{"product_id":"huttu-saavu-eradara-naduve-kannada-novel","title":"ಹುಟ್ಟು ಸಾವು ಎರಡರ ನಡುವೆ","description":"\u003cp data-path-to-node=\"3\"\u003eತಮ್ಮ ಮೂರನೇ ಕಾದಂಬರಿಯ ಮೂಲಕ ಮತ್ತೊಮ್ಮೆ ಓದುಗರನ್ನು ತಲುಪಲು ಹೊರಡುತ್ತಿರುವ ಬರಹಗಾರ ಪ್ರಮೋದ ಕರಣಂ, ಕನ್ನಡ ಭಾಷೆಯ ಸೊಗಡನ್ನು ಸೊಗಸಾಗಿ ಬಳಸಿಕೊಳ್ಳುವ ಕಲೆಗಾರರು. ಶಬ್ದ ಸಂಪತ್ತನ್ನು ಸಾಹಿತ್ಯದಲ್ಲಿ ಸಮರ್ಥವಾಗಿ ದುಡಿಸಿಕೊಳ್ಳುವುದು ಇವರ ಬರವಣಿಗೆಯ ಎದ್ದು ಕಾಣುವ ಅಂಶ. ಪ್ರಸ್ತುತ ಅವರ 'ಹುಟ್ಟು ಸಾವು ಎರಡರ ನಡುವೆ' ಎನ್ನುವ ಕೃತಿಯು ತನ್ನ ಶೀರ್ಷಿಕೆಯಿಂದಲೇ ಓದುಗರನ್ನು ಆಕರ್ಷಿಸುತ್ತದೆ. \"ಬದುಕಿನ ಮಧ್ಯದಲ್ಲಿ ಏನಿದೆ?\" ಎಂದು ನಮ್ಮನ್ನೆಲ್ಲಾ ಕೇಳುವಂತೆ ಅಗಾಧವಾದ ವಸ್ತು ವಿನ್ಯಾಸದೊಂದಿಗೆ ಈ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ.\u003c\/p\u003e\n\u003cp data-path-to-node=\"4\"\u003eಮೂಲತಃ ಸಂಬಂಧಗಳ ವರ್ಣನೆ ಮತ್ತು ಭಾವನಾತ್ಮಕ ಸಂಪರ್ಕ ತಂತುವೇ ಇವರ ಬರಹಗಳ ಜೀವಾಳ. ಪ್ರಮೋದ ಕರಣಂ ಅವರ ನಿರಂತರವಾದ ಬರಹದ ಶೈಲಿಯು ಓದುಗರನ್ನು ಸತತ ಓದಿಗೆ ಪ್ರೇರೇಪಿಸುತ್ತದೆ. ಕಥಾವಸ್ತುವಿನ ನಿರೂಪಣೆ ಮತ್ತು ತಾಂತ್ರಿಕತೆಯ ಕಾರಣದಿಂದ ಓದು ಸರಾಗವಾಗಿ ಸಾಗುತ್ತದೆ.\u003c\/p\u003e\n\u003cp data-path-to-node=\"5\"\u003eಇನ್ನಿಷ್ಟು ವೈಜ್ಞಾನಿಕ ಕಥಾ ಮಾದರಿಯ ಕುಸುರಿ ಕೆಲಸವನ್ನು ಮೈಗೂಡಿಸಿಕೊಂಡರೆ ಇನ್ನೂ ಅದ್ಭುತವಾಗುವ ಅವಕಾಶವಿದ್ದ ಈ ಕಾದಂಬರಿ, ಓದುಗರನ್ನು ಸೆಳೆಯುವಲ್ಲಿ ಖಂಡಿತಾ ಹಿಂದುಳಿಯಲಾರದು. ಪ್ರಬುದ್ಧತೆ ಮತ್ತು ಮೌಲ್ಯದ ದೃಷ್ಟಿಯಿಂದಲೂ 'ಹುಟ್ಟು ಸಾವು ಎರಡರ ನಡುವೆ' ಕಾದಂಬರಿ ಸಹಜವಾಗಿ ಓದುಗರನ್ನು ಆಕರ್ಷಿಸುತ್ತದೆ. ವಿಭಿನ್ನ ಕಥಾವಸ್ತುವಿನೊಂದಿಗೆ ಅಧ್ಯಯನಪೂರ್ಣ ಮಾಹಿತಿಯನ್ನು ಓದುಗರ ಮುಂದಿಟ್ಟಿರುವ ಲೇಖಕರು, ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನಿಷ್ಟು ಮಹತ್ವದ ಕೊಡುಗೆಗಳನ್ನು ನೀಡಲಿ ಎಂದು ಹಾರೈಸುತ್ತೇನೆ.\u003c\/p\u003e\n\u003cp data-path-to-node=\"6\"\u003e\u003cstrong\u003e— ಸಂತೋಷಕುಮಾರ ಮೆಹೆಂದಳೆ, ಖ್ಯಾತ ಕಾದಂಬರಿಕಾರರು\u003c\/strong\u003e\u003c\/p\u003e","brand":"Pramoda Karanam","offers":[{"title":"Default Title","offer_id":47840334184707,"sku":"HB0000619242","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsApp_Image_2026-03-14_at_11.32.13_AM_1.jpg?v=1773469926","url":"https:\/\/harivubooks.com\/products\/huttu-saavu-eradara-naduve-kannada-novel","provider":"Harivu Books","version":"1.0","type":"link"}