Kadabada Nanjunda Shastri. Vid. N. Ranganath Sharma
Publisher -
- Free Shipping
- Cash on Delivery (COD) Available
Couldn't load pickup availability
ಕಡಬದ ನಂಜುಂಡಶಾಸ್ತ್ರಿಗಳು ಮತ್ತು ವಿದ್ವಾನ್ ಎನ್.ರಂಗನಾಥ ಶರ್ಮರು ಕೂಡಿಕೊಂಡು ಅನುವಾದ ಮಾಡಿರುವ ಕೃತಿ 'ಜೈಮಿನಿ ಭಾರತ'.
ಸಂಸ್ಕೃತದಲ್ಲಿ ಈ ಗ್ರಂಥಕ್ಕೆ 'ಜೈಮಿನೀಯಾಶ್ವಮೇಧಿಕ ಪಠ್ಯ' ಎಂಬ ಹೆಸರಿದೆ. ಇದನ್ನು ಕನ್ನಡದಲ್ಲಿ ವಾರ್ಧಕ ಷಟ್ಟದಿಗಳಾಗಿ ರಚಿಸಿರುವ ಲಕ್ಷ್ಮೀಶಕವಿಯು ಇದಕ್ಕೆ 'ಜೈಮಿನಿ ಭಾರತ' ಎಂದು ಹೆಸರನ್ನು ಕೊಟ್ಟಿದ್ದಾನೆ. ಈತನ ಗ್ರಂಥಕ್ಕೆ ಸಂಸ್ಕೃತದ ಅಶ್ವಮೇಧಿಕ ಪಠ್ಯವೂ ಮೂಲವಾಗಿದೆ. ಈ ಮೂಲಗ್ರಂಥಕ್ಕೂ ಪರಿವರ್ತನ ರೂಪವಾದ ಷಟ್ಟದೀಗ್ರಂಥಕ್ಕೂ ಕಥಾಭಾಗದಲ್ಲಿಯೂ, ವರ್ಣನಾಭಾಗದಲ್ಲಿಯೂ ಯಾವ ಸಾಮ್ಯ ವೈಷಮ್ಯಗಳೂ ಹೆಚ್ಚು ಕಡಿಮೆಗಳೂ ಇವೆಯೋ ಎಂಬುದನ್ನು ತಿಳಿಯುವುದು ಅವಶ್ಯಕವಾಗಿದೆ. ಇದು ಸಂಸ್ಕೃತ ಪರಿಚಯ ಹೆಚ್ಚಾಗಿಲ್ಲದ ಕನ್ನಡಿಗರಿಗೆ ಸುಲಭವಲ್ಲವಾದ ಕಾರಣ ಸಂಸ್ಕೃತ ಮೂಲಕ್ಕೆ ಪ್ರತಿಬಿಂಬವಾಗಿರುವಂತೆ ಪ್ರಾಯಶಃ ಎಲ್ಲ ಭಾಗದಲ್ಲಿಯೂ ಸಮವಾಗಿರುವ ಹಾಗೆ ಪರಿವರ್ತನರೂಪವಾದ ಈ ಕನ್ನಡದ ಗದ್ಯಾನುವಾದವನ್ನು ಬರೆದಿದೆ. ಅತ್ಯಲ್ಪ ಭಾಗದಲ್ಲಿ ಪರಿವರ್ತನಾ ಕೇಶ ಮೊದಲಾದ ಕಾರಣದಿಂದ ಬಹು ವಿರಳವಾಗಿ ಸ್ವಲ್ಪ ವ್ಯತ್ಯಾಸಗಳು ಕಾಣಬಹುದು. ಆದರೂ ಅದು ಅಷ್ಟು ವ್ಯತ್ಯಾಸವೆಂದು ಹೇಳಿಕೊಳ್ಳುವ ಹಾಗಿಲ್ಲವೆನ್ನಬಹುದಾಗಿದೆ. ಕನ್ನಡದ ಜೈಮಿನಿ ಭಾರತವನ್ನನುಸರಿಸಿ ಮೈಸೂರು ಶಾಸನದ ಇಲಾಖೆಯ ಅಸಿಸ್ಟೆಂಟ್ ಮ!!ರಾ!! ರಾ. ರಾಮರಾವ್ ಬಿ.ಎ. ಇವರು ಕನ್ನಡದಲ್ಲಿ ಗದ್ಯಾನುವಾದವನ್ನು ಬರೆದಿದ್ದಾರೆ. ಇದಲ್ಲದೆ ಶ್ರೀನಾಥನೆಂಬ ಕವಿಯು ತೆಲುಗಿನಲ್ಲಿ 'ಜೈಮಿನಿ ಭಾರತಮು' ಎಂಬ ಗ್ರಂಥವನ್ನು ಬರೆದಿರುವಂತೆ ತಿಳಿಯಬರುತ್ತದೆ. ಇವೆಲ್ಲವನ್ನೂ ಹೋಲಿಸಿ ನೋಡುವುದರಿಂದ ವಾಚಕರಿಗೆ ಅನೇಕ ಸಂಗತಿಗಳು ಸ್ಪಷ್ಟವಾಗಬಹುದು. ಸಂಸ್ಕೃತ ಮೂಲಕ್ಕೂ ಇವುಗಳಿಗೂ ಇರುವ ಹೆಚ್ಚು ಕಡಿಮೆಗಳನ್ನು ತಿಳಿಯಲು ಈ ಗ್ರಂಥವನ್ನು ರಚಿಸಿದೆ. ವಾಚಕರು ಇದನ್ನೊದುವುದರಿಂದ ಸೌಲಭ್ಯವುಂಟೆಂದು ತೋರುವುದು. ಪ್ರಾಜ್ಞರು ಈ ಗ್ರಂಥವನ್ನು ಅವಲೋಕಿಸಿ ನ್ಯೂನಾತಿರೇಕಗಳನ್ನು ತಿಳಿಯಪಡಿಸಿ ಗುಣಗ್ರಹಣಮಾಡುವರೆಂದು ಹಾರೈಸುತ್ತೇವೆ.
ಕಡಬದ ನಂಜುಂಡಶಾಸ್ತ್ರಿಗಳು
ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು
