಾನುಕ್ರಮದ ಬೆನ್ನಲ್ಲಿ ಚರ್ಚೆ ಮಾಡುವ ಹಾದಿಯನ್ನು ಈ ಬರವಣಿಗೆ ಕೈಬಿಟ್ಟಿದೆ. ಬದಲಾಗಿ ಕೆಲ ಪರಿಕಲ್ಪನೆಗಳ ಜಾಡು ಹಿಡಿದು ವಿಶ್ಲೇಷಣೆ ಮಾಡಲಾಗಿದೆ.\u003c\/p\u003e\n\u003cp\u003e(ಒಳಪುಟಗಳಿಂದ) \u003c\/p\u003e","brand":"Suresh Nagalamadike","offers":[{"title":"Default Title","offer_id":47616927793411,"sku":"HB00005503005","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ManninaKasavu.jpg?v=1768113010","url":"https:\/\/harivubooks.com\/products\/mannina-kasusu-critical-study-suresh-nagalamadike-kannada-book","provider":"Harivu Books","version":"1.0","type":"link"}