Skip to product information
1 of 1

ಡಾ. ಸೂರ್ಯನಾಥ ಕಾಮತ್

ಇತಿಹಾಸದ ಆಚೆಈಚೆ

ಇತಿಹಾಸದ ಆಚೆಈಚೆ

Publisher: ಹೇಮಂತ ಸಾಹಿತ್ಯ

Regular price Rs. 175.00
Regular price Sale price Rs. 175.00
Sale Sold out
Shipping calculated at checkout.
ಇತಿಹಾಸ ಕ್ಷೇತ್ರದ ಅದ್ವೀತಿಯ ಸಾಧಕ, ಅಸಾಮಾನ್ಯ ಸಂಶೋಧಕ, ಉತ್ತಮ ಪ್ರಾಧ್ಯಾಪಕ ಡಾ|| ಸೂರ್ಯನಾಥ ಉಪೇಂದ್ರ ಕಾಮತ್ ಅವರು,

1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ 1959ರಲ್ಲಿ ಅರ್ಥಶಾಸ್ತ್ರ ಮತ್ತು ಇತಿಹಾಸದಲ್ಲಿ ಎಂ.ಎ. ಪದವಿ, ಮುಂಬೈ ವಿಶ್ವವಿದ್ಯಾಲಯದಿಂದ 1965ರಲ್ಲಿ ಇತಿಹಾಸದಲ್ಲಿ ಎಂ.ಎ. ಪದವಿ, ಮುಂಬೈ ವಿಶ್ವವಿದ್ಯಾಲಯದಿಂದ 1965ರಲ್ಲಿ ಇತಿಹಾಸದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದರು. 1968 ರಿಂದ 1981ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಮುಂದೆ ಕರ್ನಾಟಕ ರಾಜ್ಯ ಪತ್ರಾಗಾರದ ನಿರ್ದೇಶಕರಾಗಿ, ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಚರಿತ್ರೆ, ಸಂಶೋಧನೆ, ಸಂಪಾದಕತ್ವ, ಸಾಹಿತ್ಯ, ಪತ್ರಿಕಾರಂಗ, ಕಥೆ, ಕಾದಂಬರಿ, ಲಲಿತ ಪ್ರಬಂಧ, ಹರಟೆ ಇತ್ಯಾದಿ ವಿವಿಧ ಪ್ರಕಾರಗಳಲ್ಲಿ ಸುಮಾರು 80 ಕೃತಿಗಳನ್ನು ರಚಿಸಿ, ಕನ್ನಡ ಸಾರಸ್ವತ ಲೋಕದ ಸಂಪತ್ತನ್ನು ಶ್ರೀಯುತರು ಸಮೃದ್ಧಗೊಳಿಸಿದ್ದಾರೆ. ಜಿಲ್ಲಾ ಗ್ಯಾಸೆಟಿಯರ್‌ಗಳು, ಹ್ಯಾಂಡ್‌ಬುಕ್ ಆಫ್ ಕರ್ನಾಟಕ, ರಾಜ್ಯ ಗ್ಯಾಸೆಟಿಯರ್‌ಗಳು ಇವರ ಸಂಪಾಕತ್ವದಲ್ಲಿ ಹೊರಬಂದಿರುವ ಪ್ರಕಟಣೆಗಳು, 'ಮುಳ್ಳಿನ ಹಾದಿ' (ಐತಿಹಾಸಿಕ ಕಾದಂಬರಿ), ಕರ್ನಾಟಕದ ಗಾಂಧೀ, ತಿಮ್ಮಪ್ಪನಾಯಕ, ಕರ್ನಾಟಕದ ಸಂಕ್ಷಿಪ್ತ ಇತಿಹಾಸ, ಕರ್ನಾಟಕದಲ್ಲಿ ಕ್ವಿಟ್ ಇಂಡಿಯಾ ಚಳುವಳಿ, ಒಕ್ಕಲುತನ ಮತ್ತು ಒಕ್ಕಲಿಗರು (ಇತಿಹಾಸ ವಿಶ್ಲೇಷಣೆ), ಕರ್ನಾಟಕ ಇತಿಹಾಸದ ಹಲವು ಮುಖಗಳು, ಸ್ವಾತಂತ್ರ್ಯ ಹೋರಾಟದ ಹಲವು ಮುಖಗಳು, ವಿಜಯನಗರದ ಶ್ರೀ ಕೃಷ್ಣದೇವರಾಯ, ಮೊದಲಾದವು ಇವರ ಮಹತ್ವದ ಕೃತಿಗಳು,

ಮಿಥಿಕ್ ಸೊಸೈಟಿ, ಕರ್ನಾಟಕ ಇತಿಹಾಸ ಅಕಾಡೆಮಿ ಹಾಗೂ ಇತರ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ದೆಹಲಿಯ ಭಾರತೀಯ ಸಾಮಾಜಿಕ ಮತ್ತು ಆರ್ಥಿಕ ಅನುಸಂಧಾನ ಸಂಸ್ಥೆ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಕಲ್ಕತ್ತಾದ ರಾಜಾರಾಮ್ ಮೋಹನರಾಯ್‌ ಲೈಬ್ರರಿ ಫೌಂಡೇಶನ್‌ನ ಅಧ್ಯಕ್ಷರಾಗಿ, ಇವರು ಸಲ್ಲಿಸಿರುವ ಸೇವೆ, ನೀಡಿದ ಕೊಡುಗೆ ಅಮೂಲ್ಯ.

'ಕರ್ನಾಟಕ ಸಂಕ್ಷಿಪ್ತ ಇತಿಹಾಸ' ಎಂಬ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾನವಿಕ ವಿಭಾಗದ ಪ್ರಶಸ್ತಿ, 'ಜಾನ್ ಫಿಟ್'ರ ಕುರಿತಾದ ವ್ಯಕ್ತಿ ಚಿತ್ರಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಪ್ರಶಸ್ತಿ, ಕರ್ನಾಟಕ ಸಂಘ ಶಿವಮೊಗ್ಗ ಇವರಿಂದ ಶಂಬಾ ಜೋಶಿ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಶ್ರೀ ಕೃಷ್ಣದೇವರಾಯ ಪಟ್ಟಾಭಿಷೇಕ 500ನೇ ವರ್ಷದ ನೆನಪಿನ ಪ್ರಶಸ್ತಿ, ರಾಜ್ಯಪ್ರಶಸ್ತಿ ಪಡೆದಿರುವ ಶ್ರೀಯುತರಿಗೆ ಇನ್ನೂ ಹಲವು ಗೌರವ ಪುರಸ್ಕಾರಗಳು ಸಂದಿವೆ.

ಹೇಮಂತ ಸಾಹಿತ್ಯ
View full details