{"product_id":"kannada-nudiya-jeevala","title":"ಕನ್ನಡ ನುಡಿಯ ಜೀವಾಳ","description":"\u003cp\u003eಕನ್ನಡ ಸಾಹಿತ್ಯ ಪರಿಷತ್ತು ಕರುನಾಡಿನ ಗಾಳಿ-ಬೆಳಕು. ಕಸಾಪ ಎಂಬುದು ಕನ್ನಡಿಗರ ಪಾಲಿನ ಮೂರಕ್ಷರದ ಮಹಾಮಂತ್ರ, ಶತಮಾನ ದಾಟಿದ ಪರಿಷತ್ತು ಕನ್ನಡಿಗರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಪರಿ ಅಭೂತಪೂರ್ವ.\u003c\/p\u003e\n\u003cp\u003eಪರಿಷತ್ತು ತನ್ನ ಪ್ರಕಟಣೆಗಳ ಮೂಲಕ ಕನ್ನಡಿಗರ ಬೌದ್ಧಿಕ ಹಸಿವನ್ನು ನೀಗಿಸುತ್ತಿದೆ. ಅವರ ಅರಿವಿನ ಕ್ಷಿತಿಜಗಳನ್ನು ವಿಸ್ತರಿಸುತ್ತಿದೆ. ಪರಿಷತ್ತು ಗಂಟಿಗಿಂತ ನಿಘಂಟಿಗೆ, ಅನ್ನಕ್ಕಿಂತ ಅರಿವಿಗೆ ಒತ್ತು ನೀಡಿದೆ. ಅದರದು ನಿರಂತರ ಅಕ್ಷರ ದಾಸೋಹ ! ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಕನ್ನಡಿಗರ ಮಡಿಲಿಗಿರಿಸಿದ ಕೀರ್ತಿ ಪರಿಷತ್ತಿನದು.\u003c\/p\u003e\n\u003cp\u003eಪರಿಷತ್ತಿನ ಪ್ರಕಟಣೆಗಳು ಓದುಗರಿಗೆ ಸುಲಭವಾಗಿ ಲಭಿಸುವಂತಾಗಲು ವಿತರಣಾ ಜಾಲವನ್ನು ದೃಢಗೊಳಿಸಲಾಗುವುದು. ಅವು ಆನ್ಲೈನ್ ಮೂಲಕವೂ ಮಾರಾಟಕ್ಕೆ ಲಭ್ಯವಾಗಲಿವೆ. ಮುದ್ರಣ ವಿಧಾನದಲ್ಲಿ ಆಗಿರುವ ಎಲ್ಲ ತಾಂತ್ರಿಕ ಆವಿಷ್ಕಾರಗಳನ್ನೂ ಬಳಸಿಕೊಂಡು ಪುಸ್ತಕಗಳ ವಿನ್ಯಾಸವನ್ನು ಆಕರ್ಷಕ ಗೊಳಿಸಲಾಗುವುದು. ಇ-ಪುಸ್ತಕಗಳನ್ನೂ ಹೊರತರಲಾಗುವುದು.\u003c\/p\u003e\n\u003cp\u003eಪಂಡಿತಮಾನ್ಯವಾದ ಕೃತಿಗಳ ಪ್ರಕಟಣೆ ಮುಂದುವರೆಯಲಿದೆ. ಇದರ ಜೊತೆಗೆ ಜನಸಾಮಾನ್ಯರಿಗೆ ಉಪಯುಕ್ತವಾಗುವಂತಹ ಕೃತಿಗಳನ್ನೂ ಹೊರತರ ಲಾಗುವುದು. ಇದಕ್ಕಾಗಿ 'ಜನಪ್ರಿಯ ಪುಸ್ತಕಮಾಲೆ'ಯನ್ನು ಆರಂಭಿಸಲಾಗುವುದು. ತನ್ನ ಪ್ರಕಟಣೆಗಳ ಮಾರಾಟವನ್ನು ವಿಕೇಂದ್ರೀಕರಿಸುವ ಉದ್ದೇಶವೂ ಪರಿಷತ್ತಿಗಿದೆ. ಪುಸ್ತಕ ಮನಸ್ಕತೆಯನ್ನು ಹೆಚ್ಚಿಸುವಂತಹ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು.\u003c\/p\u003e\n\u003cp\u003eಕನ್ನಡದ ಮಹತ್ವದ ಭಾಷಾಶಾಸ್ತ್ರಜ್ಞರಲ್ಲಿ ಒಬ್ಬರಾದ ಶಂ.ಬಾ.ಜೋಶಿಯವರ ಈ ಕೃತಿ ಕನ್ನಡ ನುಡಿಯ ಹುಟ್ಟಿನ ಕುರಿತು ಮಹತ್ವದ ಬೆಳಕನ್ನು ಚೆಲ್ಲುತ್ತದೆ. ಭಾಷೆಯ ಶಬ್ದಗುಣ ಮತ್ತು ಅರ್ಥಗುಣದ ಬಗ್ಗೆ ಈವರೆಗೂ ಸಾಕಷ್ಟು ಚರ್ಚೆಗಳು ನಡೆದಿವೆ. ಈ ಕೃತಿ ಕನ್ನಡಕ್ಕೆ ವಿಶಿಷ್ಟವಾದ ನಾದದ ಗುಣದ ಕುರಿತು ಅರ್ಥಪೂರ್ಣ ಚರ್ಚೆಯನ್ನು ಬೆಳೆಸಿದೆ. ಉದಾಹರಣೆಗಳ ಮೂಲಕ ಅದನ್ನು ಬೆಳೆಸಿರುವ ಕ್ರಮ ಗಟ್ಟಿಯಾದ ಸೈದ್ಧಾಂತಿಕ ಚೌಕಟ್ಟನ್ನು ರೂಪಿಸಿದೆ. ಭಾಷಾಶಾಸ್ತ್ರಕ್ಕೆ ಹಲವು ಮಹತ್ತರವಾದ ಒಳನೋಟಗಳನ್ನು ನೀಡುವ ಈ ಕೃತಿಯನ್ನು ಕನ್ನಡಿಗರು ಆದರದಿಂದ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ನಮ್ಮದು.\u003c\/p\u003e\n\u003cp\u003eಈ ಕೃತಿಯನ್ನು ಕನ್ನಡ ಜನರು ಅತ್ಯಂತ ಆದರದಿಂದ ಸ್ವೀಕರಿಸುವರೆಂಬ ನಂಬಿಕೆಯಿದೆ.\u003c\/p\u003e\n\u003cp\u003eನಾಡೋಜ ಡಾ. ಮಹೇಶ ಜೋತಿ\u003c\/p\u003e\n\u003cp\u003eಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು\u003c\/p\u003e","brand":"Dr. Sham. Ba. Jois","offers":[{"title":"Default Title","offer_id":47717042061571,"sku":"HB00006054","price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KannadaNudiyaJeevala_FP.jpg?v=1770364533","url":"https:\/\/harivubooks.com\/products\/kannada-nudiya-jeevala","provider":"Harivu Books","version":"1.0","type":"link"}