Bharathisutha
Publisher - ಗೀತಾಂಜಲಿ ಪ್ರಕಾಶನ
- Free Shipping above ₹200
- Cash on Delivery (COD) Available
Pages - 294
Type - Hardcover
Couldn't load pickup availability
ಇದು ಭಾರತೀಸುತರ ಪ್ರಗತಿಶೀಲ ಹಿನ್ನೆಲೆಯ ಚಿಕ್ಕ ಕಾದಂಬರಿ. ಕೊಡಗಿನ ಕಾಫಿ ತೋಟಗಳಲ್ಲಿ ದುಡಿಯುವ ಪಣಿಯರ ದಯನೀಯ ಬದುಕಿನ ಚಿತ್ರಣವನ್ನು ಕಾಫಿ ಎಸ್ಟೇಟಿನ ದೊರೆಯ ಅಮಾನವೀಯ ಕ್ರೌರ್ಯವನ್ನು ಇಲ್ಲಿ ಚಿತ್ರಿಸಲಾಗಿದೆ. ಕೊಳುಂಬನ ಅತ್ಯಂತ ಪ್ರೇಮದ ಮಡದಿ ದೇಚುವೆಂಬ ಸುಂದರ ಹೆಣ್ಣನ್ನು ತನ್ನ ಬಂಗಲೆಗೆ ಬಲವಂತವಾಗಿ ಸೇರಿಸಿಕೊಳ್ಳುವ, ಅವಳ ಮೇಲೆ ನಿತ್ಯವೂ ಲೈಂಗಿಕ ದೌರ್ಜನ್ಯ ಎಸಗುವ ದೊರೆ, ತನ್ನೆದುರು ದೊರೆಯ ಐಶ್ವರ್ಯವೇ ತೆರೆದುಕೊಂಡು ಬಿದ್ದಿದ್ದರೂ ತನ್ನ ಪ್ರೀತಿಯ ಕೊಳುಂಬನಿಗಾಗಿ ಪರಿತಪಿಸುವ, ಕಾಯುವ, ಕಮರುವ, ದೇಚುವಿನ ಪರಿಶುಭ್ರ ಪ್ರೇಮದ ಸೆಳೆತಗಳು ಆರ್ದ್ರಗೊಳಿಸುತ್ತವೆ. ಕಡೆಗೂ ದೊರೆಯ ದೌರ್ಜನ್ಯ ಸೋಲುವುದೇ? ದೂರದಲ್ಲಿ ಅಡಗಿ ದೇಚುವಿಗಾಗಿ ಕೊಳಲೂದುವ ಕೊಳುಂಬನ ಕೊಳಲಿನ ಕರೆ ಎಲ್ಲ ಬೇಲಿಗಳನ್ನು ದಾಟಿ ಅವನೆಡೆಗೆ ಸಾರುವಂತೆ ದೇಚುವನ್ನು ಪ್ರೇರೇಪಿಸುವುದೇ? ಬಡವರ ಪ್ರೇಮ ಗೆಲ್ಲುವುದೇ? ಎಲ್ಲವೂ ಈ ಕಾದಂಬರಿಯಲ್ಲಿ ಅಡಕವಾಗಿದೆ.
