ಆನಂದ್ ಜಿ.
Publisher: ಬನವಾಸಿ ಬಳಗ
Regular price
Rs. 200.00
Regular price
Sale price
Rs. 200.00
Unit price
per
Shipping calculated at checkout.
Couldn't load pickup availability
ಭಾರತಕ್ಕೆ ಸ್ವಾತಂತ್ರ ಒದಗಿಬಂದು ಒಕ್ಕೂಟದ ಸ್ಥಾಪನೆಯಾದಮೇಲೆ, ಹಲವಾರು ಭಾಗಗಳಾಗಿ ಒಡೆದು ಹೋಗಿದ್ದ ಕನ್ನಡನಾಡು ನಾಡಿನ ಹಿರಿಯರ ನಿಸ್ವಾರ್ಥ ಪರಿಶ್ರಮದ ಫಲವಾಗಿ ಒಗ್ಗೂಡಿ ಒಂದಾಯಿತು. ಆದರೆ ಅವತ್ತಿನಿಂದ ಇವತ್ತಿನವರೆಗೂ ಕನ್ನಡ ನಾಡನ್ನು ಕಾಡುತ್ತಿರುವ ಮೂರು ಮುಖ್ಯ ವಿಷಯಗಳೆಂದರೆ
- ನಾಡಿನ ಹಿತವನ್ನು ಕಾಯುವಂತಹ ಪ್ರಾದೇಶಿಕ ಪಕ್ಷದ ಕೊರತೆಯ ನಡುವೆ, ನಾಡನ್ನು ಅತಂತ್ರ ಸ್ಥಿತಿಯಲ್ಲಿ ಕೈಬಿಡುವ ರಾಷ್ಟ್ರೀಯ ಪಕ್ಷಗಳೇ ಆಡಳಿತದಲ್ಲಿರುವುದು.
- ಕನ್ನಡ ನಾಡಿನಲ್ಲಿ ಕನ್ನಡದ ಸಾರ್ವಭೌಮತೆಯನ್ನು ಹಿಂದೀ ಭಾಷೆಯ ಮೂಲಕ ತೊಡೆದುಹಾಕಲು ನಡೆದಿರುವ "ಹಿಂದೀ ಹೇರಿಕೆಯ ಪ್ರಯತ್ನಗಳು"
- ಕನ್ನಡ ನಾಡನ್ನು ರಾಜಕೀಯವಾಗಿ ತುಂಡು ತುಂಡು ಮಾಡಬೇಕೆನ್ನುವ ಕೂಗುಗಳು.
ಈ ಮೂರೂ ವಿಷಯಗಳ ಸುತ್ತ ಆಳವಾದ ಚಿಂತನೆಯುಳ್ಳ ಹೊತ್ತಗೆಗಳನ್ನು ಬನವಾಸಿ ಬಳಗ ಪ್ರಕಾಶನವು ಹೊರತಂದಿದೆ. ಕನ್ನಡನಾಡಿನ ರಾಜಕೀಯ ಸ್ಥಿತಿ-ಗತಿಗಳ ಬಗ್ಗೆ ಗಮನ ಇಟ್ಟಿರುವವರು, ರಾಜಕೀಯ ಭವಿಷ್ಯದ ಬಗ್ಗೆ ಕಾಳಜಿ ಉಳ್ಳವರು ಓದಲೇಬೇಕಾದ ಹೊತ್ತಗೆಗಳಿವು.
