{"product_id":"illi-shastra-helalaguvudu-travelogue-shashidhara-haladi-kannada-book","title":"ಇಲ್ಲಿ ಶಾಸ್ತ್ರ ಹೇಳಲಾಗುವುದು","description":"\u003cp\u003e\u003cspan\u003eಶಶಿಧರ ಹಾಲಾಡಿಯವರ ಬರಹದ ವಿಶೇಷವೆಂದರೆ ಅವರಲ್ಲಿರುವ ಪ್ರಕೃತಿ ಪ್ರೀತಿ, ಜೊತೆಗೆ ಸರಳವಾಗಿ ತಾನು ಕಂಡ ಸಂಗತಿಗಳನ್ನು ಓದುಗನಿಗೆ ಮದಟ್ಟು ಮಾಡುವ ಅವರ ಸರಳಗನ್ನಡದ ಶೈಲಿ. ಇತ್ತೀಚೆಗೆ ಬಂದ ಸೋಲೋ ಟ್ರಿಪ್ ಆಗಲೀ ಈಗ ಬಂದ “ಇಲ್ಲಿ ಶಾಸ್ತ್ರ ಹೇಳಲಾಗುವುದು” ಕೃತಿಯಲ್ಲಾಗಲೀ ಈ ಗುಣವನ್ನು ಕಾಣಬಹುದು. ಆಗುಂಬೆ ಬೆಟ್ಟದಿಂದ ಹಾಲಾಡಿಯ ತನಕ ನಡೆದು ಬಂದಷ್ಟೇ ಸಲೀಸಾಗಿ ನಾರ್ಥ್ ವಿಲ್ಲೆಯ ಸ್ಟೇಟ್ ಪಾರ್ಕಿನಲ್ಲಿ ದಟ್ಟ ಅರಣ್ಯದಲ್ಲಿ ಏಕಾಂಗಿಯಾಗಿ ನಡೆದು ಬಂದ ಅಪರಿಚಿತ ಮಹಿಳೆಯೊಬ್ಬಳ ಕುರಿತು ಬರೆಯಬಲ್ಲರು. ‘ಸೊಲೋ ಟ್ರಿಪ್’ ನಲ್ಲಿ  ಲೇಖಕರ ಅನುಭವ “ಇಲ್ಲಿ ಶಾಸ್ತ್ರ ಹೇಳಲಾಗುವುದು” ಕೃತಿಯಲ್ಲಿ ಆ ಅಪರಿಚಿತ ಮಹಿಳೆಯನ್ನು ಕಂಡಾಗ ಮತ್ತೊಮ್ಮೆ ಮಾರ್ದನಿಸುತ್ತದೆ.  ಯಶಸ್ವಿ ಅಂಕಣಕಾರರಲ್ಲೊಬ್ಬರಲ್ಲಾದ ಹಾಲಾಡಿಯವರಿಗೆ ಶಬ್ದಗಳ ಮಿತಿಯಲ್ಲಿ ವಿಷಯದ ನಿರೂಪಣೆ ಹೇಳುವ ಕಲೆ ಸಲೀಸಾಗಿ ದಕ್ಕಿದೆ.  ಅಮೇರಿಕಾದಲ್ಲಿರುವ ತಮ್ಮ ಮಗಳ ಮನೆಗೆ ಹೋಗಿದ್ದಾಗ ಇದ್ದ ಮೂರು ತಿಂಗಳಲ್ಲಿ ತಿರುಗಿದ ಪ್ರದೇಶಗಳ ವಿಶೇಷಗಳನ್ನು ಆ ನೆನಪನ್ನು ಕಾಪಿಟ್ಟುಕೊಳ್ಳಲು ತೆಗೆದ ಫೋಟೋಗಳನ್ನು ಸಂಗ್ರಹಿಸಿ \u003c\/span\u003e\u003cstrong\u003e“\u003c\/strong\u003e\u003cstrong\u003eಇಲ್ಲಿ\u003cspan\u003e \u003c\/span\u003e\u003c\/strong\u003e\u003cstrong\u003eಶಾಸ್ತ್ರ\u003cspan\u003e \u003c\/span\u003e\u003c\/strong\u003e\u003cstrong\u003eಹೇಳಲಾಗುವುದು”\u003c\/strong\u003e\u003cspan\u003e ಎಂಬ ಕೃತಿಯನ್ನು ಬರೆದಿದ್ದಾರೆ. \u003c\/span\u003e\u003c\/p\u003e","brand":"Shashidhara Haladi","offers":[{"title":"Default Title","offer_id":49384085815555,"sku":"HB00007407","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/IlliShastraHelalaguvudu.jpg?v=1786103085","url":"https:\/\/harivubooks.com\/products\/illi-shastra-helalaguvudu-travelogue-shashidhara-haladi-kannada-book","provider":"Harivu Books","version":"1.0","type":"link"}