{"product_id":"madhukar-maala-missing-case-thriller-novel-kannada-book","title":"ಮಧುಕರ್ ಮಾಲಾ ಮಿಸ್ಸಿಂಗ್ ಕೇಸು","description":"\u003cp\u003e\"ನೆನ್ನೆಯವರೆಗೂ ಚೆನ್ನಾಗಿ ಲವಲವಿಕೆಯಿಂದ ಓಡಾಡಿಕೊಂಡಿದ್ದ ಹುಡುಗಿ ಇದ್ದಕಿದ್ದ ಹಾಗೆ ಏಕೆ ಹೀಗೆ ವರ್ತಿಸಲು ಶುರು ಮಾಡಿದ್ದಾಳೆ? ಮಲ್ಲಾಪುರ ಎಂಬ ಊರಿನ ಮತ್ತು ಇನ್ಸೆಕ್ಟರ್ ಮಧುಕರ್ ಬಗ್ಗೆ ಅವಳಿಗೆ ಹೇಗೆ ತಿಳಿಯಿತು?? ನಾವು ಕೊಡಗಿಗೆ ಹೋಗದೆ ಸುಮಾರು ವರ್ಷಗಳಾಯಿತಲ್ಲ? ಯಾರಾದರು ಹೇಳಿದ್ದನ್ನು ಕೇಳಿಸಿಕೊಂಡಿದ್ದಾಳೆಯೇ?ಅಥವಾ ಸತ್ಯವನ್ನೇ ಹೇಳುತ್ತಿದ್ದಾಳಾ?'' ಎಂದು ಬೆಂಗಳೂರಿನ ರಾಮಪ್ರಸಾದ್ ತನ್ನ ಐದರ ಹರೆಯದ ಮಗಳಾದ ಪಲ್ಲವಿಯ ವಿಚಿತ್ರ ವರ್ತನೆಯ ಕುರಿತು ಯೋಚಿಸುತ್ತಿರುವಷ್ಟರಲ್ಲಿ ಅವನ ನೋಕಿಯಾ ಕೀಪ್ಯಾಡ್ ಫೋನು ಒಂದೇ ಸಮನೆ ಮೊರೆಯಲು ಶುರುವಿಟ್ಟುಕೊಂಡಿತು.\u003c\/p\u003e\n\u003cp\u003eಇತ್ತ ಅದಕ್ಕಾಗಿಯೇ ಕಾಯುತ್ತಿರುವಂತೆ ತೋರುತ್ತಿದ್ದ ರಾಮಪ್ರಸಾದನು ತಕ್ಷಣವೇ ಕರೆಯನ್ನು ಸ್ವೀಕರಿಸಿ ''ಹೇಳು ಪ್ರಶಾಂತ್,ನಾನು ಕೇಳಿದ್ದನ್ನ ವಿಚಾರುಸ್ಥ?” ಎಂದು ತನ್ನ ಗಂಭೀರ ದನಿಯಲ್ಲಿ ಕೇಳುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಅತ್ತ ಕಡೆಯಿದ್ದ ದನಿಯು \"ಹ್ಯಾ ಮಲ್ಲಾಪುರ ಸ್ಟೇಷನಲ್ಲಿ ಈ ಹಿಂದೆ ಮಧುಕರ್ ಅನ್ನೋ ಇನ್ನೆ ಕ್ಟರ್ ಇದ್ರಂತೆ.ಅವರು ಕೆಲಸ ಮಾಡಿದ ಕೊನೆಯ ಸ್ಟೇಷನ್ ಅದು' ಎಂದು ನಂತರ ತನ್ನ ಮಾತನ್ನು ಮುಂದುವರೆಸಿ \"ಅಂದಾಗೆ ನಿಂಗೆ ಇನ್ನೊಂದು ವಿಷಯ ಹೇಳೇಕಿತ್ತು.ಆ ಇನ್ಸೆಕ್ಟರ್ ಮಧುಕರ್ ಮಲ್ಲಾಪುರದಿಂದ ಕಾಣೆಯಾಗಿ ಹತ್ರತ್ರ ಐದು ವರ್ಷದ ಮೇಲಾಯಿತಂತೆ. ಆ ಕಾಣೆಯ ವಿಚಾರವು ಇನ್ನೂ ರಹಸ್ಯವಾಗೇ ಉಳಿದಿದೆಯಂತೆ\" ಎ೦ಬುದನ್ನು ಕೇಳಿಸಿಕೊಂಡ ರಾಮಪ್ರಸಾದ್ ಒಮ್ಮೆ ನಡುಗಿಹೋದ. ಅವನದನ್ನು ನಿರೀಕ್ಷಿಸಿರಲಿಲ್ಲ...!\u003c\/p\u003e","brand":"Koushik Koodurasthe","offers":[{"title":"Default Title","offer_id":48430042808579,"sku":"HB00007274","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-06-17at5.17.30PM.jpg?v=1781697825","url":"https:\/\/harivubooks.com\/products\/madhukar-maala-missing-case-thriller-novel-kannada-book","provider":"Harivu Books","version":"1.0","type":"link"}