{"product_id":"mahaprasthana-religious-dr-k-s-narayanacharya-kannada-book","title":"ಮಹಾಪ್ರಸ್ಥಾನ","description":"\u003cp data-path-to-node=\"3\"\u003e\"ಎಷ್ಟಾದರೂ ನಾನು ಸ್ತ್ರೀ.. ಬರೀ ಭೂಮಿ... ನನ್ನಲ್ಲಿ ಬೆಳೆದುದನ್ನು ರೈತ ಕೊಯ್ದು ಬಿಡುತ್ತಾನೆ. ನಾನು ಮರ, ಗಿಡ, ಬಳ್ಳಿ ಏನು ಬೆಳೆದರೂ, ಅಚಲೆ, ಜಡ. ಆ ಮರಗಳ ನೆರಳೂ, ಹೂ, ಹಣ್ಣು, ಕಾಯಿ, ಎಲೆ ಎಲ್ಲಾ ಬೇರೆಯವರಿಗೇ! ಈ ಪರಾರ್ಥವು ಸ್ವಾಭಾವಿಕ ಎಂದರೂ ಮನಸ್ಸು ಒಗ್ಗಿಕೊಳ್ಳುತ್ತಿಲ್ಲ. ಜಡ ಎಂದೆ. ಅದು ಭಾಷೆಯ, ರೂಪಕದ ಮಿತಿ. ಆದರೆ ನನಗೆ ಭಾವನೆ ಇದೆಯಲ್ಲ? ಮನಸ್ಸು ಇದೆಯಲ್ಲ? ಮನಸ್ಸನ್ನೂ ಜಡ ಎನ್ನುತ್ತಾರೆ. ಆದರೆ ಅದರ ಮೇಲೆ ದರ್ಬಾರು ನಡೆಸುವ ಆ ಇನ್ನೊಂದು — ಆತ್ಮಾ, ಚೈತನ್ಯ — ಅದರ ನೋವು ಇದೆಯಲ್ಲ? ಈ ಪರಿಸರದ ಹಳ್ಳಿಗರಿಗೂ ಅನುಭವಕ್ಕೆ ಬರುತ್ತಿದ್ದರೂ ನಾನು ಸ್ಪಂದಿಸುವಂತಿಲ್ಲದ ಒಂದು ಮೂಕತನ. ಈ ಸ್ಥಿತಿ ಯಾರ ಹಾರೈಕೆ? ಯಾರ ಹರಕೆ? ಯಾತರ ಹೊದ್ದಿಕೆ?\u003c\/p\u003e\n\u003cp data-path-to-node=\"4\"\u003eನಾನು ಅಹಲ್ಯೆಯನ್ನು ನೆನೆಯುತ್ತೇನೆ. ಅವಳು ನಿಜವಾಗಿ ಕಲ್ಲಾಗಿಯೇ ಹೋಗಿದ್ದವಳು. ನನ್ನದು ಅದಕ್ಕಿಂತ ಕೆಟ್ಟ ಸ್ಥಿತಿ. ಒಂದು ವೇಳೆ ಮನುಷ್ಯರೂಪಿನಲ್ಲೇ ಅಹಲ್ಯೆ ಶಾಪಕಾಲ ನೂಕುವಂತಾಗಿದ್ದರೆ?... ಅಹಲ್ಯೆಯೇ ಬರುತ್ತಾಳೆ. ಇಗೋ ಮನಃಪಟಲದಲ್ಲಿ...\"\u003c\/p\u003e\n\u003cp data-path-to-node=\"5\"\u003e\u003cb data-path-to-node=\"5\" data-index-in-node=\"0\"\u003e- ದ್ರೌಪದಿ\u003c\/b\u003e\u003c\/p\u003e","brand":"Dr. K. S. Narayanacharya","offers":[{"title":"Default Title","offer_id":47615096717571,"sku":"HB00005502994","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/mahaprastana-coverpage1-copy_1.jpg?v=1768052692","url":"https:\/\/harivubooks.com\/products\/mahaprasthana-religious-dr-k-s-narayanacharya-kannada-book","provider":"Harivu Books","version":"1.0","type":"link"}