Skip to product information
1 of 1

Poornima Malagimani

ಇಜಯಾ-ಕಾದಂಬರಿ

ಇಜಯಾ-ಕಾದಂಬರಿ

Publisher -

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಪತ್ತೇದಾರಿ ಕತೆಯೋ ಎಂಬಂತೆ ತೊಡಗುವ ಈ ಕಾದಂಬರಿ ಕ್ರಮೇಣ ಒಂದು ಥ್ರಿಲ್ಲರ್ ಆಗುವ ಎಲ್ಲ  ಲಕ್ಷಣಗಳನ್ನೂ ಮೈಗೂಡಿಸಿಕೊಂಡು ಓದುಗನನ್ನು ಕುತೂಹಲದ ಸೆಳೆತಕ್ಕೆ ಒಡ್ಡಿ, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸ್ವಲ್ಪ ಹದತಪ್ಪಿದರೂ ಕೇವಲ ಮೊನಲಾಗ್ ಆಗಿ ಬಿಡ ಬಹುದಾಗಿದ್ದ ಉತ್ತಮ ಪುರುಷ ನಿರೂಪಣೆಯ ಅಪಾಯಗಳಿಂದ ನಾಜೂಕಾಗಿ ತಪ್ಪಿಸಿಕೊಂಡು, ದೈನಂದಿನ ಬದುಕಿಗೇ ಸಂಬಂಧಿಸಿದ ಸತ್ಯದ ಶೋಧಲ್ಲಿ ಆಯುವಲ್ಲಿ ಜನಪ್ರಿಯ ಮಾದರಿಯ ಕಥಾನಕ ಸಾಧಿಸಬಹುದಾದ ಒಂದು ಅಳಪನ್ನು ಇಲ್ಲ ಪೂರ್ಣಿಮಾ ಅವರು ನಮಗೆ ತೋರಿಸಿ ಕೊಡುತ್ತಾರೆ. ನಮ್ಮ ಅಸ್ತಿತ್ವ ಅದನ್ನು ದೃಢೀಕರಿಸುವ ಮನುಷ್ಯ ಸಂಬಂಧಗಳು; ಅದರ ಅಸ್ಮಿತೆ, ಅದನ್ನು ದೃಢೀಕರಿಸುವ ನಮ್ಮ ಕ್ರಿಯಾಶೀಲ ಸಾಧನಗಳು, ಅಸ್ತಿತ್ವ ಮತ್ತು ಇನ್ನಿತೆಯ ಮೂರ್ತರೂಪವಾದ ದೇಹ ಹಾಗೂ ಅಮೂರ್ತರೂಪವಾದ ಮನಸ್ಸು ಎರಡರಲ್ಲಿ ಯಾವುದು ನಮ್ಮ ಒಡನಾಡಿಗಳ ಮಟ್ಟಗ ರಿಲವಂಟ್ ಆಗಿ ಆಯುತ್ತದೆ, ಎರಡೂ ಮುಖ್ಯ ಯಾರಿಗೆ, ಎರಡೂ ಮುಖ್ಯವಲ್ಲ ಯಾರಿಗೆ, ಇವುಗಳಲ್ಲಿ ಒಂದರ ಹೊರತು ಇನ್ನೊಂದಕ್ಕೆ ಇರುವ ಪರಿಕಲ್ಪನೆ ಎಷ್ಟರಮಟ್ಟಿಗೆ ನಿಜ ಎನ್ನುವುದೆಲ್ಲ ಸೈಕಲಾಜಿಕಲ್/ಫಿಲಾಸಫಿಕಲ್ ಆಜ್ಞಾಸ ಎನ್ನುವುದು ನಿಜ. ಆದರೆ ಒಂದು ಸುಂದರ ಕಥನದ ಓದಲ ಪೂರ್ಣಿಮಾ ಅವರು ಇದನ್ನು ಓದುಗನ ಮನಸ್ಸಿವಲ್ಲ 'ಮುಳ' ಚಿಟ್ಟಂತೆ ಅಡುವಲ್ಲಿ ಯಶಸ್ವಿಯಾಗಿರುವುದು ಮೆಚ್ಚುಗೆಗೂ ಅಚ್ಚರಿಗೂ ಕಾರಣವಾಗುತ್ತದೆ. ಇತ್ತೀಚೆಗಷ್ಟೇ ಬಂದು ಹೆಸರು ಮಾಡಿದ ರಿಯಾ ಮುಖರ್ಜಿಯವರ ಕಾದಂಬರಿಯ ಒಳಗುವಿಯನ್ನೇ ತೀರ ವಿಭಿನ್ನ ನೆಲೆಯಿಂದ ನಿರೂಪಿಸುವ ಪೂರ್ಣಿಮಾ ಅವರ ಈ ಕಾದಂಬಲಿ ಓದುಗನಲ್ಲಿ ಹುಟ್ಟಸುವ ಸೂಕ್ಷ್ಮ ತಲ್ಲಣ ಕನ್ನಡಕ್ಕೆ ಹೊಸದು.

-ನರೇಂದ್ರ ಪೈ

ಗೋಮಿನಿ ಪ್ರಕಾಶನ

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
C
Chandrashekar Dr
ರೀವ್ಯೂ

ತುಂಬಾ ಚನಾಗಿದೆ