{"product_id":"maata-mantra-modi-essays-dr-s-c-ramesh-kannada-book","title":"ಮಾಟ-ಮಂತ್ರ-ಮೋಡಿ","description":"\u003cp\u003eಜಾನಪದ ಅಧ್ಯಯನ ಶಿಸ್ತುಗಳು ಹಲವು ನೆಲೆಯಲ್ಲಿ ರೂಪ ಪಡೆಯುತ್ತಲಿವೆ. ಅದೇ ರೀತಿ ಜಾನಪದ ಅಧ್ಯಯನ ವಿಷಯ ವ್ಯಾಪ್ತಿಯೂ ಹಲವು ಪ್ರಕಾರಗಳಲ್ಲಿ ವಿಸ್ತಾರಗೊಳ್ಳುತ್ತಲಿವೆ. ಮಳೆ-ಬೆಳೆ, ಊಟ-ಉಪಚಾರ, ಉಡುಗೆ-ತೊಡುಗೆ, ಆಚರಣೆ-ನಂಬಿಕೆ, ಸಂಪ್ರದಾಯ-ಪರಂಪರೆ ಹೀಗೆ ಮಾನವ ಹುಟ್ಟಿನಿಂದ ಸಾಯುವವರೆಗಿನ ಎಲ್ಲ ಪ್ರಕ್ರಿಯೆಗಳಿಗೆ ಜನಪದರಲ್ಲಿ ಒಂದು ರೀತಿಯ ತಾದಾತ್ಮ ಇರುವುದನ್ನು ಕಾಣುತ್ತೇವೆ. ದೇಶೀ ಬದುಕಿನ ಜನಪದ ಮನೋಮಂದಿರದಲ್ಲಿ ಹುದುಗಿರುವ ಜ್ಞಾನ ಸಂಪತ್ತನ್ನು ಶೈಕ್ಷಣಿಕ ಶಿಸ್ತಿನಿಂದ ಅಧ್ಯಯನ ಮಾಡುವ ಉದ್ದೇಶದಿಂದ ಜಾನಪದ ಅಧ್ಯಯನ ವಿಭಾಗ 'ದೇಶೀ ಸಮ್ಮೇಳನವನ್ನು' ಹುಟ್ಟುಹಾಕಿತ್ತು. ಈ ಸಮ್ಮೇಳನದಲ್ಲಿ ಮಂಡಿತವಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದರ ಮೂಲಕ ಪರಿಶಿಷ್ಟ ಸಾಹಿತ್ಯದ ಆಶೋತ್ತರಗಳನ್ನು ಶಿಷ್ಟಸಾಹಿತ್ಯದ ವಿದ್ವತ್ ಜನತೆಗೆ ತೋರಿಸಬೇಕೆಂಬ ಹಂಬಲವೂ ನಮ್ಮದಾಗಿದೆ. ಈ ಉದ್ದೇಶದಿಂದ ಗಂಗಾವತಿಯಲ್ಲಿ ನಡೆದ 'ಮಾಟ-ಮಂತ್ರ-ಮೋಡಿ' ಕುರಿತು ದೇಶಿ ಸಮ್ಮೇಳನದಲ್ಲಿ ಮಂಡಿತವಾದ ನಾಲ್ಕು ಗೋಷ್ಠಿಯ ವಿಷಯಗಳನ್ನು ಅಚ್ಚುಕಟ್ಟಾಗಿ ಈ ಕೃತಿಯಲ್ಲಿ ಸಂಪಾದಿಸಿಕೊಡಲಾಗಿದೆ. ನಮ್ಮ ಪ್ರಾಚೀನರ ವಿಶಿಷ್ಟ ವಿದ್ಯೆ ಮತ್ತು ಸಾಧನೆಯ ಜ್ಞಾನವನ್ನು ಹಾಗೂ ಅದರ ಹಿಂದಿರುವ ವೈಜ್ಞಾನಿಕ ಮನೋಧರ್ಮವನ್ನು ಅರ್ಥ ಮಾಡಿಕೊಡುವಲ್ಲಿ ಈ ಕೃತಿಯ ಮಹತ್ವವಿದೆ. ಈ ಕೃತಿಯನ್ನು ಕನ್ನಡ ವಿದ್ವಜ್ಜನತೆ ಪ್ರೀತಿಯಿಂದ ಸ್ವೀಕರಿಸುತ್ತಾರೆಂದು ಭಾವಿಸುತ್ತೇನೆ.\u003c\/p\u003e\n\u003cp\u003e-ಡಾ. ಸ.ಚಿ. ರಮೇಶ\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. S. C. Ramesh","offers":[{"title":"Default Title","offer_id":47880743321859,"sku":"HB00006858","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Maata-Mantra-Modi_fa5ade86-9942-438d-959e-298f970deec0.jpg?v=1774605049","url":"https:\/\/harivubooks.com\/products\/maata-mantra-modi-essays-dr-s-c-ramesh-kannada-book","provider":"Harivu Books","version":"1.0","type":"link"}