{"product_id":"manemaru-novel-satyakama-kannada-book","title":"ಮನೆಮಾರು","description":"\u003cp\u003eದೊಡ್ಡದನ್ನು ಕಾಣಬೇಕು. ದೊಡ್ಡದನ್ನು ಅನುಭವಿಸಬೇಕು.\u003c\/p\u003e\n\u003cp\u003eಇದು ಪುಟ್ಟ 'ಅನಂತ'ನ ಕನಸು.\u003c\/p\u003e\n\u003cp\u003eಆಗ ಕಂಡ ದೊಡ್ಡದು ಹನುಮಂತ. ಹನುಮಂತನ ಬಲ ಮೊದಲ ಸೆಳೆತ. ಆ ಬಲವನ್ನು ಸೇವೆಗೆ ಮುಡಿಪಿಟ್ಟ ಸಮರ್ಪಣೆ ಎರಡನೆಯ ಆಕರ್ಷಣೆ. ಹಾಗಾಗಿ ಈ ಹನುಮಂತನಾಗುವ ಕಡೆಗೆ ಅನಂತ ನಡೆದ.\u003c\/p\u003e\n\u003cp\u003eಆಗ ಮೈಗೆ ಹುಟ್ಟಿದ ಎಚ್ಚರ ಬ್ರಹ್ಮಚರ್ಯ. ಹನುಮಂತನಾಗಬೇಕಾದರೆ ಬ್ರಹ್ಮಚಾರಿಯಾಗಬೇಕು. ಈ ದಿಶೆಯಲ್ಲೇ ನಡೆದ ಅನಂತ. ಕಾಲವೂ ಅನಂತವಿತ್ತು : ನಡೆ ಕಠಿಣವಿತ್ತು. ಉಪವಾಸ, ಭಿಕ್ಷೆ, ಬದುಕಿನ ಪಾಡಾಗಿತ್ತು. ದೊಡ್ಡದನ್ನು ಹುಡುಕುತ್ತ ಹಿಮಾಲಯ ಸೇರಿದ್ದರು.\u003c\/p\u003e\n\u003cp\u003eಹೀಗೆ ಆರಂಭವಾದ 'ಅನಂತ'ಯಾತ್ರೆ' ಒಂದು ಸುಧೀರ್ಘ ಪಯಣ. ದಾರಿಯಲ್ಲಿ-'ಶಾಂತ'ರಾಗಿ 'ಕಪಿಲ'ರಾಗಿ ತೆರೆದುಕೊಂಡರು. ತಾಯಿಯ ದರ್ಶನ, ಶಕ್ತಿ ಸಿದ್ದಿಗಳ ಬಲಕೂಡಿ ಬೆಳೆದರು. ತುಂಬ ಪಾಕದ ಬಳಿಕ 'ಸತ್ಯಕಾಮ'ರಾದರು.\u003c\/p\u003e\n\u003cp\u003eಕಡೆಯತನಕವೂ ತಾನು 'ಸತ್ಯಕಾಮ' ಎಂಬ ಸೌಜನ್ಯ ತೊರೆಯಲಿಲ್ಲ.\u003c\/p\u003e\n\u003cp\u003eತಾನೇ ಸತ್ಯ ಎಂಬ ಹಠವಿಲ್ಲ.\u003c\/p\u003e\n\u003cp\u003eಮಗುವಿಗೂ ನಮಿಸುವ ದೊಡ್ಡಗುಣ.\u003c\/p\u003e\n\u003cp\u003eಚಿಕ್ಕದನ್ನು ತಲೆಯಮೇಲೆ ಹೊತ್ತು ನಲಿವ ಸುಖ.\u003c\/p\u003e\n\u003cp\u003eದೊಡ್ಡದು 'ಸತ್ಯಕಾಮ'ವಾಗಿಯೇ ಉಳಿಯಿತು \u003c\/p\u003e","brand":"Satyakama","offers":[{"title":"Default Title","offer_id":47602536218883,"sku":"HB0000550188","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Manemaru.jpg?v=1767681480","url":"https:\/\/harivubooks.com\/products\/manemaru-novel-satyakama-kannada-book","provider":"Harivu Books","version":"1.0","type":"link"}