Skip to product information
1 of 1

ಡಾ. ವಸುಂಧರಾ ಭೂಪತಿ

ಮನೆ ಔಷಧಿ

ಮನೆ ಔಷಧಿ

Publisher: ವಸಂತ ಪ್ರಕಾಶನ

Regular price Rs. 120.00
Regular price Sale price Rs. 120.00
Sale Sold out
Shipping calculated at checkout.

ಕೋವಿಡ್-19 ಆರಂಭವಾದಾಗಿನಿಂದ ಮನೆ ಔಷಧಿಗೆ ಎಲ್ಲಿಲ್ಲದ ಮಹತ್ವ ಬಂದಿದೆ. 'ಕಷಾಯ'ದ ಹೆಸರೇ ಕೇಳದವರು ಕೂಡ ದಿನಕ್ಕೆರಡು ಬಾರಿ ಕಷಾಯ ಕುಡಿಯಲು ಆರಂಭಿಸಿದರು. ಆಯುರ್ವೇದ ಗಿಡಮೂಲಿಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದದ್ದು ಸುಳ್ಳಲ್ಲ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಹಲವಾರು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು, ನಾವು ದಿನನಿತ್ಯ ಬಳಸುವ ಅನೇಕ ಆಹಾರಪದಾರ್ಥಗಳಲ್ಲಿ ಅಡಗಿರುವ 'ರೋಗನಿರೋಧಕ ಶಕ್ತಿ'ಯ ಬಗ್ಗೆ ಅರಿವು ಮೂಡಿಸಲು 'ರೋಗನಿರೋಧಕ ಶಕ್ತಿಗೆ ಮನೆ ಔಷಧಿ' ಕೃತಿ ಸಹಾಯ ಮಾಡುತ್ತದೆ. ಅರಶಿನದ ಜೀವ ವಿರೋಧಕ ಗುಣ, ಅಮೃತ ಬಳ್ಳಿಯ ವೈರಾಣು ನಿರೋಧಕ ಗುಣ, ಜೀವಸತ್ವಗಳ ಭಂಡಾರ ಚಕ್ರಮುನಿ, ಕ್ರಿಮಿರೋಧಕ ಬೇವು, ಜೀರ್ಣಶಕ್ತಿ ಹೆಚ್ಚಿಸುವ ಜೀರಿಗೆ, ಅಶ್ವಗಂಧದ ಶಕ್ತಿ ಸಾಮರ್ಥ್ಯ, ಮುರುಗಲದ ಬೊಜ್ಜು ಕರಗಿಸುವ ಕಾರ್ಯ, ಹಿಪ್ಪಲಿಯ ವಿಶೇಷ ಶಕ್ತಿ - ಹೀಗೆ ಅನೇಕ ಔಷಧೀಯ ಗಿಡಮೂಲಿಕೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಅಡುಗೆ ಮನೆ ಒಂದು ಆರೋಗ್ಯದ ಅರಮನೆ ಎಂಬುದು ಮನದಟ್ಟಾಗುತ್ತದೆ. ಮನೆ ಔಷಧಿಯ ಹೆಚ್ಚುಗಾರಿಕೆಯೊಂದಿಗೆ ಎಷ್ಟು ಮತ್ತು ಯಾವ ಪ್ರಮಾಣದಲ್ಲಿ ಬಳಸಬೇಕೆಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿದೆ. ಕೊರೋನಾದಂತಹ ಸಾಂಕ್ರಾಮಿಕ ರೋಗಗಳಿಗೆ, ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಔಷಧಗಳ ಚಿತ್ರಣವಿದೆ.

ಡಾ. ವಸುಂಧರಾ ಭೂಪತಿ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)