{"product_id":"karmoda-poems-mohammad-ali-ra-sankanur-kannada-book","title":"ಕಾರ್ಮೋಡ","description":"\u003cp\u003eಕಾರ್ಮೋಡದಿಂದ ಮಳೆ ತರಸಿ ಭುವಿಗೆ ತಂಪೆರೆಯಲು ಹರಿವ ನೀರನ್ನು ಬಾವಿ ಕೆರೆ ನದಿ ತುಂಬಿಸಿ ಸಮುದ್ರ ತಲುಪಿಸುವ ಅದರಿಂದ ಸಾಮಾಜಿಕ ಬಡತನ, ಹಸಿವು, ನಿರುದ್ಯೋಗ, ಪ್ರೀತಿ, ವಾತ್ಸಲ್ಯ, ಮಮಕಾರ ಆಧುನಿಕ ಸಂಬಂಧಗಳನ್ನ ಗಟ್ಟಿಯಾಗಿಸುವ ಧ್ಯಾನದಿಂದ ಹೊಸ ಕವಿತೆಯ ಸಂಕಲನ \"ಕಾರ್ಮೋಡ\" ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದ್ದಾನೆ. ಕವಿಯ ಉತ್ಸಾಹ ಸಮುಷ್ಠಿ ಪ್ರಜ್ಞೆಯಿಂದಾಗಿ ಕವಿತೆಗಳು ಕೆನೆಗಟ್ಟಿವೆ. ಬಚ್ಚಲದ ಬದುಕು, ಸ್ಮಶಾನದ ಮೌನ, ಒಲವು, ದೂರ್ತಕಾಯ, ಮೊದಲ ಹರುಷ, ಅಮ್ಮ, ನನ್ನಪ್ಪ, ಕರೆ ಈ ಎಲ್ಲಾ ಕವಿತೆಗಳಲ್ಲಿ ವೈಚಾರಿಕ ಘಮಲಿದೆ, ಆರ್ಥ್ಯತೆಯಿದೆ, ಧ್ವನಿಯಿದೆ, ಸ್ಥಾಯಿಭಾವವಿದೆ.\u003c\/p\u003e\n\u003cp\u003eಈ ಸಂಕಲನದಲ್ಲಿ ನಲವತ್ತಾರು ಕವಿತೆಗಳಿವೆ. ಮನದಾಳದ ನೋವು, ಹತಾಶೆ, ಕಣ್ಣೀರು, ಅಸಹಾಯಕತೆ, ಭಾವನಾತ್ಮಕ ಸಂಬಂಧ, ಮನುಷ್ಯತ್ವದ ಅರಿವು, ಜಾತಿ ಹಂಗಿಲ್ಲದ ಪ್ರೀತಿ, ಪ್ರೇಮ, ಅಂತಃಕರಣ ಎಲ್ಲವೂ ತುಂಬಿದ ಕೊಡವಾಗಿದೆ.\u003c\/p\u003e\n\u003cp\u003eವೈಜ್ಞಾನಿಕ, ವೈಚಾರಿಕ, ಸಾಮಾಜಿಕ ಪ್ರಜ್ಞೆಯುಳ್ಳ ಬರಹ ಎಲ್ಲರನ್ನು ಸೆಳೆಯುತ್ತವೆ.\u003c\/p\u003e\n\u003cp\u003eಯಲಬುರ್ಗಾ ಪಟ್ಟಣದ ಮೊಹಮ್ಮದ್ ಅಲಿ ರಾ ಸಂಕನೂರ ಈತನ ಕಾವ್ಯನಾಮ “ಎಮ್ ಡಿ ಅಲಿರಾಜ್\" ಎಂಬ ಹೆಸರಿನಿಂದ ಸಾಹಿತ್ಯ ರಚನೆಯಾಗಿದೆ. ಮನೆಯ ಬಡತನ, ನೋವು ತಲ್ಲಣದ ಬದುಕಿನಿಂದ ಸಾಕ್ಷಾತ್ಕಾರ ಪಡೆದು ಪ್ರತಿಭೆ ಹೊರಬಂದಿದೆ. ಅಂಧಾನುಕರಣೆಯಿಲ್ಲದೆ ಇಲ್ಲಿನ ಪರಿಸರ ರೂಢಿಸಿಕೊಂಡು ಸ್ವಪ್ರತಿಭೆಯಿಂದ ಅನುಭವದ ಸಾಲುಗಳು ಬೆಳಕಾಗಿ ಹೊರಹೊಮ್ಮಿವೆ. ಅದನ್ನು ಅಹ್ಲಾದಿಸುವುದು ಓದುಗವಲಯದ ಭಾಗ್ಯ.\u003c\/p\u003e\n\u003cp\u003eಕವಿಯ ಕಾಡುವ ಜಗತ್ತು ಮನುಷ್ಯಪ್ರಜ್ಞೆಯ ನುಡಿ ನಿಲ್ಲದೇ ಕ್ರಾಂತಿಕಾರಕವಾಗಿ ಒಡಮೂಡಿ ಬರಲೆಂದು ಕವಿಯ ಪ್ರಯತ್ನದ ಪ್ರಕಟಣೆಯ ಸಾಹಸಕ್ಕೆ; ಕೃತಿ ತಂದ ಹುಮ್ಮಸ್ಸಿಗೆ ಮನಪೂರ್ವಕವಾಗಿ ಅಭಿನಂದಿಸಿ ಬೆಳವಣಿಗೆಗಾಗಿ ಹಾರೈಸುವೆ.\u003c\/p\u003e","brand":"Mohammad Ali Ra Sankanur","offers":[{"title":"Default Title","offer_id":47600197173507,"sku":"HB0000550235","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Karmoda.jpg?v=1767620564","url":"https:\/\/harivubooks.com\/products\/karmoda-poems-mohammad-ali-ra-sankanur-kannada-book","provider":"Harivu Books","version":"1.0","type":"link"}