{"product_id":"krishna-bharata-life-and-wisdom-of-lord-sri-krishna-gopalakrishna-kuntini-kannada-book","title":"ಕೃಷ್ಣ ಭಾರತ","description":"\u003cp class=\"x_MsoNormal\"\u003e\u003cspan lang=\"KN\" data-olk-copy-source=\"MessageBody\"\u003eಮಹಾಭಾರತದ ನಾಯಕ ಯಾರೇ ಇರಬಹುದು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಆದರೆ ನಿರ್ಣಾಯಕ ಖಂಡಿತಕ್ಕೂ ಕೃಷ್ಣನೇ.\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಯಾವಾಗ ಕೃಷ್ಣ ಮಹಾಭಾರತದೊಳಗೆ ಬಂದನೋ ಆಮೇಲೆ ಅವನು ಮರಳಲಿಲ್ಲ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಆತ ಜಗತ್ತಿನ ಮೊದಲ ರಾಜಕೀಯ ತಂತ್ರಗಾರ. ಭಾಗವತದಿಂದ ಭಾರತಕ್ಕೆ ಬಂದವನು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಕೊಳಲು ಬಿಟ್ಟು ಚಕ್ರ ಹಿಡಿದವನು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಎಂದೂ ಹಿಂತಿರುಗಿ ನೋಡದವನು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಹೊರಟಲ್ಲಿಗೆ ಮತ್ತೆಂದೂ ಮರಳದವನು ಕೃಷ್ಣ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಸಂಧಾನಕ್ಕೆ ಹೋದವನು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಶಾಂತಿಯನ್ನು ಕೇಳಿದವನು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಸಂಧಾನ ಮುರಿದು ಬಿದ್ದೊಡನೆ ಎದ್ದು ನಡೆದವನು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಹಸ್ತಿನಾವತಿಯ ಗಡಿ ದಾಟುವ ಮುನ್ನವೇ ಪಾಂಡವರನ್ನೂ ಕೇಳದೇ ಮಹಾಯುದ್ಧಕ್ಕೆ ಮುಹೂರ್ತ ಇಟ್ಟ ಕೃಷ್ಣ ಶಾಂತಿ ಮತ್ತು ಸಂಘರ್ಷಗಳ ಬಿಂದು ಮಧ್ಯನಾಗಿ ನಿಂತ. ಆ ಬಿಂದುವಿನಲ್ಲೇ ಅವನ ವಿಶ್ವರೂಪವಿತ್ತು.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಅಂಥ ಕೃಷ್ಣನ ಕುರಿತ ನೋಟ ಇಲ್ಲಿದೆ. ಇದು ಭಕ್ತಿಸಾರವಲ್ಲ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಭಾವನೆಯ ಹರಿವಲ್ಲ. ಯಥಾವತ್ತಾಗಿ ವ್ಯಾಸರು ತೋರಿಸಿದ ಕೃಷ್ಣನ ಮರು ನಿರೂಪಣೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಇರುವುದೆಲ್ಲವಕ್ಕೂ ಕಾಲವೇ ಮೂಲ. ಕಾಲವೇ ಸರ್ವಜಗತ್ತಿನ ಬೀಜ. ಕಾಲವೇ ತಾನು ಬಯಸಿದಾಗ ಪುನಃ ಎಲ್ಲವನ್ನೂ ಹಿಂದೆ ಸೆಳೆದುಕೊಳ್ಳುತ್ತದೆ ಎಂಬ ಕೃಷ್ಣನ ಜೊತೆಗೆ ಕಾಲದ ಪಯಣ.\u003c\/span\u003e\u003c\/p\u003e","brand":"Gopalakrishna Kuntini","offers":[{"title":"Default Title","offer_id":47418326581507,"sku":"HB00005469","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KrishnaBharata.jpg?v=1762842707","url":"https:\/\/harivubooks.com\/products\/krishna-bharata-life-and-wisdom-of-lord-sri-krishna-gopalakrishna-kuntini-kannada-book","provider":"Harivu Books","version":"1.0","type":"link"}