{"product_id":"maha-yogini-novel-suresh-somapura-to-kannada-m-v-nagarajarao-kannada-book","title":"ಮಹಾ ಯೋಗಿನಿ","description":"\u003cp\u003eಇಂದೊಂದು ರೋಚಕ ಕಥೆ. ಕೇವಲ ರೋಚಕ ಕಥೆ ಮಾತ್ರವಲ್ಲ ಸತ್ಯಕಥೆ, ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ, ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ 'ಕರ್ಣ-ಪಿಶಾಚಿನಿ' ಅವರ ವಶವಾಗುತ್ತದೆ.\u003c\/p\u003e\n\u003cp\u003eಸುರೇಶ್ ಸೋಮಪುರ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಗಳಿಸಿದ ಚಮತ್ಕಾರಗಳನ್ನು ಮಾನವ ಕಲ್ಯಾಣಕ್ಕಾಗಿ ಪ್ರಯೋಗಿಸಲು ನಿರ್ಧರಿಸುತ್ತಾರೆ. ಮನುಷ್ಯ ತನ್ನ ಜೀವನವನ್ನು ಹೇಗೆ ಕಳೆಯಬೇಕೆಂದು ಪ್ರತಿಪಾದಿಸುತ್ತಾರೆ.\u003c\/p\u003e\n\u003cp\u003eಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ, ಮನುಷ್ಯ, ಅಂಧಶ್ರದ್ಧೆಯಿಂದ ಹೊರ ಬರಬೇಕಿದೆ ಎನ್ನುತ್ತಾರೆ. ಬದುಕಲು ಹೊಸ ಮಾರ್ಗವನ್ನು ಕಂಡುಕೊಳ್ಳಲು ಇಲ್ಲಿಯ ಸತ್ಯಕತೆ ಪ್ರೇರಣೆ ನೀಡುತ್ತದೆ.\u003c\/p\u003e\n\u003cp\u003e\"ಅಘೋರಿಗಳ ನಡುವೆ\" ಕೃತಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿರುವ ದಿ।। ಸುರೇಶ್ ಸೋಮಪುರ ಅವರ ಮತ್ತೊಂದು ರೋಚಕ ನೈಜಕತೆ ನಿಮ್ಮ ಮುಂದಿದೆ.\u003c\/p\u003e","brand":"Suresh Somapura, To Kannada : M. V. Nagarajarao","offers":[{"title":"Default Title","offer_id":46101866086659,"sku":"HB00005019","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MahaYogini.jpg?v=1730699765","url":"https:\/\/harivubooks.com\/products\/maha-yogini-novel-suresh-somapura-to-kannada-m-v-nagarajarao-kannada-book","provider":"Harivu Books","version":"1.0","type":"link"}