{"product_id":"ketakiya-bana-novel-shridhar-balegar-kannada-book","title":"ಕೇತಕಿಯ ಬನ","description":"\u003cp\u003eಲೇಖಕರ ಮಾತು\u003c\/p\u003e\n\u003cp\u003eಇದು ಬೆರಳಿಂದ ಬರೆದ ಕೃತಿ ಅಲ್ಲ; ಕರುಳಿಂದ ಹರಿದದ್ದು. ಬೇರೊಳದಿಂದ ಬೆರಗಿನ ಬಯಲಿಗೆ ಬಂದು ಹಲವು ಟಿಸಿಲೊಡೆದು ಹಬ್ಬುವ ಬಳ್ಳಿಯ ಬಿಡುಗಡೆಯ ' ಸಂತೋಷವನ್ನು ಈ ಕಾದಂಬರಿಯ ಬರವಣಿಗೆಯಲ್ಲಿ ನಾನು ಅನುಭವಿಸಿದ್ದೇನೆ. ಕಾದಂಬರಿ ಬರೆಯಬಲ್ಲೆನೆಂಬ ವಿಶ್ವಾಸವನ್ನು ಮೂಡಿಸಿದ ಪ್ರೊ. ಕೀರ್ತಿನಾಥ ಕುರ್ತಕೋಟಿ, ಪ್ರೀತಿಯಿಂದ ಒತ್ತಾಯಿಸುತ್ತಲೇ ಇದ್ದ ಶ್ರೀ. ಜಯಂತ ಕಾಯ್ಕಿಣಿ ಮತ್ತು ಡಾ|| ಶ್ಯಾಮಸುಂದರ ಬಿದರಕುಂದಿ, ಹಸ್ತಪ್ರತಿಯನ್ನು ಓದಿ ಪ್ರೋತ್ಸಾಹಿಸಿದ ಶ್ರೀ. ಮೂರ್ತಿ ಅಂಕೋಲೆಕರ್ ಮತ್ತು ಶಕಕ್ಕ, ಬರವಣಿಗೆಯ ನಡಿಗೆಯನ್ನು ನಿರಂತರ ಚುರುಕುಗೊಳಿಸುತ್ತಲೇ ಇದ್ದ ಸಮೀರ ಜೋಶಿ, ಎಚ್ಚರಿಕೆಯಿಂದ ಕರಡು ಪ್ರತಿಯನ್ನು ಪರಿಷ್ಕರಿಸಿದ ಸರೋಜ, ಮುಖಪುಟಕ್ಕೆ ಅರ್ಥಪೂರ್ಣ ಚಿತ್ರ ಬರೆದ ಶ್ರೀ.ರಾವ್ ಬೈಲ್, ಅಂದವಾಗಿ ಮುದ್ರಿಸಿ ಪ್ರಕಟಿಸುತ್ತಿರುವ ಮನೋಹರ ಗ್ರಂಥಮಾಲೆಯ ಡಾ|| ರಮಾಕಾಂತ ಜೋಶಿ ಇವರೆಲ್ಲರನ್ನು ಕೃತಜ್ಞತೆಯಿಂದ ನೆನೆಯುವೆ. \u003c\/p\u003e\n\u003cp\u003e-ಶ್ರೀಧರ ಬಳಗಾರ\u003c\/p\u003e","brand":"Shridhar Balegar","offers":[{"title":"Default Title","offer_id":47595677778179,"sku":"HB0000550170","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KetakiyaBana.jpg?v=1767435278","url":"https:\/\/harivubooks.com\/products\/ketakiya-bana-novel-shridhar-balegar-kannada-book","provider":"Harivu Books","version":"1.0","type":"link"}