K. N. A.
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಕೃತಿಯ ಬಗ್ಗೆ
* ಪರೀಕ್ಷಾ ಮಾರ್ಗದರ್ಶಿ
ಈ ಸರಳ ಭಾಷೆ ಸಂಕ್ಷಿಪ್ತ ಶೈಲಿ
* ಪ್ರತಿ ಅಧ್ಯಾಯಕ್ಕೂ ಪ್ರಶ್ನೆಕೋಶಗಳ ಸೇರ್ಪಡೆ
ಲೇಖಕರ ಬಗ್ಗೆ
ಕೆ.ಎನ್. ಅಶ್ವತಪ್ಪನವರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಂಬಾಲ ಗ್ರಾಮದವರು, ಕೆ.ಎನ್.ಎ. ಎಂದೇ ಈಗಾಗಲೇ ಚಿರಪರಿಚಿತರಾದ ಇವರು 1991ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪ್ರಥಮ ದರ್ಜೆಯಲ್ಲಿ ಮಾಸ್ಟರ್ ಪದವಿ ಪಡೆದಿರುತ್ತಾರೆ. ಜೊತೆಗೆ ಎಂ.ಫಿಲ್, ಶಿಕ್ಷಣ ಹಾಗೂ ಕಾನೂನು ಪದವೀಧರರು, ಶ್ರೀಯುತರು 1991 ರಿಂದಲೇ ಖ್ಯಾತ ಶಿಕ್ಷಣ ತಜ್ಞ ಪದ್ಮಭೂಷಣ ದಿ|| ಡಾ|| ಎಚ್. ನರಸಿಂಹಯ್ಯ ಫೌಂಡೇಷನ್, ದಿ ನ್ಯಾಷನಲ್ ಕಾಲೇಜು, ಬಾಗೇಪಲ್ಲಿ, ಇಲ್ಲಿ ತಮ್ಮ ಅಧ್ಯಾಪನ ವೃತ್ತಿ ಕೈಗೊಂಡು ಎರಡು ದಶಕಗಳಿಗೂ ಮೀರಿ ಇತಿಹಾಸ ಬೋಧಿಸಿದ್ದಾರೆ. ನುರಿತ ಅಧ್ಯಾಪಕರಾದ ಇವರು ರಚಿಸಿರುವ ಪಿಯು, ಪಠ್ಯಪುಸ್ತಕಗಳು ರಾಜ್ಯಮಟ್ಟದಲ್ಲಿ ಹೆಸರು ಗಳಿಸಿವೆ. ಜೊತೆಗೆ ವಿವಿಧ ಮೆಚ್ಚುಗೆ ಪಡೆದಿವೆ. ಆಧುನಿಕ ಯೂರೋಪ್, ಭಾರತದ ಇತಿಹಾಸ (3 ಭಾಗಗಳು) ಸೇರಿದಂತೆ ಇವರ ಒಟ್ಟು 43 ಕೃತಿಗಳು ಪ್ರಕಟವಾಗಿ ಜನಪ್ರಿಯವಾಗಿವೆ. ಪ್ರಸ್ತುತ ಕೃತಿಯು ಸರಳ ಹಾಗೂ ತಿಳಿಯಾದ ಭಾಷೆ ಬಳಸಿ ಆಕರ್ಷಕ ನಿರೂಪಣಾ ಶೈಲಿಯಲ್ಲಿ ಮಂಡಿಸಿದ್ದಾರೆ. ಈ ಕೃತಿ ಓದುಗರ ನಿರೀಕ್ಷೆಗೆ ಖಂಡಿತ ತಲುಪಬಲ್ಲದು.
-ಪ್ರಕಾಶಕರು
ಪ್ರಕಾಶಕರು-ಸಪ್ನ ಬುಕ್ ಹೌಸ್
