ಕಗ್ಗೆರೆ ಪ್ರಕಾಶ್
Publisher: ಪಂಚಮಿ ಪಬ್ಲಿಕೇಷನ್ಸ್
Regular price
Rs. 350.00
Regular price
Rs. 350.00
Sale price
Rs. 350.00
Unit price
per
Shipping calculated at checkout.
Couldn't load pickup availability
ಕನ್ನಡ ಚಲನಚಿತ್ರಗಳನ್ನು ಅಭ್ಯಾಸ ಮಾಡುವವರು ಸಂಗ್ರಹಿಸಬೇಕಾದ ವಿಶೇಷವಾದ ಪುಸ್ತಕವಿದು. ಅರವತ್ತು ಜನ ಕಲಾವಿದರ ಪರಿಚಯ ಒಂದೇ ಪುಸ್ತಕದಲ್ಲಿ ಸಿಗುತ್ತದೆ ಎಂದರೆ ಯಾರಿಗೆ ತಾನೇ ಆಸಕ್ತಿ ಮೂಡುವುದಿಲ್ಲ? ಇಂಥ ಕಲಾವಿದರು ಮತ್ತು ಸಿನೆಮಾ ಮಾಧ್ಯಮಕ್ಕೆ ಸಂಬಂಧಿಸಿದವರ, ಸಂದರ್ಶನಾಧಾರಿತ ಬರಹಗಳ ಪುಸ್ತಕವೇ ಕಲಾವಿದರ ಕಥಾನಕ. ಸುಮಾರು ಆರುನೂರು ಪುಟಗಳ ಕಗ್ಗೆರೆ ಪ್ರಕಾಶ್ ಅವರ ಈ ಪುಸ್ತಕವನ್ನು ಬೆಂಗಳೂರಿನ ಪಂಚಮಿ ಪ್ರಕಾಶನದವರು ಪ್ರಕಾಶಿಸಿರುತ್ತಾರೆ.
ಎಪ್ಪತ್ತೈದು ವರ್ಷಗಳ ಇತಿಹಾಸವಿರುವ ಕನ್ನಡ ಚಲನಚಿತ್ರೋದ್ಯಮದ ಕಲಾವಿದರನ್ನು ಹೀಗೆ ಒಂದೇ ಕಡೆ ಪರಿಚಯಿಸುವುದು ಒಂದು ದಾಖಲೆಯೇ ಸರಿ. ಇದು ಕನ್ನಡ ಚಲನಚಿತ್ರಗಳನ್ನು ಅಭ್ಯಾಸ ಮಾಡುವವರು ಅವಶ್ಯವಾಗಿ ಸಂಗ್ರಹಿಸಿ ಮತ್ತೆ ಮತ್ತೆ ಅಭ್ಯಾಸ ಮಾಡಬೇಕಾದ ಒಂದು ಗಂಭೀರ ಕೃತಿಯಾಗಿದೆ.
