K. Puttaswamy
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
'ಆರಿಜನ್ ಆಫ್ ಸ್ಪೀಷೀಸ್' ಗ್ರಂಥವು ಒಂದು ಸುದೀರ್ಘ ವಾದವೆಂದು ಡಾರ್ವಿನ್ ಹೇಳಿಕೊಂಡಿದ್ದಾರೆ. ಮೂಲದಲ್ಲಿರುವಂತೆಯೇ ಅದನ್ನು ವಾದವಾಗಿ ಮಂಡಿಸಿದ್ದೇನೆ.. ಡಾರ್ವಿನ್‌ನ ಈ ಕೃತಿ 'ಜೀವ ವಿಕಾಸ ವಿಜ್ಞಾನ'ಕ್ಕೆ ಈಗಲೂ ಒಂದು ಉತ್ಕೃಷ್ಟ ಪೀಠಿಕಾ ಗ್ರಂಥ. ಗ್ರಂಥವನ್ನು ಹಸ್ತಗೊಳಿಸುವಾಗ ಮೂಲ ತಿರುಳಿಗೆ ಅಪಚಾರವಾಗದಂತೆ ಎಚ್ಚರಿಕೆ ವಹಿಸಿದ್ದೇನೆ. ಡಾರ್ವಿನ್ ಅವರು ಓದುಗರ ಮನ ಮುಟ್ಟಲು ಅತಿ ನಮ್ರತೆಯಿಂದ ಅನೇಕ ಬಾರಿ ಉದಾಹರಣೆಗಳನ್ನು ಮನರುಚ್ಚರಿಸುತ್ತಾರೆ. ಅಂಥವುಗಳನ್ನು ಹಾಗೂ ಕೆಲವು ಅನಗತ್ಯ ವಿವರಗಳನ್ನು ಕೈಬಿಟ್ಟಿದ್ದೇನೆ. ಕೆಲವು ಕಡೆ ಕೇವಲ ಭಾವಾನುವಾದವನ್ನು ಕೊಟ್ಟಿದ್ದೇನೆ. ಮತ್ತೆ ಕೆಲವೆಡೆ ವಿಷಯ ಸರಾಗವಾಗಿ ಹರಿಯಲು ಮೂಲದ ಅನುಕ್ರಮವನ್ನು ಬದಲಿಸಿದ್ದೇನೆ. ವಿಷಯ ಮನರಾವೃತ್ತಿಯಾಗದಂತೆ ಎಚ್ಚರ ವಹಿಸಿದ್ದೇನೆ. ಇದಕ್ಕಾಗಿ ಇಂಗ್ಲಿಷ್‌ನಲ್ಲಿ ಸಂಕ್ಷಿಪ್ತಗೊಂಡ ಕೆಲವು ಗ್ರಂಥಗಳನ್ನು ಮಾದರಿಯಾಗಿಟ್ಟುಕೊಂಡಿದ್ದೇನೆ. ಇಡೀ ಗ್ರಂಥದಲ್ಲಿ ೧೯೦ ವಿಜ್ಞಾನಿಗಳ ಹಾಗೂ ಮತ್ತಿತರ ವ್ಯಕ್ತಿಗಳ ಹೆಸರು ಅಲ್ಲಲ್ಲಿ ಪ್ರಸ್ತಾಪವಾಗುತ್ತದೆ. ಅಗತ್ಯವೆನಿಸಿದಾಗ ಮಾತ್ರ ಅವರ ಹೆಸರನ್ನು ಉಳಿಸಿಕೊಂಡು ಉಳಿದ ಕಡೆ ಬಿಟ್ಟಿದ್ದೇನೆ.
ಡಾರ್ವಿನ್ ಮಂಡಿಸಿದ ಅನೇಕ ವಿಷಯಗಳ ಮೇಲೆ ಇತ್ತೀಚಿನ ವಿಜ್ಞಾನ ಚೆಲ್ಲಿರುವ ಬೆಳಕಿನ ಮೂಲಕ ಆತನ ವಾದ ಎಲ್ಲಿ ತಪ್ಪಿದೆ ಎಂಬುದನ್ನು ತೋರಿಸಲು ಅಲ್ಲಲ್ಲಿ ಸಂಕ್ಷಿಪ್ತ ವಿವರಣೆ ನೀಡುವುದರ ಮೂಲಕ ಯತ್ನಿಸಿದ್ದೇನೆ. ಹಲವು ಚಿತ್ರಗಳ ಮೂಲಕ ವಿಷಯವನ್ನು ಸರಾಗವಾಗಿಸಲು ಶ್ರಮಿಸಿದ್ದೇನೆ.
ಗ್ರಂಥ ಆರಂಭವಾಗುವ ಮುನ್ನ 'ವಿಕಾಸವಾದ ಸವೆಸಿದ ಹಾದಿ' ಲೇಖನದಲ್ಲಿ ವಿಕಾಸವಾದದ ಬಗೆಗಿನ ಹಿಂದಿನ ಚಿಂತನೆಗಳ ಜತೆಗೆ ಈಗ ಬೆಳಕಿಗೆ ಬಂದಿರುವ ವಿಷಯಗಳನ್ನು ಚರ್ಚಿಸಿದ್ದೇನೆ. ಇಲ್ಲಿ ಡಾರ್ವಿನ್ ಅವರ ಗ್ರಂಥದ ಮಹತ್ವವನ್ನು ವಿವರಿಸುವ ಪ್ರಯತ್ನವಿದೆ.
ಇವೆಲ್ಲವೂ ಗ್ರಂಥದ ಮೌಲ್ಯವನ್ನು ಹೆಚ್ಚಿಸುತ್ತವೆಂದು ಭಾವಿಸಿದ್ದೇನೆ.
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ರಚಿಸುವವರು ಎದುರಿಸುವ ಪಾರಿಭಾಷಿಕ ಶಬ್ದಗಳ ಅನುವಾದ ಮತ್ತು ಕಾಠಿಣ್ಯವನ್ನು ನಾನೂ ಎದುರಿಸಿದ್ದೇನೆ. ಸಸ್ಯ ವರ್ಗೀಕರಣದ ಸಾಮಾನ್ಯ ಶಬ್ದಗಳಾದ class, order, family, genus, species, variety ಅಂಥ ಶಬ್ದಗಳಿಗೆ ಕನ್ನಡ ಜೀವವಿಜ್ಞಾನ ಗ್ರಂಥಗಳಲ್ಲಿ ಸರಿಯಾದ ವಿವರಣೆ ಇಲ್ಲ. ಈ ಗ್ರಂಥದಲ್ಲಿ ಮತ್ತೆ ಮತ್ತೆ ಬರುವ species ಪದಕ್ಕೆ 'ಜೀವ ಸಂಕುಲ' ಅಥವಾ 'ಸಂಕುಲ' ಎಂದೂ ಅಪರೂಪವಾಗಿ 'ವಂಶ'' ಎಂದೂ ಬಳಸಿದ್ದೇನೆ. ಅನೇಕ ಹೆಸರುಗಳನ್ನು ಮೂಲದಂತೆಯೇ ಉಳಿಸಿಕೊಂಡು ಗ್ರಂಥದ ಕೊನೆಯಲ್ಲಿ ವಿವರಣೆ ನೀಡಿದ್ದೇನೆ. ಇದಲ್ಲದೆ ಭೂಗರ್ಭವಿಜ್ಞಾನ (Geology) ದ ಅನೇಕ ಪಾರಿಭಾಷಿಕ ಶಬ್ದಗಳು ಹೆಚ್ಚಾಗಿ ಬರುವುದರಿಂದ ಪಾರಿಭಾಷಿಕ ವಿವರಣಾ ಭಾಗದಲ್ಲಿ ವಿವರವಾಗಿ ಹೇಳಿದ್ದೇನೆ. ಇದರಿಂದ ವಾಚಕರಿಗೆ ಉಪಯೋಗವಾಗಬಹುದೆಂದು ಭಾವಿಸಿದ್ದೇನೆ.
ಮಾನವ ಚರಿತ್ರೆಯ ಕಾಲಘಟ್ಟವೊಂದರಲ್ಲಿ ಇಡೀ ಸಮಾಜದ ಚಿಂತನೆಯ ಮೇಲೆ ಪ್ರಭಾವ ಬೀರಿದ ಉತ್ಕೃಷ್ಟ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ.
ಕೆ. ಪುಟ್ಟಸ್ವಾಮಿ