Nanjunda. N.
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡ ಭಾಷಾಕಲಿಕೆಗೆ ವ್ಯಾಕರಣ ಮೂಲಾಧಾರ. ವ್ಯಾಕರಣದ ಜಟಿಲ ಕಲಿಯುವಿಕೆಯಿಂದ ಹೊರತಾಗಿ ಸುಲಭ ಹಾಗೂ ಅರ್ಥಗರ್ಭಿತವಾಗಿ ತಮ್ಮ ಪ್ರಥಮ ಕೊಡುಗೆಯಾಗಿ 'ಕನ್ನಡ ವ್ಯಾಕರಣ ವೈಭವ' ಕೃತಿಯನ್ನು ಬರೆದಿದ್ದಾರೆ. ಇದು ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗೂ ಉಪಯುಕ್ತ ಗ್ರಂಥವಾಗಿದ್ದು ಇದರಲ್ಲಿ ಹೆಚ್ಚಿನ ಮಾಹಿತಿ, ನೂತನ ಬರೆವಣಿಗೆಯ ಶೈಲಿ, ತಂತ್ರಗಾರಿಕೆಯನ್ನು ಕಾಣಬಹುದು. ತಮ್ಮ ನಾಲ್ಕು ವರ್ಷಗಳ ಅಧ್ಯಾಪನದೊಂದಿಗೆ ವಿದ್ಯಾರ್ಥಿಗಳು, ಕನ್ನಡ ಭಾಷಾ ಶಿಕ್ಷಕರು ಹಾಗೂ ಸ್ಪರ್ಧಾರ್ಥಿಗಳ ಸರಳ ಕಲಿಕೆಗೆ ಪೂರಕವಾಗಿ ಈ ಕೃತಿಯನ್ನು ರಚಿಸಿದ್ದಾರೆ. ನನ್ನ ವಿದ್ಯಾರ್ಥಿ ಕನ್ನಡ ವ್ಯಾಕರಣ ಕೃತಿಯೊಂದನ್ನು ರಚಿಸಿರುವುದು ನಮಗೂ ಹಾಗೂ ಅವರ ತಂದೆ ತಾಯಿಗೂ ಹೆಮ್ಮೆಯ ವಿಷಯ. ಇವರಿಂದ ಇಂತಹ ಇನ್ನಿತರ ಉಪಯುಕ್ತ ಕೃತಿಗಳು ಬರಲೆಂದು ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಲೇಖಕನಾಗಿ ಪರಿಗಣಿತವಾಗಲೆಂದು ಮನಃಪೂರ್ವಕವಾಗಿ ಆಶಿಸುತ್ತೇನೆ.
-ಡಾ ಎಂ ನರಸಿಂಹಮೂರ್ತಿ
ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್
