{"product_id":"kalisu-guruve-kalsu-self-help-kannada-book","title":"ಕಲಿಸು ಗುರುವೇ ಕಲಿಸು","description":"\u003cp\u003eಸಂತೋಷವಾಗಿರುವ ಮತ್ತು ಶಾಂತಮನಸ್ಸಿನ ಶಿಕ್ಷಕರು ಮಾತ್ರ ಚೆನ್ನಾಗಿ ಕಲಿಸಬಲ್ಲರು'' ಎಂಬುದು ಈ ಪುಸ್ತಕದ ಮೂಲಮಂತ್ರ. ಶಿಕ್ಷಣ ಕ್ಷೇತ್ರದಲ್ಲಿ ಈಗ ವಿದ್ಯಾರ್ಥಿಗಳ ಮೇಲಿನ ಒತ್ತಡವೇ ಹೆಚ್ಚು ಚರ್ಚಿತವಾಗುತ್ತಿರುವಾಗ, ಶಿಕ್ಷಕರ ಮಾನಸಿಕ ಕ್ಷೇಮವೇ ಗುಣಮಟ್ಟದ ಶಿಕ್ಷಣಕ್ಕೆ ಅಡಿಪಾಯ ಎಂಬುದನ್ನು ಡಾ. ದೇವರಮನೆಯವರು ಮಾರ್ಮಿಕವಾಗಿ ಗುರುತಿಸಿದ್ದಾರೆ. ಮೊದಲ ಗಂಟೆ ಬಾರಿಸುವ ಮೊದಲೇ ಶಾಲೆಗೆ ಬಂದು, ಕೊನೆಯ ವಿದ್ಯಾರ್ಥಿ ಹೋದಮೇಲೂ ಶಾಲೆಯಲ್ಲಿ ಉಳಿಯುವ ಶಿಕ್ಷಕರ \"ಅದೃಶ್ಯಸೇವೆ'ಯನ್ನು ಅವರು ಇಲ್ಲಿ ತುಂಬ ಸುಂದರವಾಗಿ ಚಿತ್ರಿಸಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ದೂರವಿಟ್ಟು ದುಡಿಯುವ ಶಿಕ್ಷಕರ ತ್ಯಾಗಕ್ಕೆ ಈ ಕೃತಿ ಕನ್ನಡಿ ಹಿಡಿದಿದೆ.\u003c\/p\u003e\n\u003cp\u003e''ಕಲಿಸು ಗುರುವೇ ಕಲಿಸು\" ಕೇವಲ ಒಂದು ಕೈಪಿಡಿಯಲ್ಲ; ಅದು ಸಮಾಜದ ಬೌದ್ಧಿಕ ದಿಕ್ಸೂಚಿಯಾಗಿರುವ ಶಿಕ್ಷಕ ಸಮುದಾಯಕ್ಕೆ ಅರ್ಪಿಸುವ \"ಕೃತಜ್ಞತಾ ಪತ್ರ\". ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕರನ್ನು ಕೇವಲ ಸೇವೆ ನೀಡುವ ವ್ಯಕ್ತಿಗಳೆಂದು ನೋಡದೆ, ಗೌರವ ಮತ್ತು ಕೃತಜ್ಞತೆಯಿಂದ ಕಾಣಬೇಕು ಎಂಬ ಮೌಲ್ಯವನ್ನು ಈ ಗ್ರಂಥ ಎತ್ತಿ ಹಿಡಿಯುತ್ತದೆ. ನನಗೆ ವೈಯಕ್ತಿಕವಾಗಿ ಈ ಕೃತಿಯಲ್ಲಿ ತುಂಬ ಮೆಚ್ಚಿಗೆಯಾದ ಅಂಶವೊಂದಿದೆ. ಇದು ಶಿಕ್ಷರನ್ನು \"ತಿದ್ದಲು\" ಹೊರಟ ಪುಸ್ತಕವಲ್ಲ; ಇದು ಅವರ ಬಗ್ಗೆ ಕಾಳಜಿ ವಹಿಸಲು ಹೊರಟ ಪುಸ್ತಕ. ಈ ಕೃತಿ ಹಲವಾರು ಶಿಕ್ಷಕರ ದಣಿವಿಗೆ ವಿಶ್ರಾಂತಿ ನೀಡಲಿ, ಮೌನದ ನೋವಿಗೆ ಸ್ಪಂದಿಸಲಿ ಮತ್ತು ಅನೇಕ\u003c\/p\u003e","brand":"Dr.Virupaksha Devaramane","offers":[{"title":"Default Title","offer_id":47725926318339,"sku":"HB00006102","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-10at3.34.51PM_1.jpg?v=1770718184","url":"https:\/\/harivubooks.com\/products\/kalisu-guruve-kalsu-self-help-kannada-book","provider":"Harivu Books","version":"1.0","type":"link"}