{"product_id":"kathanayakana-kathe-biography-kannada-books","title":"ಕಥಾನಾಯಕನ ಕಥೆ","description":"\u003cp\u003eಡಾ.ರಾಜಕುಮಾರ್ ಕನ್ನಡದ ಒಬ್ಬ ಸಿನಿಮಾ ನಟನಷ್ಟೇ ಅಲ್ಲ ಅದನ್ನು ಮೀರಿ ಕನ್ನಡಿಗರ ಅಸ್ಮಿತೆಯಾಗಿರುವುದಕ್ಕೆ ಅನೇಕ ಕಾರಣಗಳಿವೆ: ಡಾ. ರಾಜಕುಮಾರರ ಸರಳತೆ, ಮಾನವೀಯತೆ ಮತ್ತು ಅದ್ಭುತ ಪ್ರತಿಭೆ ಮುಂತಾದ ಗುಣಗಳು ಇದಕ್ಕೆ ಕಾರಣವಾಗಿದೆ. ಡಾ. ರಾಜ್ ಜನಸಾಮಾನ್ಯರ ನಟನಾಗಿ ರೂಪುಗೊಂಡ ಹಾದಿ ಕಠಿಣತಮ ಹಾದಿಯಾದರೂ ಎಲ್ಲ ಅಡೆತಡೆಗಳನ್ನೂ ಮೀರಿ ದೇಶಕ್ಕೇ ಮಾದರಿ ನಟರಾದರು. ಡಾ. ರಾಜಕುಮಾರರ ಸಿನಿಮಾ ಎಂದರೆ ಮಾನವೀಯ ಮೌಲ್ಯಗಳ ಆಗರ. ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ, ಗುರು-ಶಿಷ್ಯ, ಗಂಡ-ಹೆಂಡತಿ, ಪ್ರೀತಿ-ಪ್ರಣಯ, ಕೌಟುಂಬಿಕ ಸಂಬಂಧಗಳು, ಕಾನೂನು ಪಾಲನೆ, ಜನಸಮೂಹದ ನಡುವಿರಬೇಕಾದ ನಡೆವಳಿಕೆ, ಕಾಯಕದ ಗೌರವ, ನೆಲ-ಜಲ ಸಂಬಂಧಗಳು, ಸಹಬಾಳ್ವೆ, ಜಾತ್ಯತೀತ ಗುಣ ಮುಂತಾದ ಅತ್ಯಗತ್ಯ ನಡವಳಿಕೆಗಳನ್ನು ಮಾದರಿಯಾಗಿ ಬಿಂಬಿಸುತ್ತವೆ. ಈ ಕಾರಣಕ್ಕಾಗಿ ಡಾ. ರಾಜ್ರ ಸಿನಿಮಾಗಳಲ್ಲಿ ನೋಡುಗರಿಗೆ ಒಂದು ಸುಂದರ ಸಂದೇಶವಿರುತ್ತಿತ್ತು, ಜೀವನಪ್ರೀತಿಯ ಪ್ರೇರಣೆ ಇರುತ್ತಿತ್ತು ಕನ್ನಡ ಭಾಷೆಯ ಸೊಗಸನ್ನು-ಸೊಗಡನ್ನು ತೋರಿಸಿಕೊಟ್ಟ ನಟರಲ್ಲಿ ಡಾ. ರಾಜ್ ಅವರಿಗೇ ಅಗ್ರಸ್ಥಾನ. ಡಾ. ರಾಜ್ ಸಿನಿಮಾಗಳು ಅನೇಕರ ಬದುಕನ್ನು ಬದಲಾಯಿಸಿವೆ, ಬದುಕನ್ನು ಕಟ್ಟಿಕೊಳ್ಳಲು, ಸಮಾಜಮುಖಿಯಾಗಲು ಪ್ರೇರೇಪಿಸಿವೆ. ಈ ಕಾರಣಕ್ಕಾಗಿಯೆ ಡಾ. ರಾಜಕುಮಾರ್ ಕನ್ನಡದ ಶಕ್ತಿಯಾಗಿರುವುದು. ಇಂತಹ ಶ್ರೇಷ್ಠ ಕಲಾವಿದನ ಜೀವನವು ಎಂತವರಿಗೂ ಪ್ರೇರಣೆಯನ್ನು ನೀಡಬಲ್ಲದು. ಇಂತಹ ಮಹಾನ್ ಕಲಾವಿದನ ಜೀವನ ಚರಿತ್ರೆಯನ್ನು ಈ ಹಿಂದೆ ದಿ. ಚಿ. ದತ್ತರಾಜ್ ಅವರು ವಿಜಯಚಿತ್ರ ಪತ್ರಿಕೆಗಾಗಿ 'ಕಥಾನಾಯಕನ ಕಥೆ' ಎಂಬ ಶೀರ್ಷಿಕೆಯಲ್ಲಿ ನಿರೂಪಿಸಿದ್ದರು. ನಾಡೋಜ ಡಾ.ರಾಜಕುಮಾರ್ ಅಧ್ಯಯನ ಪೀಠದ ಮೂಲಕ 'ಕಥಾನಾಯಕನ ಕಥೆ'ಯ ಎಲ್ಲ ಸಂಚಿಕೆಗಳನ್ನು ಸಂಗ್ರಹಿಸಿ ಈಗ ಪುಸ್ತಕರೂಪದಲ್ಲಿ ಪ್ರಕಟಿಸುವ ಸೌಭಾಗ್ಯ ಕನ್ನಡ ವಿಶ್ವವಿದ್ಯಾಲಯದ್ದಾಗಿದೆ. ಇದಕ್ಕೆ ಅನುಮತಿಸಿ ಅವಕಾಶ ಮಾಡಿಕೊಟ್ಟ ಡಾ. ರಾಜಕುಮಾರರ ಪುತ್ರರು ಮತ್ತು ಕುಟುಂಬವರ್ಗಕ್ಕೆ, ಎಲ್ಲ ರೀತಿಯ ಸಹಕಾರ ನೀಡಿದ ನನ್ನ ವಿದ್ಯಾಗುರುಗಳಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ, ವಿಜಯಚಿತ್ರ ನಿಯತಕಾಲಿಕೆಯ ಸಂಚಿಕೆಗಳನ್ನು ಶ್ರಮಪಟ್ಟು ಸಂಗ್ರಹಿಸಿ ಪುಸ್ತಕದ ರೂಪವನ್ನು ನೀಡಿದ ಡಾ. ರಾಜಕುಮಾರ್ ಅಧ್ಯಯನ ಪೀಠದ ಸಂಚಾಲಕರಾದ ಪ್ರೊ. ಎ. ಎಸ್. ಪ್ರಭಾಕರ್ ಅವರಿಗೆ, ಪ್ರಕಟಣ ಸಮಿತಿಯ ಸದಸ್ಯರೆಲ್ಲರಿಗೆ ಮತ್ತು ಪ್ರಸಾರಾಂಗದ ನಿರ್ದೇಶಕರು ಮತ್ತು ಎಲ್ಲ ಸಿಬ್ಬಂದಿಯವರಿಗೆ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ\u003c\/p\u003e","brand":"Dattaraj C","offers":[{"title":"Default Title","offer_id":47942734414083,"sku":"HB00007018","price":1200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kathanayaka.webp?v=1776254564","url":"https:\/\/harivubooks.com\/products\/kathanayakana-kathe-biography-kannada-books","provider":"Harivu Books","version":"1.0","type":"link"}