{"product_id":"idu-jeeva-iduve-jeevana-articles-ravi-belager-kannada-book","title":"ಇದು ಜೀವ ಇದುವೇ ಜೀವನ","description":"\u003cp\u003eಇದು ನಿಜಕ್ಕೂ ನನ್ನಿಂದ ಸಾಧ್ಯವಾ?\u003cbr data-mce-fragment=\"1\"\u003e\u003cbr data-mce-fragment=\"1\"\u003eಸಾವಿರ ಸಲ ಯೋಚಿಸಿದ್ದೇನೆ. ಏಕೆಂದರೆ ನನ್ನ ಮಾಮ ಬೆಳಗೆರೆ ಕೃಷ್ಣಶಾಸ್ತ್ರಿಗಳು ಯೇಸುವಿನಂತೆ ಬದುಕಿದವರು. ನಾನು ಅದಕ್ಕೆ ತದ್ವಿರುದ್ಧವಾಗಿ ಬದುಕುತ್ತಿರುವ ಜುದಾಸನಂಥವನು. ಯೇಸುವಿನ ಜೀವನ ಕಥನವನ್ನು ಜುದಾಸ ಬರೆಯುವುದುಂಟೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಈತನಕ ಎಪ್ಪತ್ತು ಪುಸ್ತಕ ಅನಾಯಾಸವಾಗಿ ಬರೆದಿದ್ದೇನೆ. ಅಂದರೆ, ನನಗೆ ಬರೆಯಲು ಬರುತ್ತದೆ. ಬಾಲ್ಯದಲ್ಲಿ ತಾರುಣ್ಯದಲ್ಲಿ ಅಮ್ಮನೊಂದಿಗೆ ಬದುಕುತ್ತಾ, ಮಾಮನೊಂದಿಗೆ ಅಲೆಯುತ್ತಾ ಆತನ ಬಗ್ಗೆ ಅಷ್ಟಿಷ್ಟು ಅರಿತಿದ್ದೇನೆ. ಮತ್ತು ಬೆಳಗೆರೆಯವನಲ್ಲದಿದ್ದರೂ ಬೆಳಗೆರೆ ಕುಟುಂಬದೊಳಕ್ಕೆ ಹೊಕ್ಕು ದಾಖಲಾಗಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೆಲವು ಕಾರಣಗಳಿಗಾಗಿ ಶಾಸ್ತ್ರಿಗಳ ಜೀವನ ಕಥನ ಬರೆಯಲು ನಾನು ಅರ್ಹ. ಅಷ್ಟೆ. ಉಳಿದಂತೆ ಸರಿ ಸುಮಾರು ತೊಂಬತ್ತೇಳು ವರ್ಷಗಳ ಆ ಶ್ರೇಷ್ಠ ಜೀವಿಯ ಬದುಕನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಮನುಷ್ಯ ಮಾತ್ರರಿಗೆ ಕಷ್ಟ ಕಷ್ಟ ಕಷ್ಟ,\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ\u003c\/p\u003e\n\u003cp\u003eಭಾವನಾ ಪ್ರಕಾಶನ\u003c\/p\u003e","brand":"Ravi Belagere","offers":[{"title":"Default Title","offer_id":42103441195267,"sku":"HB00000911","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/idujeevaiduvejeevana_1.jpg?v=1637841587","url":"https:\/\/harivubooks.com\/products\/idu-jeeva-iduve-jeevana-articles-ravi-belager-kannada-book","provider":"Harivu Books","version":"1.0","type":"link"}