{"product_id":"kedarana-kashi-yoga-and-spirituality-swami-sivaatmaananda-puri-kannada-book","title":"ಕೇದಾರನ ಕಾಶಿ","description":"\u003cp\u003eಕಾಶೀಕ್ಷೇತ್ರವು ಪ್ರಸಿದ್ಧ ಯಾತ್ರಾಸ್ಥಲವಷ್ಟೇ ಅಲ್ಲ, ಭಾರತೀಯ ಯೋಗಾಧ್ಯಾತ್ಮ ಚೈತನ್ಯದ ಮೂಲಕೇಂದ್ರವೂ ಹೌದು! ಕಾಶಿಯ ವಿಶ್ವೇಶ್ವರ ಜ್ಯೋತಿರ್ಲಿಂಗವು ಭಾರತೀಯ ಯೋಗಾಧ್ಯಾತ್ಮ ಶಕ್ತಿಯನ್ನು ಯುಗ ಮನ್ವಂತರಗಳನ್ನೂ ದಾಟಿದ ಕಲ್ಪಾಂತ್ಯದವರೆಗೂ ಸಂರಕ್ಷಿಸುವ ಕಲ್ಪಜ್ಯೋತಿ\/ ವಿಶ್ವೇಶ್ವರ ಜ್ಯೋತಿರ್ಲಿಂಗದ ಅವಯವಗಳಾಗಿವೆ ಕಾಶಿಯಲ್ಲಿರುವ ಉಳಿದ ಅಂಗಗಳು! ಗಂಗಾ ನದಿಯು ವಿಶ್ವೇಶ್ವರ ಜಟೆಯ ಚಂದ್ರಕಳೆಯಂತೆ ಕಾಶಿಯಲ್ಲಿ ಶೋಭಿಸುತ್ತ ಚಂದ್ರ ಬೆಳಗಿನ ಪ್ರಭೆ ಪೂಸುತ್ತಿದ್ದಾಳೆ! ಕಾಶಿಕ್ಷೇತ್ರದ ತಳಹದಿಯು ಒಂದೊಂದು ಯುಗದಲ್ಲಿಯೂ ಒಂದೊಂದು ಆಕಾರದಲ್ಲಿ ಭದ್ರಗೊಳ್ಳುತ್ತದೆ!\u003c\/p\u003e\n\u003cp\u003eಭಾರತ ದೇಶವು ಒಬ್ಬ ಯೋಗಸಾಧಕನಂಥ ಯೋಗಶರೀರವನ್ನು ಒಳಗೊಂಡಿದೆ,ಯೋಗಸಾಧಕನ ಶರೀರದೊಳಗೆ ಕುಂಡಲಿನೀ ಸ್ಥಾನಗಳಿರುವಂತೆ ಭರತಭೂಮಿಗೂ ಯೋಗಶರೀರವಿದೆ! ಹೀಗಾಗಿಯೇ ಭಾರತವನ್ನು ಯೋಗಭೂಮಿ ಎಂದಿದೆ.ಭರತಭೂಮಿಯ ಈ ಯೋಗಶರೀರದೊಳಗಿನ ಕುಂಡಲಿನೀ ಶಕ್ತಿಯನ್ನು ಪೂಜ್ಯ ಸ್ವಾಮಿ ವಿವೇಕಾನಂದರು ಜಾಗೃತಗೊಳಿಸಿದರು! \u003c\/p\u003e\n\u003cp\u003eಕಾಶಿಯಲ್ಲಿದ್ದ ಕೇದಾರನೆಂಬ ಹುಡುಗನು ತನ್ನ ದೇಹದಿಂದ ಹೊರಬಂದು ಲೋಕಾಂತರಗಳಲ್ಲಿ ಸಂಚರಿಸಿ ಮರಳುತ್ತಿದ್ದ! ಹಿಮಾಲಯದಲ್ಲಿ ದ್ವಾಪರ ಯುಗದಲ್ಲಿ ಸಮಾಧಿಯಲ್ಲಿ ಮುಳುಗಿದ ಮಹಾಯೋಗಿವರ್ಯರು ಈಗಲೂ ಆ ಸಮಾಧಿಯಿಂದ ಭಂಗಗೊಳ್ಳದಂತಿದ್ದಾರೆ! ಎಂದೋ ದೇಹ ಬಿಟ್ಟ ಯೋಗಿವರ್ಯ ತನ್ನ ಶಿಷ್ಯನ ಹುಡುಕಾಟದಲ್ಲಿ ಆತನಿಗೆ ದರ್ಶನ ನೀಡಲು ದೇಹ ತಾಳಿ ಬರುತ್ತಾರೆ ! ಈ ಭೂಮಿಗೆ ಮಳೆ ಸುರಿಯುವುದು ಪ್ರಕೃತಿಶಕ್ತಿಯ ಲೀಲಾವಿಲಾಸವಷ್ಟೇ ಹೌದೇ?.\u003c\/p\u003e\n\u003cp\u003e-ಓದಲಾರಂಭಿಸಿದರೆ ಭಾರತೀಯ ಯೋಗಾಧ್ಯಾತ್ಮದ ಬಹಳಷ್ಟು ನಿಗೂಡ ವಿಚಾರಗಳು ಕಂಗಳೆದುರು ಮಿಂಚಿ ಹೊಳೆಯುತ್ತ, ಬೆರಗಿನಲ್ಲಿ ಮುಳುಗಿಸುತ್ತ ಜ್ಞಾನದ ಬೆಳಗನ್ನು ಸೂಸುತ್ತವೆ.\u003c\/p\u003e\n\u003cp\u003eಮೂರು ಭಾಗಗಳಲ್ಲಿರುವ ಈ ಗ್ರಂಥವು ಮೊದಲ ಭಾಗದಲ್ಲಿ ಕಾಶೀಯಾತ್ರೆಯ ಅನುಭವದಲ್ಲಿ ಇದುವರೆಗೂ ಗುಪ್ತವಾಗಿರುವ ಬಹಳಷ್ಟು ಗಹನ ವಿಚಾರಗಳನ್ನು ನಿರೂಪಿಸಿದೆ; ಎರಡನೆಯ ಭಾಗದಲ್ಲಿ ಲೋಕಜೀವಿತದೊಳಗೆ ಮಿನುಗುವ ಯೋಗಾಧ್ಯಾತ್ಮದ ಘಟನೆಗಳಿವೆ: ಮೂರನೆಯ ಭಾಗದಲ್ಲಿ ಭಾರತೀಯ ಯೋಗಾಧ್ಯಾತ್ಮದ ಚಿಂತನ ಮಂಥನದ ವಿವೇಚನೆಯಿದೆ. ಕಣ್ಮರೆಯಾಗಿರುವ ಭಾರತೀಯ ಕಾಲಮಾನದ ಯುಗಚಕ್ರ ವಿಚಾರವೂ ಇಲ್ಲಿ ಮಥನಗೊಂಡಿದೆ. ಈ ಕೃತಿಯು ಭಾರತೀಯ ಯೋಗಮಾರ್ಗದ ಸಾಧನಾಪಥದಲ್ಲಿರುವ ಸಾಧಕನೊಬ್ಬನ ಸಾಧನೆ. \u003c\/p\u003e\n\u003cp\u003eಈ ಕೃತಿಯು ಭಾರತೀಯ ಯೋಗಮಾರ್ಗದ ಸಾಧನಾಪಥದಲ್ಲಿರುವ ಸಾಧಕನೊಬ್ಬನ ಸಾಧನೆ. ಸ್ವಾಧ್ಯಾಯ ಹಾಗೂ ಸತ್ಸಂಗದ ಫಲವಾಗಿ ಪ್ರಕಟಗೊಂಡಿದೆ.\u003c\/p\u003e","brand":"Swami Sivaatmaananda Puri","offers":[{"title":"Default Title","offer_id":47485604659459,"sku":"HB00005488","price":320.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KedaranaKashi.jpg?v=1764325789","url":"https:\/\/harivubooks.com\/products\/kedarana-kashi-yoga-and-spirituality-swami-sivaatmaananda-puri-kannada-book","provider":"Harivu Books","version":"1.0","type":"link"}