{"product_id":"janna-samputa-naadu-nudi-pro-c-p-krishnamurthy-kannada-book","title":"ಜನ್ನ ಸಂಪುಟ","description":"\u003cp\u003eಕನ್ನಡವಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಿಗೆ ಸಾಹಿತ್ಯಕ ಸ್ಥಾನವನ್ನು ಕಲ್ಲಿಸಿಕೊಟ್ಟ ಶ್ರೇಯಸ್ಸು ಜೈನಕವಿಗಳಿಗೆ ಸಲ್ಲುತ್ತದೆ. ಕನ್ನಡದಲ್ಲಂತೂ ಅದರ ದೇಶಿತನದ ಸಿರಿಗೆ ಸಂಸ್ಕೃತದ ಸಿಹಿಯನ್ನು ಹದವಾಗಿ ಬೆರೆಸಿ ನಾಡಿದವರು ಜೈನಕವಿಗಳು, ಜನಪದ ಜಾನಪದಗಳನ್ನು ಶಾಸ್ತ್ರ, ಸಂಹಿತೆಗಳೊಂದಿಗೆ ಸುಂದರವಾಗಿ ಪೋಣಿಸಿದವರು-ಪಂಪ, ರನ್ನ, ಜನ್ನ ಮೊದಲಾದ ಮಾರ್ಗಕವಿಗಳು.\u003c\/p\u003e\n\u003cp\u003eಸಮಗ್ರ ಜೈನಸಾಹಿತ್ಯವನ್ನು ಹತ್ತೊಂಬತ್ತು ಸಂಪುಟಗಳಲ್ಲಿ ೨೦೦೬ರಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಅವುಗಳ ಪೈಕಿ ಹೆಚ್ಚಿನವು ಬೇಗನೆ ಮಾರಾಟವಾಗಿ ಸಾಹಿತ್ಯಾಸಕ್ತರಿಂದ ಬೇಡಿಕೆಯಲ್ಲಿದ್ದವು. ಹೀಗಾಗಿ ಕನ್ನಡ ವಿಶ್ವವಿದ್ಯಾಲಯವು ಇವುಗಳ ಪುನರ್ ಮುದ್ರಣವನ್ನು ಕೈಗೆತ್ತಿಕೊಂಡಿದೆ.\u003c\/p\u003e\n\u003cp\u003eಈ ಪುನರ್ಮುದ್ರಣ ಸಾಧ್ಯವಾಗುತ್ತಿರುವುದು ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೬ರಲ್ಲಿ ಸ್ಥಾಪನೆಯಾದ 'ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ'ಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಆರ್ಥಿಕ ನೆರವಿನಿಂದಾಗಿ.\u003c\/p\u003e\n\u003cp\u003e\"ಜನ್ನ ಸಂಪುಟ'ವನ್ನು ನಾಡಿನ ಹಿರಿಯ ವಿದ್ವಾಂಸರಲ್ಲೊಬ್ಬರಾದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಸಂಪಾದಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.\u003c\/p\u003e\n\u003cp\u003e॥ ಡಾ. ಮಲ್ಲಿಕಾ. ಎಸ್. ಘಂಟಿ\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Pro. Hampa Nagarajayya","offers":[{"title":"Default Title","offer_id":47881035743491,"sku":"HB00006863","price":400.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/JannaSamputa.jpg?v=1774615324","url":"https:\/\/harivubooks.com\/products\/janna-samputa-naadu-nudi-pro-c-p-krishnamurthy-kannada-book","provider":"Harivu Books","version":"1.0","type":"link"}