{"product_id":"jai-hanuman-kathegalu-kannada-book","title":"ಜೈ ಹನುಮಾನ್ ಕಥೆಗಳು","description":"\u003cp\u003eರಾಮಾಯಣದಲ್ಲಿ ಆಂಜನೇಯನದು ಒಂದು ವಿಶಿಷ್ಟ ಪಾತ್ರ. ಆತನ ಭಕ್ತಿ, ಸ್ವಾಮಿನಿಷ್ಠೆ ಅಪಾರವಾದುದು. ಆಂಜನೇಯನ ಒಂದೊಂದು ಸಾಹಸವೂ ಅತ್ಯಂತ ರೋಚಕವಾದುದಾಗಿದೆ. ಅತ್ಯಂತ ಮಹಿಮಾಮಯನಾದ ಆಂಜನೇಯನ ವೀರ ಕಾರ್ಯಗಳನ್ನು ಮಾನವರೆಲ್ಲರೂ ಅರಿಯಬೇಕಾದುದು ಅವಶ್ಯಕವಾಗಿದೆ.\u003c\/p\u003e\n\u003cp\u003eಆಂಜನೇಯನು ಬಾಲ್ಯದಿಂದಲೂ ಅತ್ಯಂತ ಸಾಹಸಿ. ರಾಮಾಯಣದ ಆದಿಯಿಂದ ಅಂತ್ಯದವರೆಗೆ ಅವನು ತೋರಿದ ಸಾಹಸ ಗಮನಾರ್ಹ ವಾದುದಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ವೀರ ಆಂಜನೇಯನ ಚರಿತ್ರೆಯನ್ನು ಓದಿ ತಿಳಿದುಕೊಳ್ಳಲೆಂದು ಈ ಕಿರುಕೃತಿಯನ್ನು ರಚಿಸಲಾಗಿದೆ. ಈ ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಂಡರೆ ನನ್ನ ಶ್ರಮ ಸಾರ್ಥಕವಾದಂತಾಗುತ್ತದೆ.\u003c\/p\u003e\n\u003cp\u003eಈ ಕಿರುಕೃತಿಯನ್ನು ರಚಿಸಲು ಪ್ರೇರಣೆ ಇತ್ತು ಪ್ರಕಟಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು ನಿರ್ವಿಘ್ನವಾಗಿ ಪುಸ್ತಕವನ್ನು ಹೊರತಂದ ಮಹೇಶ್ ಪ್ರಕಾಶನದ ಶ್ರೀಯುತ ಪುರುಷೋತ್ತಮ್ರವರಿಗೆ ನಾನು ಆಭಾರಿಯಾಗಿದ್ದೇನೆ. ಸಕಾಲಕ್ಕೆ ಮುದ್ರಣ ಕಾರ್ಯವನ್ನು ನೆರವೇರಿಸಿಕೊಟ್ಟ ಪ್ರೆಸ್ನವರಿಗೂ ಮತ್ತು ಅಚ್ಚುಕೂಟ ಬಳಗದವರಿಗೂ ನನ್ನ ವಂದನೆಗಳು.\u003c\/p\u003e","brand":"Vidwan K. Chandrashekar","offers":[{"title":"Default Title","offer_id":47774836588803,"sku":"HB00006240","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-21at12.11.35PM.jpg?v=1771656781","url":"https:\/\/harivubooks.com\/products\/jai-hanuman-kathegalu-kannada-book","provider":"Harivu Books","version":"1.0","type":"link"}