{"product_id":"mahakala-poem-h-s-shivaprakash-kannada-book","title":"ಮಹಾಕಾಲ","description":"\u003cp\u003eಮಹಾಕಾಲನ ಪ್ರಜ್ಞಪ್ತಿ ನನ್ನನ್ನು ಕಾಡತೊಡಗಿದ ಏಕಾಕಿತನದ ನಿಶ್ಚಲ ಪಾತಾಳಗಳಲ್ಲಿ ಇಲ್ಲಿನ ಬಹುತೇಕ ಕವಿತೆಗಳು ಹುಟ್ಟಿದವು. ಆ ಕತ್ತಲಿನ ಕತ್ತಲಿನಲ್ಲಿ ಹುದುಗಿದ್ದ ಅಲೌಕಿಕ ಅಡಗು ಬೆಳಗುಗಳಾಗಿ.\u003c\/p\u003e\n\u003cp\u003eಆ ಮಹಾಕಾಲ-ಮಹಾಕಾಲಿಯರು ಈ ಸಂಕಲನದ ಬಹುತೇಕ ಕವಿತೆಗಳ ಭಿತ್ತಿ, ಭೂಮಿಕೆ. ಇಲ್ಲಿ ಮಹಾಕಾಲ-ಮಹಾಕಾಲಿಯರು ದೇವರುಗಳು ಅನ್ನುವುದಕ್ಕಿಂತ ಹೆಚ್ಚಾಗಿ ಕಾಲದೇಶಾನುಭವಗಳ ಹೊರ ಆಯಾಮಗಳು ಸಾಧ್ಯತೆಗಳು.\u003c\/p\u003e\n\u003cp\u003eಈ ಬಗೆಯ ಅನುಭವ, ಅನುಭಾವ ಕರೋನಾದ ಕರಾಳ ಇರುಳುಗಳಲ್ಲಿ ಆವಿರ್ಭವಿಸಿದರೂ ಅದರಾಚೆಗಿನ ಸಾಧಾರಣೀಕತೆಯೂ ಅದಕ್ಕಿದೆ ಅಂದುಕೊಂಡಿದ್ದೇನೆ. ಕಾಲದೇಶಗಳ ಗತಿಶೀಲತೆಯ ಯಾದೃಚ್ಛಿಕತೆಯ ಅನುಭವ ತೀವ್ರ ಅನುಭವಗಳ ಸಂದರ್ಭದಲ್ಲಿ ಎಲ್ಲರಿಗೂ ಆಗುತ್ತದೆ.\u003c\/p\u003e\n\u003cp\u003eಆಗ ಜಗವೇ ಅನಂತ ಇಲ್ಲಿ ಎಂಬುದೇ ಎಲ್ಲೆಲ್ಲೂ\u003c\/p\u003e","brand":"H.S. Shivaprakash","offers":[{"title":"Default Title","offer_id":47602940870915,"sku":"HB0000550250","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/mahakala.jpg?v=1767698930","url":"https:\/\/harivubooks.com\/products\/mahakala-poem-h-s-shivaprakash-kannada-book","provider":"Harivu Books","version":"1.0","type":"link"}