{"product_id":"kanughatta-article-shivananda-kalave-kannada-book","title":"ಕಾನುಘಟ್ಟ","description":"\u003cp\u003eಕಾಡು ಕಣಿವೆ ಸುತ್ತಾಡುತ್ತ ಬದುಕಿನ ಬಹುಭಾಗ ಕಳೆದ ಶಿವಾನಂದ ಕಳವೆ 'ಕಾನು ಘಟ್ಟ'ಕ್ಕೆ ಇದೀಗ ಅಪೂರ್ವ ಯಾತ್ರೆ ಹೊರಡಿಸಿದ್ದಾರೆ.\u003c\/p\u003e\n\u003cp\u003eಸ್ವಾಮಿಕಾನು, ದೇವಿಕಾನು, ನೀರಕಾನು, ಕತ್ತಲೆಕಾನುಗಳೆಲ್ಲ ಇಂದು ನಿಸರ್ಗ ಚರಿತೆಯ ಮರೆತ ಪುಟಗಳಾಗುತ್ತಿರುವ ಹೊತ್ತು ನೆನಪಿನ ನಡಿಗೆ ಸಾಗಿದೆ. ತಿಳಿ ನೀರು ಮನದ ತಂಪಾದ ಕಾನಿಗೆ ಮನಸ್ಸು ಮುಳುಗಿಸುವ ಅಪಾರ ಶಕ್ತಿಯಿದೆ. ಅಕ್ಷರದ ಓದು ಜಗದ ಎಲ್ಲವನ್ನೂ ಕಲಿಯುವ ಅಪಾರ ಅವಕಾಶವೇನೋ ಕೊಟ್ಟಿದೆ. ಆಳಕ್ಕೆ ಬೇರೂರುವುದು ಮರೆತು ಹೋಗುತ್ತಿದೆ. ಜ್ಞಾನೋದಯವಾಗುವಷ್ಟು ಸಮಯ ನಾವ್ಯಾರೂ ಮರದ ಬುಡದಲ್ಲಿ ಕಾಲ ಕಳೆದವರಲ್ಲ!\u003c\/p\u003e\n\u003cp\u003eವಿಜ್ಞಾನದ ಕಾರ್ಯಕಾರಣಗಳ ಆಚೆಗೂ ಅಡಗಿರುವ ನೂರೊಂದು ವಿಸ್ಮಯಗಳಿಂದ ವನವಾಸಿ ಕೊಪ್ಪ, ಕೇರಿ, ಗ್ರಾಮಗುತ್ತುಗಳಲ್ಲಿ ಜೀವ ಉಸಿರಾಡುತ್ತಿವೆ. ನಮ್ಮೂರ ಕಣಿವೆಯ ಮಕ್ಕಳು ತೇಗದ ಮರಗಳಂತೆ ರೆಕ್ಕೆಕಟ್ಟಿಕೊಂಡು ವಿಶ್ವಕ್ಕೆ ಜಿಗಿದಿದ್ದಾರೆ. ತೊಲೆ, ಏಣಿ, ಮೇಜು, ಖುರ್ಚಿ, ಮಂಚ, ಕಂಬವಾಗಿ ಹೋಗಿದ್ದಾರೆ. ಊರ ಬೇರಿನ ಸಹ್ಯಾದ್ರಿಪುರದ ಕೋಟೆಕಾನಿನ ದೇವಿಯೂ ನೆಡುತೋಪಿನ ಆರ್ಭಟಕ್ಕೆ ನಾಪತ್ತೆಯಾದ ಸುದ್ದಿಯಿದೆ, ಮನುಕುಲ ಹಣ ಹುಡುಕುವ ನಿರ್ಧಾರಗಳಿಂದ ಸುತ್ತಲಿನ ಮರಗಳ ಹರಾಜು ತೀರುವ ಮುನ್ನ ನಮ್ಮೆದೆಗೆ ಕೇಳಿಸಿಕೊಳ್ಳುವ ನೆಲದ ಮರೆಯ ಕಥನವೊಂದನ್ನು ಕೇಳಬೇಕು. ಪರಿಸರ ಬರಹಗಾರ ಶಿವಾನಂದ ಕಳವೆಯವರ ಕಾನು ಪಯಣದ ಹೃದಯಸ್ಪರ್ಶಿ ಮಾತುಗಳು ಕುತೂಹಲ ಹುಟ್ಟಿಸಿವೆ. ಅರಣ್ಯವನ್ನು ನಮ್ಮದೇ ಮಾರ್ಗದಲ್ಲಿ ನೆಲಮೂಲದಿಂದ ಅರಿವ ಪ್ರಯತ್ನ ವಿಶೇಷವಾಗಿದೆ.\u003c\/p\u003e\n\u003cp\u003eಶತಮಾನದ ಗ್ರಾಮ ಬದುಕಿನ ಸಾಕ್ಷ್ಯದ ಕಳವೆಯವರ 'ಮಧ್ಯ ಘಟ್ಟ' ಕಾದಂಬರಿ ಹುಟ್ಟಿಸಿದ ಸಂಚಲನ ತಮಗೆಲ್ಲ ತಿಳಿದಿದೆ. 'ಕಾನ್ ಚಿಟ್ಟೆ, ಕಾನ್ ಗೌರಿ, ಕಾನ್ ಬಾಗಿಲು, ಕಾನ್ಸನೆಯ ಕಥೆಗಳು' ಇವರ ಪರಿಸರ ಕೃತಿ ಸರಣಿಯ ಕೆಲವು ಶೀರ್ಷಿಕೆಗಳು, ಕಳವೆ ಕಾನೊಳಗಿನ ನಿಗೂಢತೆ ಏನೋ ಇದೆ. ಅದಕ್ಕೆ 'ಕಾನು ಘಟ್ಟ' ಕಾದಂಬರಿ ಹಸಿರು ಹಿತೈಷಿಗಳ ಆರಣ್ಯ ಕಾಂಡವಾಗಿದೆ.\u003c\/p\u003e\n\u003cp\u003eಕಾನು ಕಾಲುದಾರಿಯಲ್ಲಿ ಕಳವೆಯವರು ಎತ್ತಿ ನಿಲ್ಲಿಸಿದ ಪಾತ್ರ, ಪರಿಸರವನ್ನು ಒಮ್ಮೆಯಾದರೂ ನಾವೂ ಕಂಡುಬರಬೇಕು.\u003c\/p\u003e\n\u003cp\u003e-ಎಂ. ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ\u003c\/p\u003e\n\u003cp\u003e\u003cbr\u003e\u003c\/p\u003e","brand":"Shivananda Kalave","offers":[{"title":"Default Title","offer_id":47700806500611,"sku":"HB00005503267","price":310.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kanughattafp.jpg?v=1769969567","url":"https:\/\/harivubooks.com\/products\/kanughatta-article-shivananda-kalave-kannada-book","provider":"Harivu Books","version":"1.0","type":"link"}