{"product_id":"kademane-gopala-kannada-book","title":"ಕಡೇಮನೆ ಗೋಪಾಲ","description":"\u003cp\u003e\u003cspan\u003eಲೇಖಕರೇ ಹೇಳುವಂತೆ, ಅಲಿಖಿತವಾಗಿ ಜಾರಿಗೆ ಬಂದ ಜಾತಿ ಪದ್ದತಿಯ ಆಳ ಮತ್ತು ಅಗಲ ನಿಬ್ಬೆರಗಾಗಿಸುವಂತದ್ದು. ಸಾಮಾನ್ಯರು ಇದನ್ನು ಬದುಕಿನ 'ಚೌಕಟ್ಟು' ಎಂದು ಭಾವಿಸಿದರೆ. ಕೆಲವರು ಇದನ್ನೇ ಬೇಲಿ'ಯಾಗಿಸಿಕೊಂಡು ಮುಗ್ಧ ಮನಸ್ಸುಗಳನ್ನು ಬಂಧಿಸಿದರು. ಪ್ರೀತಿ, ಸಂಬಂಧಗಳನ್ನೂ ಜಾತಿಯ ಆಧಾರದ ಮೇಲೆ ವ್ಯಾಖ್ಯಾನಿಸಲಾಯಿತು. ७ ಚೌಕಟ್ಟಿನಿಂದ ಆಚೆ ಬರುವುದಾಗಲಿ ಅಥವಾ ಹೊರಗಿನ ಪ್ರಪಂಚವನ್ನು ಕಣ್ಣೆತ್ತಿ ನೋಡುವುದಾಗಲಿ ಅವರಿಗೆ ಸಾಧ್ಯವಾಗಲಿಲ್ಲ. ಪಾತರಗಿತ್ತಿಯಂತೆ ಹಾರಲು ಪ್ರಯತ್ನಿಸಿದ ಜೀವಗಳು ಇವರಿಗೆ 'ದಾರಿ ತಪ್ಪಿದವರಂತೆ' ಕಂಡವು. ಇಂತಹ ಸಂಪ್ರದಾಯದ ಜೈಲಿನಲ್ಲಿ ತಮ್ಮನ್ನು ತಾವೇ ವೈಚಾರಿಕವಾಗಿ ಬಂಧಿಸಿಕೊಂಡವರ ಪ್ರತಿನಿಧಿಯೇ 'ಕಡೇಮನೆ ಗೋಪಾಲ'.\u003c\/span\u003e\u003cbr\u003e\u003cspan\u003eರೆಕ್ಕೆ ಬಿಚ್ಚಿ ಹಾರಲು ಬಯಸುವ ಮಗಳು, ಅದನ್ನು ಒಪ್ಪದ ಗೋಪಾಲನ ಸಂಪ್ರದಾಯಬದ್ಧ ಮನಸ್ಸು ಇವರಿಬ್ಬರ ನಡುವಿನ ಸಂಘರ್ಷವೇ ಈ ಕಾದಂಬರಿಯ ಜೀವಾಳ, ಗೋಪಾಲನಂತಹ ಅಳುಕು ಮನಸ್ಸುಗಳನ್ನು ಬದಲಿಸಲು ಪ್ರಯತ್ನಿಸುವ ಮಾನವೀಯ ಜೀವಗಳು, ತಂದೆ-ಮಗಳ ವಾತ್ಸಲ್ಯ, ಅಗಲಿಕೆಯ ನೋವು ಮತ್ತು ಬದುಕಿನ ಅನಿರೀಕ್ಷಿತ ತಿರುವುಗಳು ಕಥೆಯನ್ನು ಕುತೂಹಲಕಾರಿಯಾಗಿ ಕೊಂಡೊಯ್ಯುತ್ತವೆ. ಮಲೆನಾಡಿನ ಸೊಗಡಿನ ಭಾಷೆ. ಅಲ್ಲಿನ ಪರಿಸರ ಕಥಾವಸ್ತುವಿಗೆ ಪೂರಕವಾಗಿ ಮೂಡಿಬಂದಿವೆ.\u003c\/span\u003e\u003cbr\u003e\u003cspan\u003eಗೋಪಾಲ ತನ್ನ ಹಠಮಾರಿ ಧೋರಣೆ ಬದಲಿಸಿಕೊಂಡನೇ? ಅಥವಾ ತಂದೆಗಾಗಿ ಮಗಳು ತನ್ನ ಆಸೆಗಳನ್ನು ಬಲಿ ಕೊಟ್ಟಳೇ? ಸಮಾಜದ ಅಂಕುಡೊಂಕುಗಳನ್ನು ಮತ್ತು ಮಾನವೀಯ ಸಂಬಂಧಗಳ ತಲ್ಲಣಗಳನ್ನು ಅರ್ಥೈಸಿಕೊಳ್ಳಲು ಈ ಕಾದಂಬರಿಯನ್ನು ನೀವು ಓದುತ್ತೀರಿ ಎಂಬ ನಂಬಿಕೆ ನನಗಿದೆ.\u003c\/span\u003e\u003c\/p\u003e","brand":"Dinesh Hulimane","offers":[{"title":"Default Title","offer_id":47713552531715,"sku":"HB00006036","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KademaneGopala.webp?v=1770290754","url":"https:\/\/harivubooks.com\/products\/kademane-gopala-kannada-book","provider":"Harivu Books","version":"1.0","type":"link"}