Skip to product information
1 of 1

Dr. B. Revathi Nandan

ಇರುವೆ ಎಲ್ಲೆಲ್ಲೂ ಇರುವೆ

ಇರುವೆ ಎಲ್ಲೆಲ್ಲೂ ಇರುವೆ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಡಾ.ರೇವತಿ ನಂದನ್‌ರವರ "ಇರುವೆ ಎಲ್ಲೆಲ್ಲೂ ಇರುವೆ" ವಿಶಿಷ್ಠ ಕೃತಿಗೆ ಹಿನ್ನುಡಿ ಬರೆಯಲು ನನಗೆ ಅತೀವ ಹರ್ಷವಾಗುತ್ತಿದೆ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಕೊರತೆಯಿದೆಯೆಂಬ ಕೂಗು ಕೇಳಿಬರುತ್ತಿರುವ ದಿನಗಳಲ್ಲಿ ಈ ವಿಶಿಷ್ಟ ಹೊತ್ತಗೆ ಹೊರ ಬರುತ್ತಿರುವುದು ಶುಭ ಸಂಕೇತ ಮತ್ತು ತೃಪ್ತಿದಾಯಕ.

ಈ ಹೊತ್ತಗೆಯ 1ನೇ ಅಧ್ಯಾಯದಲ್ಲಿ ಇರುವೆಗಳ ಜೀವನ ವಿಧಾನವನ್ನು ಡಾ. ರೇವತಿ ನಂದನವರು ಚಿತ್ತಾಕರ್ಷಕವಾದ ರೀತಿಯಲ್ಲಿ ವಿವರಿಸಿದ್ದಾರೆ. 2ನೇ ಅಧ್ಯಾಯದಲ್ಲಿ ಸಾಮಾಜಿಕ ಬದುಕಿನ ಬಗ್ಗೆ ಸುಂದರವಾದ ವಿವರಣೆಯಿದೆ. ಇರುವೆಗಳ ಗೂಡಿನ ವಿವರಣೆಯನ್ನು ಮನೋಜ್ಞವಾಗಿ 3ನೇ ಅಧ್ಯಾಯದಲ್ಲಿ ನೀಡಿದ್ದಾರೆ. "ಇರುವೆ ಸರ್ವಭಕ್ಷಕ" ಎಂಬ 4ನೇ ಅಧ್ಯಾಯವನ್ನು ಮನಂಬುಗುವಂತೆ ವಿವರಿಸಿದ್ದಾರೆ. 5ನೇ ಅಧ್ಯಾಯದಲ್ಲಿ ಶ್ರೀಸಾಮಾನ್ಯರು ಅರಿಯದ ವಿಸ್ಮಯಕರ ಮಾಹಿತಿಗಳಿವೆ. ಅಧ್ಯಾಯ 6ರಲ್ಲಿ ಸುಳ್ಯ ತಾಲೂಕಿನ ಇರುವೆಗಳ ವಿವರ, "ಕೆಲವು ಇರುವೆ ಜಾತಿಗಳ ಬದುಕು ಬವಣೆ" ಎಂಬ 7ನೇ ಅಧ್ಯಾಯದಲ್ಲಿ ಲೇಖಕಿ ವಿಷಯಗಳನ್ನು ಆಕರ್ಷಕವಾಗಿ ತೆರೆದಿಟ್ಟಿದ್ದಾರೆ. 8ನೇ ಅಧ್ಯಾಯದಲ್ಲಿ ರಕ್ಷಣೆ ಮತ್ತು ಭಕ್ಷಣೆಗಾಗಿ ನಡೆಯುವ "ಅನುಕರಣೆ"ಯನ್ನು ವಿವರಿಸುತ್ತಾರೆ.


View full details