ಕನ್ನಡಿಗರ ಕರ್ಮ ಕಥೆ

ಕನ್ನಡಿಗರ ಕರ್ಮ ಕಥೆ

ಮಾರಾಟಗಾರ
ಗಳಗನಾಥ
ಬೆಲೆ
Rs. 200.00
ಕೊಡುಗೆಯ ಬೆಲೆ
Rs. 200.00
ಬೆಲೆ
Rs. 200.00
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

'ಗಳಗನಾಥ' ಕಾವ್ಯನಾಮದಿಂದ ಪ್ರಸಿದ್ಧವಾಗಿದ್ದ ವೆಂಕಟೇಶ ತಿರಕೋ ಕುಲಕರ್ಣಿ (೧೮೬೯-೧೯೪೨) ಅವರು ತಮ್ಮ ಐತಿಹಾಸಿಕ ಕಾದಂಬರಿಗಳ ಮೂಲಕ ಮನೆಮಾತಾದವರು. ಕನ್ನಡಿಗರ ಸ್ವಾಭಿಮಾನವನ್ನು ಈ ಮೂಲಕ ಬಡಿದೆಬ್ಬಿಸಿದವರು. ಕನ್ನಡ ಪುಸ್ತಕಗಳ ಪ್ರಕಟಣೆಯೇ ಒಂದು ಸಾಹಸವಾಗಿದ್ದ ಕಾಲದಲ್ಲಿ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ತಿರುಗಿ, ಜನರಿಗೆ ಪುಸ್ತಕಗಳನ್ನು ತಲುಪಿಸಿದವರು. ಕನ್ನಡನಾಡಿನ ಗತವೈಭವವೆಂದ ಕೂಡಲೇ ನೆನಪಿಗೆ ಬರುವುದು ವಿಜಯನಗರ ಸಾಮ್ರಾಜ್ಯ. ಅದು ಕನ್ನಡಿಗರ ಸ್ವಾಭಿಮಾನದ ಸಂಕೇತವೇ ಆಗಿಬಿಟ್ಟಿದೆ. ವಿಜಯನಗರ ಸಾಮ್ರಾಜ್ಯವು ಕೃಷ್ಣದೇವರಾಯನ ನಂತರ ಹೇಗೆ ವಿನಾಶಕ್ಕೊಳಗಾಯಿತು ಎಂಬುದನ್ನು ಹೃದಯಂಗಮವಾಗಿ ಚಿತ್ರಿಸುವ ಕಾದಂಬರಿ ಗಳಗನಾಥರ 'ಕನ್ನಡಿಗರ ಕರ್ಮಕಥೆ'.