{"product_id":"kalakoutuka-articles-shatavadhani-r-ganesh-kannada-book","title":"ಕಲಾಕೌತುಕ","description":"\u003cp\u003eಗಣೇಶರು ಉನ್ನತಮಟ್ಟದಲ್ಲಿ ವಿಜ್ಞಾನ-ತಂತ್ರಜ್ಞಾನಗಳನ್ನು ಓದಿರುವವರು; ಸಂಸ್ಕೃತ-ಕನ್ನಡಭಾಷೆಗಳ ಸಾಹಿತ್ಯ-ವ್ಯಾಕರಣಗಳನ್ನು ಅರೆದು ಕುಡಿದಿರುವವರು: ಹಾಗೆಯೇ ಭಾರತೀಯದರ್ಶನಶಾಸ್ತ್ರಗಳ ಎಲ್ಲ ಶಾಖೆಗಳನ್ನೂ ಸಾಕಷ್ಟುಮಟ್ಟಿಗೆ ಅಧ್ಯಯನ ಮಾಡಿರುವವರು: ವಿಶೇಷವಾಗಿ ಕರ್ಣಾಟಕಸಂಗೀತದಲ್ಲಿ ಸ್ವತಃ ಕೀರ್ತನೆಗಳನ್ನು ರಚಿಸಿರುವ ಮಟ್ಟಿಗೆ ಆ ಕಲೆಯ ಅಭ್ಯಾಸ ಮಾಡಿರುವವರು; ಭಾರತೀಯನರ್ತನಶಾಸ್ತ್ರವನ್ನು ತಿಳಿದವರು; ಭಾರತೀಯರ ಶಿಲ್ಪ-ದೇವಾಲಯಗಳ ನಿರ್ಮಾಣಶಾಸ್ತ್ರಗಳಲ್ಲಿ ಪ್ರದೇಶವುಳ್ಳವರು: ಸೋದರ ಭಾಷೆಗಳಾದ ತಮಿಳು, ತೆಲುಗು, ಹಿಂದೀ, ಪ್ರಾಕೃತ ಮುಂತಾದ ಹತ್ತಾರು ಭಾಷೆಗಳನ್ನು ಬಲ್ಲವರು; ಇಂಗ್ಲಿಷ್ ಸಾಹಿತ್ಯವನ್ನೂ ಓದಿಕೊಂಡವರು: ಕನ್ನಡ-ಸಂಸ್ಕೃತ-ತೆಲುಗು-ಪ್ರಾಕೃತಗಳಲ್ಲಿ ಸಾವಿರಕ್ಕೂ ಮಿಕ್ಕು ಅವಧಾನಗಳನ್ನು ಮಾಡಿರುವ ಅಸಾಧಾರಣ ಸ್ಮೃತಿಶಕ್ತಿ ಮತ್ತು ಕಲ್ಪನಾಶೀಲತೆಗಳನ್ನು ಗಳಿಸಿಕೊಂಡಿರುವವರು: ಇಷ್ಟೆಲ್ಲ ಇದ್ದೂ ಕೇವಲ ಭೂತಕಾಲದತ್ತ ನೋಡದೆ ಸಮಕಾಲೀನ ಕಲಾಪ್ರಕಾರಗಳಲ್ಲಿ ಕೂಡ ಆಸಕ್ತಿಯಿರುವವರು.\u003c\/p\u003e\n\u003cp\u003eಗಣೇಶರು ಏನು ಬರೆದರೂ ವ್ಯಾಪಕವಾದ ಸಂಶೋಧನೆ ಮತ್ತು ವಿಪುಲವಾದ ಸಾಮಗ್ರಿಯ ಆಧಾರವಿಲ್ಲದೆ ಬರೆಯುವುದಿಲ್ಲ. ಈ ಗುಣವು ನಮ್ಮ ಎಷ್ಟೋ ಪ್ರಸಿದ್ಧನಾಮರಿಗೆ ಇಲ್ಲ.\u003c\/p\u003e\n\u003cp\u003eಚಿಕ್ಕ ವಯಸ್ಸಿನಲ್ಲಿ ಆನಂದ ಕುಮಾರಸ್ವಾಮಿಯವರ ಗ್ರಂಥಗಳನ್ನು ಓದಿ ಕಲೆ, ಸಾಹಿತ್ಯ ಮತ್ತು ಮೌಲ್ಯಗಳ ಬಗೆಗೆ ಪ್ರೀತಿ ಮತ್ತು ಗ್ರಹಿಕೆಗಳನ್ನು ಬೆಳಸಿಕೊಂಡ ನನಗೆ ಗಣೇಶರ ಈ ಸಂಕಲನವನ್ನು ಓದುವಾಗ ಕುಮಾರಸ್ವಾಮಿಯವರ ಬರೆಹಗಳ ಔನ್ನತ್ಯ, ವೈಶಾಲ್ಯ ಮತ್ತು ಮೌಲ್ಯಗಳ ತುಡಿತದ ಅನುಭವವಾಗಿದೆ.\u003c\/p\u003e\n\u003cp\u003eಡಾ. ಎಸ್.ಎಲ್. ಭೈರಪ್ಪ\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47684422435075,"sku":"HB00005503219","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kalaakoutukafp.jpg?v=1769444740","url":"https:\/\/harivubooks.com\/products\/kalakoutuka-articles-shatavadhani-r-ganesh-kannada-book","provider":"Harivu Books","version":"1.0","type":"link"}